ವಿಜಯಪುರ ಜಿಲ್ಲೆಯ ತಾಳಿಕೋಟಿ ತಾಲೂಕಿನ ಹಿರೂರ ಗ್ರಾಮದಲ್ಲಿ ಪ್ರತಿ ಮೂರು ವರ್ಷದ ಪದ್ದತಿಯಂತೆ ಈ ವರ್ಷವೂ
ಶ್ರೀ ಗ್ರಾಮ ದೇವಿ ಜಾತ್ರಾ ಮಹೋತ್ಸವವು ವಿಜೃಂಭಣೆಯಿಂದ ನಡೆಯಿತು ದೇವಿಯ ಜಾತ್ರೆ ನಿಮಿತ್ತವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ದಿನಾಂಕ 06-05-2024ರಂದು ಬೆಳಗಿನ ಜಾವ 04:30ಕ್ಕೆ ದೇವಿ ರಥ ಏರುವ ಕಾರ್ಯಕ್ರಮ ನಡೆಯಿತು
ಸತತ 4ದಿನಗಳ ಕಾಲ ವಿವಿಧ ಕಾರ್ಯಕ್ರಮ ಜರುಗಿದವು
ಶ್ರೀ ವೀರೇಶ್ವರ ನಾಟ್ಯ ಸಂಘ ಸಿದ್ದು ನಾಲತವಾಡ ಇವರಿಂದ “ಮಗ ಹೋದರು ಮಾಂಗಲ್ಯ ಬೇಕು” ಎಂಬ ಸುಂದರ ಸಾಮಾಜಿಕ ನಾಟಕ
ಹಾಗೂ ಶ್ರೀ ರೇಣುಕಾ ಯಲ್ಲಮ್ಮ ಬಯಲಾಟ ಸಂಗಣ್ಣ ಮಾದನಶೆಟ್ಟಿ ಬಾ ಬಾಗೇವಾಡಿ ಸಂಘಡಿಗರಿಂದ ಜರುಗಿತು.ಕಲಾ ಸಿಂಚನ ಮುದ್ದೆಬಿಹಾಳ ತಂಡದಿಂದ ರಸಮಂಜರಿ ಕಾರ್ಯಕ್ರಮ
ಹಾಗೂ ಶ್ರೀ ದೇವಿ ಮಹಾತ್ಮೆ ಅರ್ಥಾತ್ ಶುಂಭ ನಿಶುಂಭರ ಮರ್ಧನ
ಹಾಗೂ 10-05-2024 ರಂದೂ ಬೆಳಿಗ್ಗೆ 7:30ಕ್ಕೆ ಊರಿನ ಪ್ರಮುಖ ಬೀದಿಗಳಲ್ಲಿ ಸಕಲ ವಾದ್ಯಗಳೊಂದಿಗೆ ಶ್ರೀ ಗ್ರಾಮ ದೇವಿಯ ರಥೋತ್ಸವ ವಿಜೃಂಭಣೆಯಿಂದ ನಡೆಯಿತು ಊರಿನ ಗುರು ಹಿರಿಯರು ಎಲ್ಲಾ ಸಂಘದ ಸದಸ್ಯರು ಹಾಗೂ ತಾಯಂದಿರು ಯುವಕ ಮಿತ್ರರು ಹಾಗೂ ಹಿರೂರ ತಮದಡ್ಡಿ ಚೋಕಾವಿ ಹಾಗೂ ಸುತ್ತ ಮುತ್ತಲಿನ ಗ್ರಾಮಸ್ಥರು ಬಂದು ಶ್ರೀ ಗ್ರಾಮ ದೇವಿ ಕೃಪೆಗೆ ಪಾತ್ರರಾದರು.
ವರದಿ:ಉಸ್ಮಾನ ಬಾಗವಾನ