ಹಾವೇರಿ ಜಿಲ್ಲೆಯ ಶಿಗ್ಗಾವಿ ಪುರಸಭೆಯಿಂದ ನಗರದ ಕೆಲವು ವಾರ್ಡ್ ಗಳಲ್ಲಿ ಕೆಲವು ವಾರಗಳಿಂದ ಕುಡಿಯುವ ನೀರಿನ ಬದಲು ಕಬ್ಬಿನ ಹಾಲು ಸರಬರಾಜು ಮಾಡುತ್ತಿದ್ದಾರೆಯೇ ಎಂದು ಜನತೆ ಮಾತನಾಡಿಕೊಳ್ಳುತ್ತಿದ್ದಾರೆ.
ಅದೇನು ಎಂದು ವಿಚಾರಿಸಿದಾಗ ಕಬ್ಬಿನ ಹಾಲು ಬಣ್ಣವನ್ನು ಹೋಲುವಂತ ಕೊಳಕು ನೀರನ್ನು ಬಿಡಲಾಗುತ್ತಿದೆ.ಸಾರ್ ನಮ್ಮ ವಾರ್ಡಿನಲ್ಲಿ ಕೊಳಕು ನೀರು ಬರುತ್ತಿದೆ ಎಂದು ಪುರಸಭೆ ಅಧಿಕಾರಿಗಳನ್ನು ಕೇಳಿದರೆ ಅವರಿಂದ ಬರುವ ಉತ್ತರ ಒಂದೇ “ಭೇಟಿ ನೀಡುತ್ತೇವೆ” ಎಂದು ಸಾರ್ವಜನಿಕರು ತಿಳಿಸಿದ್ದಾರೆ.
ಪುರಸಭೆಯಿಂದ ಕುಡಿಯುವ ನೀರು ಸರಬರಾಜು ಮಾಡಲು ಕೋಟಿ ಕೋಟಿ ಹಣ ಖರ್ಚಾಗುತ್ತಿದೆ.ಆದರೆ ಅಧಿಕಾರಿಗಳು ಮಾತ್ರ ಜನರಿಗೆ ಕೊಳಕು ನೀರು ಕುಡಿಸುತ್ತಿದ್ದಾರೆ.ಆ ಹಣ ಎಲ್ಲಿ ಹೋಗುತ್ತಿದೆ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುವಂತಾಗಿದೆ.
ಮೊನ್ನೆಸಾರ್ವಜನಿಕರೊಬ್ಬರು ಮುಖ್ಯಾಧಿಕಾರಿಗಳಿಗೆ ಕೊಳಕು ನೀರು ಬರುತ್ತಿದೆ ಎಂದು ಕರೆ ಮಾಡಿದರೆ ಅದನ್ನೆ ಕುಡೀರಿ ಏನೂ ಆಗುವದಿಲ್ಲ ಎಂದು ಹೇಳಿದ್ದಾರಂತೆ.ಎಲ್ಲಿಗೆ ಬಂದಿದೆ ಶಿಗ್ಗಾಂವಿ ಪರಿಸ್ಥಿತಿ. ಪುರಸಭೆ ಅಧಿಕಾರಿಗಳು ಸಾರ್ವಜನಿಕರ ಆರೋಗ್ಯದ ಜೊತೆ ಚೆಲ್ಲಾಟ ಆಡುತ್ತಿದ್ದಾರೆ ಎಂಬ ಅನುಮಾನಗಳು ಮೂಡುತ್ತಿವೆ,ಪುರಸಭೆ ಅಧಿಕಾರಿಗಳು ಡಿಸಿಯವರಿಗೆ ಎರಡು ದಿನಗಳಿಗೊಮ್ಮೆ ನೀರು ಬಿಡುತ್ತೇವೆ ಎಂದು ಪತ್ರ ಬರೆದವರು ಯಾಕೆ ವಾರಕ್ಕೊಮ್ಮೆ ನೀರು ಬಿಡುತ್ತಿದ್ದಾರೆ ಎಂದು ಸಾರ್ವಜನಿಕರು ತಮ್ಮ ತಮ್ಮಲ್ಲೇ ಪ್ರಶ್ನೆ ಮಾಡಿಕೊಳ್ಳುತ್ತಿದ್ದಾರೆ.
