ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಶಿರಗೂರ ಗ್ರಾಮದಲ್ಲಿ ಶನಿವಾರ ಸಾಯಂಕಾಲ ಸುರಿದ ಮಳೆ ಎಂದಿನಂತೆ ಬಿರುಗಾಳಿ ಇಲ್ಲದಿದ್ದರಿಂದ ಸಾಕಷ್ಟು ಅನಾಹುತ ತಪ್ಪಿದೆ ಎರಡು ಗಂಟೆ ಕಾಲ ಸುರಿದ ಧಾರಾಕಾರ ಮಳೆಯೂ ಭೂಮಿಯನ್ನು ತಂಪಾಗಿಸಿ ರೈತರ ಮುಖದಲ್ಲಿ ಹರ್ಷ ಮೂಡಿಸಿದೆ ವಾರದ ಅಂತರದಲ್ಲಿ ಎರಡು ಮೂರು ಬಾರಿ ಬಿದ್ದ ಮಳೆಯು ಕೃಷಿ ಚಟುವಟಿಕೆಗೆ ಹೇಳಿ ಮಾಡಿಸಿದಂತಿದ್ದು
ಆದರೆ ಸಿಡಿಲು ಪಡೆದು ಗಂಭೀರವಾದ ಗಾಯಗಳನ್ನು ಉಂಟು ಮಾಡಬಹುದು ಮತ್ತು ಹೆಚ್ಚಿನ ವೋಲ್ವೇಜ್ ಮತ್ತು ಪ್ರಸ್ತುತ ಒಳಗೊಂಡಿರುವ ಕಾರಣದಿಂದಾಗಿ ಸಾವು ಕೂಡಾ ಸಂಭವಿಸಬಹುದು ಆದರೆ ಇಲ್ಲಿ ಯಾವುದೇ ರೀತಿಯಾದ ಸಿಡಿಲಿನಿಂದ ಸಮಸ್ಯೆಯಾಗಿಲ್ಲ.
ಶಂಕ್ರಪ್ಪ ರೇವಪ್ಪ ಪಟ್ಯೆ ಸಹ ಕುಟುಂಬದವರು ಸುಮಾರು ವರ್ಷಗಳಿಂದ ತಮ್ಮ ಸ್ವಂತ ಭೂಮಿಯಲ್ಲಿ ವಾಸ ಮಾಡುತ್ತಿದ್ದಾರೆ ಮನೆಯ ಹತ್ತಿರದಲ್ಲಿ ಒಂದು ತೆಂಗಿನ ಮರದ ಮೇಲೆ ಸಿಡಿಲು ಬಿದ್ದಿದ್ದು ದೃಶ್ಯವನ್ನು ನೋಡಿ ಮಳೆ ಬರುತ್ತಿರುವುದನ್ನು ಕಂಡು ಒಳಗೆ ಸೇರಿದ್ದರಿಂದ ಸಿಡಿಲು ಬಡಿತದಿಂದ ಪಾರಾಗಿ ಜೀವ ಉಳಿಸಿಕೊಂಡಿದ್ದಾರೆ ಅದೇ ಸಮಯದಲ್ಲಿ ಗ್ರಾಮಸ್ಥರೆಲ್ಲರೂ ಸೇರಿಕೊಂಡು ಹೋಗಿ ಆದ ಘಟನೆ ಬಗ್ಗೆ ವಿಚಾರಣೆ ಮಾಡಿದಾಗ ಕುಟುಂಬದವರ ಮೇಲೆ ಹಾಗೂ ಜಾನುವಾರುಗಳ ಮೇಲೆ ಯಾವುದೇ ಕಾರಣಕ್ಕೂ ತೊಂದರೆಗಳು ಸಂಭವಿಸಿಲ್ಲವೆಂದು ಗ್ರಾಮಸ್ಥರು ಹೇಳಿದ್ದಾರೆ.
ವರದಿ:ಚಂದ್ರಶಾಗೌಡ ಮಾಲಿ ಪಾಟೀಲ್