ಬೀದರ ಜಿಲ್ಲಾ ಮೆಥೋಡಿಸ್ಟ್ ಕ್ರೈಸ್ತ ವಾರ್ಷಿಕ ಜಾತ್ರೆಯು ದೇವರ ಕೃಪೆಯಿಂದ ಪ್ರತಿ ವರ್ಷ ಅದ್ಭುತವಾಗಿ ಬೆಳೆಯುತ್ತಿದ್ದು,ಈ ವರ್ಷವೂ ಸಹ ಮೇ 17 ರಿಂದ 19 ರ ವರೆಗೆ ಅದ್ಧೂರಿಯಿಂದ ಆಚರಿಸಲಾಗುತ್ತಿದೆ.ಈ ವರ್ಷದ ಜಾತ್ರೆಯಲ್ಲಿ ಭಕ್ತಿ ಸಂಜೀವನ ಕೂಟಗಳು ಹಾಗೂ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಸಡಗರ ಸಂಭ್ರಮದಿಂದ ದೈವ ಸಂದೇಶಗಳು ಮತ್ತು ಸರ್ವರ ಮನ ಸೆಳೆಯುವ ಸುಮಧುರ ಸಂಗೀತ,ಭಕ್ತಿ ಭಜನೆ ಹಾಡುಗಳು ಆಲಿಸಿ ಆನಂದ ಅನುಭವಿಸಲು ಇದೊಂದು ದಿವ್ಯ ಸದಾವಕಾಶವಾಗಿದೆ.ಈ ಕಾರ್ಯಕ್ರಮದಲ್ಲಿ ಸನ್ಮಾನ್ಯ ಬಿಷಪ್ ಎನ್.ಎಲ್. ಕರ್ಕರೆ ಮತ್ತು ಘನ ಎನ್.ಎ.ಪೌಲ್ ಬೆಂಗಳೂರು ಇವರು ದಾರ್ಶನಿಕ ವಿಶೇಷ ಸಂದೇಶಕರಾಗಿ ಆಗಮಿಸಲಿದ್ದಾರೆ.
ಕಾರ್ಯಕ್ರಮದ ವಿವರ:ಮೇ 17 ಶುಕ್ರವಾರದಂದು ಮುಂಜಾನೆ 10 ಗಂಟೆಗೆ ದೈವಾರಾಧನೆ ಮತ್ತು ಭಜನ ಸ್ಪರ್ಧೆ ಬೀದರ ದಕ್ಷಿಣ ಸಭೆಯವರಿಂದ ಸ್ಪರ್ಧೆ ಹಾಡುಗಳು,ಸಂಗೀತ,ಕೀರ್ತನೆ,ಘನ ಡಾ.ಜೆ.ಟಿ. ಸೀಮಂಡ್ಸ್ ರವರ ಸ್ವರಜಿತ ಭಕ್ತಿ ಸಂಭ್ರಮದಿಂದ, ಒಂದು ಭಜನೆ ಹಾಡು ಹಾಗೂ ಎರಡನೇ ಅವಧಿಯ ದೈವಾರಾಧನೆ,ಸಾಯಂಕಾಲ 7 ಗಂಟೆಗೆ ದೈವಾರಾಧನೆ ಮತ್ತು ಮೆರವಣಿಗೆ ಸಾಯಂಕಾಲ 6.00 ಗಂಟೆಯಿಂದ ವಿವಿಧ ಏರಿಯಾಗಳಿಂದ ಆಗಮನ (ಸೇಂಟ್ ಪೌಲ್ ಮೆಥೋಡಿಸ್ಟ್ ಕೇಂದ್ರ ಸಭೆ ಮಂಗಲಪೇಟ್ ಬೀದರನಲ್ಲಿ ಮುಕ್ತಾಯಗೊಳ್ಳುತ್ತದೆ
ಮೇ 18 ಶನಿವಾರದಂದು ಮುಂಜಾನೆ 10 ಗಂಟೆಗೆ ದೈವಾರಾಧನೆ,ಭಜನಾ ಸ್ಪರ್ಧೆ ಬೀದರ ಉತ್ತರ ಸಭೆಯವರಿಂದ,ಸಾಯಂಕಾಲ 4 ರಿಂದ 6 ಗಂಟೆಯವರೆಗೆ ಆಟೋಟಸ್ಫರ್ಧೆಗಳು, ಸಾಯಂಕಾಲ 8 ರಿಂದ ಭಾನುವಾರ ಬೆಳಿಗ್ಗೆ 6 ರ ವರೆಗೆ ಸರಪಳಿ ಪ್ರಾರ್ಥನೆ.ಸಾಯಂಕಾಲ 6 ರಿಂದ ರಾತ್ರಿ 9 ರ ವರೆಗೆ ಕೋರಿಯಾ ತಂಡದವರಿಂದ ಕಂಟಾಟ ನಾಟಕ ಪ್ರದರ್ಶನ.ರಾತ್ರಿ 9 ರಿಂದ 10 ರ ವರೆಗೆ ಚಲನಚಿತ್ರ ಪ್ರದರ್ಶನ (ಕರುಣಮೈಡು ಹಾಗೂ ಮೋಶೆ ಚರಿತ್ರೆ).
ಮೇ 19 ಭಾನುವಾರದಂದು ಸೂರ್ಯೋದಯ ಆರಾಧನೆ ಮರ್ಜಾಪೂರ ಗವಿಯಲ್ಲಿ ಸಮಯ ಪ್ರಾತ: ಕಾಲ 5 ರಿಂದ 8 ರ ವರೆಗೆ,ಬೆಳಿಗ್ಗೆ 10 ರಿಂದ 1.30 ರ ವರೆಗೆ ದೈವಾರಾಧನೆ ಮತ್ತು ಹರಕೆ ಕಾಣಿಕೆಗಳ ಸ್ವೀಕಾರ,ಬಹುಮಾನ ವಿತರಣೆ,ಹರಾಜು ಮತ್ತು ದೈವಾಶೀರ್ವಾದ ಕಾರ್ಯಕ್ರಮ ನಡೆಯಲಿದೆ.
ಆದ್ದರಿಂದ ಸದರಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶಿರ್ವಾದ ಪಡೆದುಕೊಂಡು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಸಂಜುಕುಮಾರ ಡಾಕುಳಗಿ ಪತ್ರಿಕಾ ಪ್ರಕಟಣೆ ಮುಖಾಂತರ ಮನವಿ ಮಾಡಿಕೊಂಡಿದ್ದಾರೆ.
ವರದಿ:ರೋಹನ್ ವಾಘಮಾರೆ