ಹನೂರು:2023-2024 ಸಾಲಿನ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಹಾಗೂ 15ನೇ ಹಣಕಾಸು ಯೋಜನೆ ಗ್ರಾಮಸಭೆ ಏರ್ಪಡಿಸಲಾಯಿತು.
ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿಯ ಸ್ಮಾರಕ ಭವನದಲ್ಲಿ ಗ್ರಾಮ ಸಭೆಯನ್ನು ಆಯೋಜಿಸಲಾಯಿತು.
ಇದೇ ಸಂದರ್ಭದಲ್ಲಿ ಕಾಮಗಾರಿಯ ಖರ್ಚಿನ ವಿವರಣೆಯನ್ನು ಮಂಡಿಸಲಾಯಿತು.ಒಟ್ಟು ಕಾಮಗಾರಿ 162 ಮತ್ತು ಒಂದು ರೇಷ್ಮೆ ಕಾಮಗಾರಿ ಸೇರಿ 163 ನಡೆದಿದ್ದು 1,19,44,540 ಕೋಟಿ ರೂ ಕೂಲಿ ಹಣ ಮತ್ತು ಸಾಮಗ್ರಿ ಹಣ ಸೇರಿ ಖರ್ಚಾಗಿದೆ ಎಂದು ತಿಳಿಸಲಾಯಿತು.
ಪಿಡಿಓ ಕಿರಣ್ ಕುಮಾರ್ ಮಾತನಾಡಿ ಸಾರ್ವಜನಿಕರು ನರೇಗಾ ಯೋಜನೆಯಲ್ಲಿ ಕಾಮಗಾರಿ ಮಾಡಲು ಹೆಚ್ಚಿಸುವರು ತಮ್ಮ ಸೂಕ್ತ ದಾಖಲೆಯೊಂದಿಗೆ ಗ್ರಾಮ ಪಂಚಾಯತಿ ಕಚೇರಿಗೆ ಬಂದು ಪಿಡಿಒ ಅವರನ್ನು ಸಂಪರ್ಕಿಸಬೇಕು ನಮ್ಮ ಗ್ರಾಮ ಪಂಚಾಯಿತಿಯಲ್ಲಿ ನರೇಗಾ ಯೋಜನೆ ಅಡಿಯಲ್ಲಿ ನಡೆಯುವ ಕಾಮಗಾರಿ ಸೋಫಾ ಪಿಟ್ಟು,ಜಮೀನ್ ಮಟ್ಟ, ಶೌಚಾಲಯ ನಿರ್ಮಾಣ,ಚರಂಡಿ ನಿರ್ಮಾಣ, ಕಾಂಪೌಂಡ್ ನಿರ್ಮಾಣ,ಕಲ್ಪಿಚಿಂಗ್, ಸ್ಮಶಾನಾಭಿವೃದ್ಧಿ,ಕೆರೆ ಅಭಿವೃದ್ಧಿ,ರಿವಿಟ್ಮೆಂಟ,ಕೊಟ್ಟಿಗೆ ನಿರ್ಮಾಣ,ಚಿಕ್ಕ ಡ್ಯಾಮ್ ಹೂಳೆತ್ತುವುದು,ವೈಯಕ್ತಿಕ 5 ಮನೆ ನಿರ್ಮಾಣ ಸೇರಿ ಇನ್ನಿತರ ಕಾಮಗಾರಿಗಳು ಒಳಪಟ್ಟಿರುತ್ತವೆ.ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕೆಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ನರೇಗಾ ಯೋಜನೆ ಸಂಯೋಜಕ ಸಿದ್ದಪ್ಪ,ಗ್ರಾಮಸ್ತೆ ಗಂಗಮ್ಮ,ಪಿಡಿಒ ಕಿರಣ್ ಕುಮಾರ್, ಅಂಗನವಾಡಿ ಕಾರ್ಯಕರ್ತ ಆಶಾ ಕಾರ್ಯಕರ್ತೆಯರು,ಗ್ರಾಮಸ್ಥರು ಮುಖಂಡರು ಇದ್ದರು.
ವರದಿ ಉಸ್ಮಾನ್ ಖಾನ್