ಶಿಗ್ಗಾಂವ:ಹುಬ್ಬಳ್ಳಿ ನಗರದಲ್ಲಿ ಅಂಜಲಿ ಅಂಬಿಗೇರ ಹತ್ಯೆಯನ್ನ ಖಂಡಿಸಿ ಪ್ರತಿಭಟನೆಯನ್ನು ಮಾಡಿ ಶಿಗ್ಗಾಂವ ತಾಲೂಕ ತಹಶೀಲ್ದಾರ್ ಇವರಿಗೆ ತಾಲೂಕ ಗಂಗಾಮತ ಸಮಾಜದ ವತಿಯಿಂದ ಮನವಿ ಸಲ್ಲಿಸಿದರು.
ಹತ್ಯೆಗೈದ ಆರೋಪಿಯನ್ನ ಬಂಧಿಸಿ ಗಲ್ಲು ಶಿಕ್ಷೆಯನ್ನು ವಿಧಿಸಬೇಕು ಮತ್ತು ಆ ಕುಟುಂಬಕ್ಕೆ 10 ಲಕ್ಷ ಪರಿಹಾರವನ್ನು ನೀಡಬೇಕೆಂದು ಆಗ್ರಹಿಸಿದರು ಮತ್ತು ರಾಜ್ಯದಲ್ಲಿ ಇಂಥ ಘಟನೆಗಳು ಇನ್ನೆಂದೂ ನಡೆಯದಂತೆ ಸರ್ಕಾರ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕೆಂದು ಸಮಾಜದ ಮುಖಂಡರು ಮನವಿ ಸಲ್ಲಿಸಿದರು.ಶಾಲೆ ಹಾಗೂ ಕಾಲೇಜುಗಳಲ್ಲಿ ಪೊಲೀಸ್ ಗಸ್ತು ಹಾಕಬೇಕು ಶಾಲೆ ಕಾಲೇಜಿನ ಆವರಣದಲ್ಲಿ ಸುತ್ತಲೂ ಪೊಲೀಸ್ ವರಿಷ್ಠಾಧಿಕಾರಿ ನಿಗಾ ವಹಿಸಬೇಕು ಹಾಗೂ ಸಿ ಸಿ ಕ್ಯಾಮೆರಾ ಅಳವಡಿಸಬೇಕೆಂದು ಆಗ್ರಹಿಸಿದರು.
ವರದಿಗಾರ ಮಂಜುನಾಥ ಪಾಟೀಲ