ರಾಯಚೂರು ಜಿಲ್ಲೆಯ ದೇವದುರ್ಗದ ಗುರುಬಸವ ದೇವರ ಅರುವಿನ ಮನೆಯಲ್ಲಿ 15ಜೋಡಿಗಳ ಕಲ್ಯಾಣ ಮಹೋತ್ಸವದಲ್ಲಿ ಸಾನಿದ್ಯ ವಹಿಸಿ ಮಾತನಾಡುತ್ತಾ ಆಡಂಬರದ ಜೀವನಕ್ಕೆ ಮಾರುಹೋಗಿ ಸಾಲ ಸೂಲ ಮಾಡಿಕೊಂಡು ಯಾಕೆ ಮದುವೆ ಮಾಡಿಕೊಳ್ಳಬೇಕು?ಸಾಮೂಹಿಕ ಮದುವೆ ಸಮಾರಂಭಗಳಲ್ಲಿ ಮದುವೆ ಮಾಡಿಕೊಂಡು ಪತಿ ಪತ್ನಿ ಇಬ್ಬರೂ ಒಬ್ಬರನೊಬ್ಬರು ಅರ್ಥ ಮಾಡಿಕೊಂಡು ಆದರ್ಶ ಜೀವನ ಸಾಗಿಸಬೇಕು ಎಂದು ಅರವಿನ ಮನೆಯ ಶ್ರೀ ಬಸವದೇವರು ನವ ದಂಪತಿಗಳಿಗೆ ಆಶೀರ್ವಾದ ಮಾಡುವುದರ ಮೂಲಕ ಮಾರ್ಗದರ್ಶನ ಮಾಡಿದರು.ನವ ಜೋಡಿಗಳು ಹೆತ್ತ ತಂದೆ ತಾಯಿಯವರ ಗೌರವ ತರುವಂತಹ ಕೆಲಸ ಮಾಡಬೇಕು ಬಸವಣ್ಣನವರ ಕಾಯಕವೇ ಕೈಲಾಸ ತತ್ವದಡಿಯಲ್ಲಿ ತಮ್ಮ ತಮ್ಮ ಕಾಯಕದಡಿಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಅವರು ಹೇಳಿದರು.
ವೇದಿಕೆ ಮೇಲಿದ್ದ ಜಿಲ್ಲಾ ಬಸವಕೇಂದ್ರದ ಅಧ್ಯಕ್ಷರಾದ ವೀರಭದ್ರಪ್ಪ ತಾಲೂಕು ಬಸವ ಕೇಂದ್ರದ ಅಧ್ಯಕ್ಷರಾದ ಸುಭಾಸ್ ಪಾಟೀಲ್ ನಿರ್ಮಲ ಪಾಟೀಲ್ ಬಸವರಾಜ್ ಯಾಟಗಲ್ ಟ್ರಸ್ಟ್ ಅಧ್ಯಕ್ಷರು ವೆಂಕಟರಾಯಗೌಡ ಬೆನಕನ್ ಡಾ ಬಸವರಡ್ಡಿ ಇತರರು ನವ ಜೋಡಿಗಳಿಗೆ ಆಶೀರ್ವಾದ ಮಾಡಿ ಹಾರೈಸಿದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.