ಅವಳಿಗೆ ತುಂಬಾ ನಿರಾಸೆಯಾಗಿತ್ತು.ಗಂಡನೂ ತೊರೆದಿದ್ದ..ಕೈಯಲ್ಲಿದ್ದ ಕೆಲಸವೂ ಹೋಗಿತ್ತು.ರಾತ್ರಿ ತನ್ನ ಮನೆಯ ಟೆರೇಸ್ ಮೇಲೆ ಬಂದು ನಿಂತು ಮೋಡದಿಂದ ಕಪ್ಪಾದ ಆಗಸವನ್ನೆ ನೋಡುತ್ತಿದ್ದಳು ನೋವಿನಿಂದ..ಆ ಮೋಡವನ್ನು ಸರಿಸಿ ಹೊರಬರಲು ಚಂದ್ರ ಪ್ರಯತ್ನಿಸಿ ಸೋತು,ಕೊನೆಗೂ ಮೋಡದ ಮರೆಯಿಂದ ಹೊರ ಬಂದ. ಅದನ್ನು ನೋಡುತ್ತಿದ್ದವಳಿಗೆ ಹೊಸದೊಂದು ಆಶಾಕಿರಣ ಮೂಡಿತ್ತು..!
✍🏻ಮನು ಎಸ್ ವೈದ್ಯ