ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಹೊನ್ನರಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು.
ಈ ವರ್ಷ ಶಾಲಾ ಆವರಣದಲ್ಲಿ ಹತ್ತು ಸಸಿಗಳನ್ನು ನೆಟ್ಟು ಅವುಗಳನ್ನು ಪೋಷಿಸುವ ಜವಾಬ್ದಾರಿಯನ್ನು ಆಯ್ದ ಮಕ್ಕಳಿಗೆ ನೀಡಿ ಮಾರ್ಗದರ್ಶನ ನೀಡಲಾಯಿತು.
ಈ ಸಂದರ್ಭದಲ್ಲಿ ಮುಖ್ಯಗುರು ಎಂ.ಜಿ.ಬಡಿಗೇರ ಮಾತನಾಡುತ್ತಾ ಬಯಲು ಸೀಮೆಯ ನಮ್ಮ ಪ್ರದೇಶದಲ್ಲಿ ಮಳೆಯ ಪ್ರಮಾಣ ಕಡಿಮೆ. ಚಲಿಸುವ ಮೋಡಗಳನ್ನು ತಡೆದು ಮಳೆಯನ್ನು ಬರಿಸಲು ಕಾಡು, ಗಿಡ-ಮರ ಬಹಳ ಅವಶ್ಯಕ. ಆದ್ದರಿಂದ ಗಿಡ ನೆಟ್ಟು ಪರಿಸರವನ್ನು ಹಸಿರುಮಯಗೊಳಿಸಬೇಕು ಎಂದರು.
ಇನ್ನೋರ್ವ ಶಿಕ್ಷಕ ಮಹಾಂತೇಶ ವಂದಾಲಿ ಮಾತನಾಡುತ್ತಾ, ಮಕ್ಕಳು ತಮ್ಮ ಜನ್ಮದಿನವನ್ನು ಕೇಕ್ ಕತ್ತರಿಸಿ ಆಚರಿಸುವುದರ ಜೊತೆಗೆ ಪ್ರತಿವರ್ಷ ಒಂದೊಂದು ಗಿಡ ನೆಟ್ಟು ನಮ್ಮ ಪರಿಸರಕ್ಕೆ ಪೂರಕವಾಗಿ ಆಚರಿಸಬೇಕು ಎಂದು ಕರೆಕೊಟ್ಟರು.
ಈ ಸಂದರ್ಭದಲ್ಲಿ ಶಿಕ್ಷಕರಾದ ಅಶೋಕ ಬಳ್ಳಾ, ಸುಭಾಸ್ ಕಣಗಿ, ಎಸ್ ಎಸ್ ಲಾಯದಗುಂದಿ ಉಪಸ್ಥಿತರಿದ್ದರು.
