ಗದಗ ಜಿಲ್ಲೆಯ ರೋಣ ತಾಲೂಕಿನ ಬೆಳವಣಿಕಿ ಗ್ರಾಮದ ಅಕ್ಕಮಹಾದೇವಿ ದೇವಸ್ಥಾನದಲ್ಲಿ ದಿ.೨೪-೦೫-೨೦೨೪ ರಂದು ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಗ್ರಾಮ ಪಂಚಾಯತಿ ಸಹಯೋಗದೊಂದಿಗೆ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಗ್ರಾಮದ ಸುಮಾರು ೩೦ ಜನ ಉತ್ಸಾಹಿ ಯುವಕರು ಹಾಗೂ ಗದಗ ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ಸಿಬ್ಬಂದಿಯಿಂದ ರಕ್ತದಾನ ನಡೆಯಿತು. ವೈದ್ಯಾಧಿಕಾರಿಗಳಾದ ಡಾ.ಮಹೇಶ ಪಾಟೀಲ,ಎಸ್.ಬಿ.ಪಾಟೀಲ,ಡಿ.ವೆಂಕಟೇಶ, ವಿರುಪಾಕ್ಷಯ್ಯ ಹಿರೇಮಠ,ಲಾವಣ್ಯ ಜಿಮ್ಸ್ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.ಗ್ರಾಮ ಪಂಚಾಯತಿ ಅಧ್ಯಕ್ಷರಾದ ಪ್ರವೀಣ ಮಾಡಳ್ಳಿ,ಸದಸ್ಯ ನಶೀರಅಹ್ಮದ ಜಾನಖಾನವರ,ಮಲ್ಲಣ್ಣ ದಾದ್ಮಿ,ನಿಂಗರಾಜ ತಾಳಿ,ಬಸನಗೌಡ ಪಾಟೀಲ, ಗಣೇಶ ಜಕ್ಕನೂರ,ಪುಟ್ಟರಾಜ ಹಿರೇಮಠ,ಮುತ್ತು ಕುಂಬಾರ,ದಿನೇಶ ನಾಗನೂರ,ಮಲ್ಲಣ್ಣ ಸಜ್ಜನರ, ಲಚ್ಚಪ್ಪ ಚಿಕ್ಕರಡ್ಡಿ,ಪ್ರದೀಪ ಪವಾರ,ಮಂಜುನಾಥ ಕರ್ಕಿಕಟ್ಟಿ ಮುಂತಾದವರು ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ರಕ್ತದಾನ ಮಾಡಿದರು.
ವರದಿ ನಿಂಗರಾಜ ತಾಳಿ