ಶಿವಮೊಗ್ಗ:ಸಂಘವು ಸದಸ್ಯರ ಅನುಕೂಲಕ್ಕಾಗಿ ಕೃಷ್ಣ ಸಹಕಾರಿ ಸಕ್ಕರೆ ಕಾರ್ಖಾನೆ ಅಥಣಿ ಇವರು ತಯಾರಿಸುತ್ತಿರುವ ಸಸ್ಯ ಚೈತನ್ಯ ಸಾವಯವ ಗೊಬ್ಬರವನ್ನು ತರಿಸಿ ಸದಸ್ಯರಿಗೆ ಮಾರಾಟ ಮಾಡುತ್ತಿದ್ದು,2020ನೇ ಸಾಲಿನಿಂದಲೂ ಪೂರೈಕೆ ಮಾಡುತ್ತಿದೆ.ಸದಸ್ಯರಿಂದಲೂ ಈ ಬಗೆಗೆ ಉತ್ತಮ ಪ್ರತಿಕ್ರಿಯ ಇರುತ್ತದೆ.ಇತ್ತೀಚಿಗೆ ಶಿರಸಿ ಭಾಗದ ಪತ್ರಿಕೆ ಒಂದರಲ್ಲಿ ಎಲೆ ಚುಕ್ಕಿ ಉಲ್ಬಣ ಸಮಸ್ಯೆಗೆ ಮೂಲ ಸಕ್ಕರೆ ಕಾರ್ಖಾನೆ ಪ್ಯಾಕೆಟ್ ಗೊಬ್ಬರ ? ಎಂಬ ಬಗ್ಗೆ ಬರಹ ಪ್ರಕಟಗೊಂಡಿದ್ದು ಇದನ್ನು ಮನಗಂಡ ಸಂಘವು ಕೂಡಲೇ ಸಂಶೋಧನಾ ನಿರ್ದೇಶಕರು, ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ,ಶಿವಮೊಗ್ಗ ಇವರಿಗೆ ಗೊಬ್ಬರದ ಮಾದರಿಯನ್ನು ಲ್ಯಾಬ್ ಪರೀಕ್ಷೆಗೆ ಒಳಪಡಿಸಿ ಎಲೆ ಚುಕ್ಕಿ ಉಲ್ಬಣ ಸಮಸ್ಯೆಗೆ ಕಾರಣವಾಗಿದೆಯೇ ಎಂಬುದಾಗಿ ಪರಿಶೀಲಿಸಲು ಪತ್ರ ಬರೆಯಲಾಗಿತ್ತು.
ಸಂಶೋಧನಾ ನಿರ್ದೇಶಕರು,ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿ ವಿಜ್ಞಾನಗಳ ವಿಶ್ವವಿದ್ಯಾಲಯ,ಶಿವಮೊಗ್ಗ ಇವರು ದಿನಾಂಕ:14/05/2024ರಂದು ಸಂಘಕ್ಕೆ ಬರೆದ ಪತ್ರದಲ್ಲಿ ಸಂಘದಿಂದ ವಿತರಿಸುತ್ತಿರುವ ಸಸ್ಯ ಚೈತನ್ಯ : ಗೊಬ್ಬರದಲ್ಲಿ ಗೊಬ್ಬರದಲ್ಲಿ (ಕೊಲ್ಲೆಟೋಟ್ರಿಕಮ್) ರೋಗಾಣುವಿನ ಇರುವಿಕೆ ಸಾಧ್ಯತೆಯನ್ನು ವಿಶ್ಲೇಷಿಸಿ ನೋಡಿದಾಗ,ಗೊಬ್ಬರದಲ್ಲಿ ಹಲವು ಬಗೆಯ ದುಂಡಾಣು ಮತ್ತು ಶೀಲೀಂದ್ರಗಳು ಕಂಡು ಬಂದಿದ್ದು, ಈ ದುಂಡಾಣು ಮತ್ತು ಶೀಲೀಂದ್ರಗಳನ್ನು ಸೂಕ್ಷ್ಮದರ್ಶಕದಡಿ ನೋಡಲಾಗಿ ಇವುಗಳಲ್ಲಿ ಅಡಿಕೆಯಲ್ಲಿ ಕಂಡು ಬರುವ ಎಲೆಚುಕ್ಕಿ ರೋಗದ ರೋಗಾಣು (ಕೋಲ್ಲೆಟೋಟ್ರಿಕಮ್) ಕಂಡು ಬಂದಿರುವುದಿಲ್ಲವೆಂದು ಧೃಡಪಟ್ಟಿರುತ್ತದೆ ಎಂಬ ವರದಿಯನ್ನು ನೀಡಿರುತ್ತಾರೆ.ವರದಿಯನ್ನು ಸಂಘವು ಸದಸ್ಯರ ಗಮನಕ್ಕೆ ತರಬಯಸುತ್ತದೆ. ಈ ವರದಿಯನ್ನು ಸಂಘವು ಪತ್ರಿಕಾ ಪ್ರಕಟಣೆ ಮುಖಾಂತರ ಸಂಘದ ಸದಸ್ಯರ ಗಮನಕ್ಕೆ ತರಬಯಸುತ್ತದೆ.
ವರದಿ:ಕೊಡಕ್ಕಲ್ ಶಿವಪ್ರಸಾದ್,ಶಿವಮೊಗ್ಗ