ಸಾರ್ವಜನಿಕರ ಗೋಳು ಒಂದು ಕಡೆಯಾದರೆ ಬಿರು ಬೇಸಿಗೆಯಲ್ಲಿ ಇಂತಹ ನೀರನ್ನು ಕುಡಿಯಬೇಕು ಅಧಿಕಾರಿಗಳೇ ಇಂತ ನೀರನ್ನು ನೀವೇ ಕುಡಿದರೆ ಹೇಗೆ ಇರುತ್ತೆ?ಅಧಿಕಾರಿಗಳ ದುರ್ನಡತೆ ಸಾರ್ವಜನಿಕರ ಆಕ್ರೋಶಕ್ಕೆ ಎಡೆ ಮಾಡಿಕೊಟ್ಟಿದೆ.ಅಧಿಕಾರಿಗಳೇ ಎಚ್ಚೆತ್ತುಕೊಳ್ಳಿ ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಇದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ.
ಶಾಸಕರೇ ಜನರ ಸಮಸ್ಯೆಗಳನ್ನು ಕೇಳಿ..!
ಐತಿಹಾಸಿಕ ಪ್ರಸಿದ್ಧವಾದ ಕ್ಷೇತ್ರದ ಜನರಿಗೆ ಶುದ್ಧ ಕುಡಿಯುವ ನೀರು ಇಲ್ಲದಿರುವುದು ಬಿಜೆಪಿ ಅಧಿಕಾರದಲ್ಲಿ 24/7 ಶುದ್ಧ ಕುಡಿಯುವ ನೀರಿನ ಯೋಜನೆಯನ್ನು ತಂದರು.ಮಾಜಿ ಮುಖ್ಯಮಂತ್ರಿ ಹಾಗೂ ಶಿಗ್ಗಾಂವಿ ಕ್ಷೇತ್ರದ ಶಾಸಕರಾದ ಬಸವರಾಜ್ ಬೊಮ್ಮಾಯಿ ಅವರು ತಮ್ಮ ಕ್ಷೇತ್ರದ ಜನರಿಗೆ ಕೊಳಕು ನೀರು ಕುಡಿಸುತ್ತಿರುವುದು ಎಷ್ಟರಮಟ್ಟಿಗೆ ಸರಿ? ಇಂತಹ ಅಧಿಕಾರಿಗಳ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳಬೇಕು.ಜನರಿಗೆ ಶುದ್ದ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಶಾಸಕರು ತಮ್ಮ ಕ್ಷೇತ್ರದ ಕಾರ್ಯಗಳನ್ನು ಮಾಡದೆ ಹುಬ್ಬಳ್ಳಿ ಮತ್ತು ಬೆಂಗಳೂರಿನಲ್ಲಿ ವಾಸ್ತವ್ಯ ಹೂಡಿದ್ದಾರೆ.ಒಂದು ಕಡೆ ಸಾರ್ವಜನಿಕರಿಗೆ ಸ್ಪಂದನೆ ಮಾಡಬೇಕಾದ ಅಧಿಕಾರಿಗಳು ಅದೇ ನೀರನ್ನು ಕುಡಿಯಿರಿ ಎಂದು ಹೇಳುತ್ತಾರೆ ಇತ್ತ ಶಾಸಕರು ಕ್ಷೇತ್ರದ ಜನರ ಸಮಸ್ಯೆಗಳನ್ನು ಕೇಳದೆ ಇರೋದು ವಿಪರ್ಯಾಸವಲ್ಲವೇ?
ವರದಿಗಾರ ಮಂಜುನಾಥ ಪಾಟೀಲ