ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ರಾಜ್ಯ ಮಟ್ಟದ ಸೇವಾಭೂಷಣ ಪ್ರಶಸ್ತಿಗೆ ಭಾಜನರಾದ ವೃಕ್ಷ ರಕ್ಷಕ ಅಮರೇಗೌಡ ಮಲ್ಲಾಪೂರ

ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಮುದಗಲ್ಲ ಸಮೀಪದ ಸುಕ್ಷೇತ್ರ ತಿಮ್ಮಾಪೂರ ಗ್ರಾಮದ ಶ್ರೀ ಮಹಾಂತೇಶ್ವರ ಮಠದಲ್ಲಿ ಮೇ 10 ರಿಂದ 16 ರವರೆಗೆ ನಡೆದಿರುವ ಜನಮನ ಕಲ್ಯಾಣ ಜಾತ್ರೆ 2024ರ ಶರಣ ಸಂಸ್ಕೃತಿಯ ಮೇಳ ಹಾಗೂ ವಚನ ಪಲ್ಲಕ್ಕಿ ಮಹೋತ್ಸವ ಕಾರ್ಯಕ್ರಮದಲ್ಲಿ ಪರಿಸರ ರಾಜ್ಯ ಪ್ರಶಸ್ತಿ ಪುರಸ್ಕೃತರು ಹಾಗೂ ವನಸಿರಿ ಫೌಂಡೇಶನ್ ಸಂಸ್ಥಾಪಕರಾದ ಅಮರೇಗೌಡ ಮಲ್ಲಾಪೂರ ಅವರು ವನಸಿರಿ ಫೌಂಡೇಶನ್ ಸ್ಥಾಪಿಸಿ ಪರಿಸರ ಪ್ರಜ್ಞೆಯನ್ನು ಜನಮಾನಸದಲ್ಲಿ ಬಿತ್ತುವುದರ ಮೂಲಕ ವೃಕ್ಷ ರಕ್ಷಕರಾಗಿ ಸಮರ್ಪಿತವಾದ ಸೇವಾ ಕೈಂಕರ್ಯದ ಅದ್ಭುತ ಸಾಧನೆಯನ್ನು ಗುರುತಿಸಿ ಕಲ್ಯಾಣಾಶ್ರಮದ ಜನಮನ ಕಲ್ಯಾಣ ಜಾತ್ರಾಮಹೋತ್ಸವ ಪುಣ್ಯಪರ್ವದಿ ದಿನಾಂಕ 15-05-2024ರಂದು ರಾಜ್ಯ ಮಟ್ಟದ “ಸೇವಾಭೂಷಣ” ಪ್ರಶಸ್ತಿಯನ್ನು ಅತ್ಯಂತ ಗೌರವ ಪೂರ್ವಕವಾಗಿ ಪ್ರಧಾನ ಮಾಡಲಾಯಿತು.ಇವರ ಜೊತೆಗೆ ಶರಣಬಸವ ಪಾಟೀಲ್ ವ್ಯಾಕರನಾಳ ಗೌರವ ಡಾಕ್ಟರೇಟ್ ಪ್ರಶಸ್ತಿ ಪುರಸ್ಕೃತರು,ರೋಹಿತ್ ಷಣ್ಮುಖಪ್ಪ ಮುದಗಲ್ ನಾಯಕನಟನಾಗಿ ರಕ್ತಾಕ್ಷ ಸಿನಿಮಾ ನಿರ್ಮಿಸಿದ ಖ್ಯಾತಿ,ಶ್ರೀ ವಿಜಯಕುಮಾರ ಗಣಾಚಾರಿ ಆಡಳಿತಾಧಿಕಾರಿಗಳು ಶ್ರೀ ಉಮಾಮಹೇಶ್ವರಿ ಕಾಲೇಜು ಲಿಂಗಸೂಗೂರು,ಶರಣಬಸವ ಪಟ್ಟೇದ ಕ್ಯಾಶುಟೇಕ್ ಆಡಳಿತ ಅಧಿಕಾರಿಗಳು ಶಕ್ತಿನಗರ ರಾಯಚೂರು, ಡಾ.ಶ್ರೀ ಶರಣಪ್ಪ ನಿವೃತ್ತ ಪಶುವೈದ್ಯಾಧಿಕಾರಿಗಳು ಮುದಗಲ್,ಶ್ರೀ ವಿಜಯಕುಮಾರ ಗುಡಿಹಾಳ ಶ್ರೀ ಗವಿಶಿದ್ದೇಶ್ವರ ರೈಸ್ ಮಿಲ್ ಸಿಂಧನೂರು ಇವರಿಗೂ ಕೂಡ ಶ್ರೀಮಠದ ವತಿಯಿಂದ ರಾಜ್ಯ ಮಟ್ಟದ ಸೇವಾ ಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಪೂಜ್ಯ ಶ್ರೀ ಮಹಾಂತಸ್ವಾಮೀಜಿ, ಮಾತೋಶ್ರೀ ವಚನ ಗೀತಮ್ಮ,ಮಸ್ಕಿ ಶಾಸಕರಾದ ಆರ್.ಬಸನಗೌಡ ತುರವಿಹಾಳ,ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಕಾಳಪ್ಪ ಬಡಿಗೇರ ಕಸಬಾಲಿಂಗಸೂಗೂರು ಹಾಗೂ ವನಸಿರಿ ಫೌಂಡೇಶನ್ ಸದಸ್ಯರಾದ ಅಮರಯ್ಯಸ್ವಾಮಿ ಪತ್ರಿಮಠ,ರಾಜು ಬಳಗಾನೂರ,ಗಿರಿಸ್ವಾಮಿ ಹೆಡಗಿನಾಳ ಹಾಗೂ ಅನೇಕ ಪರಪ ಪೂಜ್ಯರು,ಗಣ್ಯವ್ಯಕ್ತಿಗಳು, ತಿಮ್ಮಾಪೂರ ಗ್ರಾಮದ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