ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ವನಸಿರಿ ಫೌಂಡೇಶನ್ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ 10 ಸಾವಿರ ಸಸಿಗಳ ವಿತರಣೆ

ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಮಲ್ಲಾಪೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ವನಸಿರಿ ಫೌಂಡೇಶನ್ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಹಾಗೂ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು.
ಪರಿಸರ ರಾಜ್ಯ ಪ್ರಶಸ್ತಿ ಪುರಸ್ಕೃತರು ಹಾಗೂ ವನಸಿರಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರಾದ ಅಮರೇಗೌಡ ಮಲ್ಲಾಪೂರ,ಅರಣ್ಯ ಇಲಾಖೆಯ ಅಧಿಕಾರಿಗಳಾದ ರುದ್ರಮುನಿ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಾಳಾದ ಸೋಮಶೇಖರಗೌಡ ಪಾಟೀಲ್ ಅವರು ಸಸಿ ನೆಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಇದೇ ಸಂದರ್ಭದಲ್ಲಿ ಊರಿನ ಪ್ರಮುಖ ಬೀದಿಗಳಲ್ಲಿ ಡೊಳ್ಳುಗಳೊಂದಿಗೆ ಪರಿಸರ ಘೋಷಣೆಗಳನ್ನು ಕೂಗುತ್ತಾ ಜಾಥಾ ಕಾರ್ಯಕ್ರಮ ಮಾಡಲಾಯಿತು.ವನಸಿರಿ ಫೌಂಡೇಶನ್ ನಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಮಲ್ಲಾಪೂರ ಸರಕಾರಿ ಶಾಲೆಯಲ್ಲಿ 300 ಸಸಿಗಳನ್ನು ನೆಡಲಾಯಿತು. ಮತ್ತು ಇದೇ ಜೂನ್ 3 ಮತ್ತು 4ರಂದು ತಾಲೂಕಿನ ಎಲ್ಲಾ ಸರಕಾರಿ ಶಾಲೆಗಳನ್ನು ಹಸಿರುಮಯವಾಗಿಸಲು 10 ಸಾವಿರ ಸಸಿಗಳನ್ನು ಉಚಿತವಾಗಿ ನೀಡಲಾಯಿತು.

ಈ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸೋಮಶೇಖರಗೌಡ ಪಾಟೀಲ್ ಮಾತನಾಡಿ ನಮ್ಮ ಭೂಮಿಗೆ ರಕ್ಷಾ ಕವಚವಾಗಿರುವ ಓಝೋನ್ ಪದರು ಕರಗಿ ಬಹಳಷ್ಟು ಕ್ಲೋರೊಫ್ಲೋರೋ ಕಾರ್ಬನ್ ಬಿಡುಗಡೆಯಾಗುತ್ತಿದೆ. ಕ್ಲೋರೋಪ್ಲೋರೋ ಕೆಮಿಕಲ್ಸು ಓಝೋನ್ ಪರದೆಯ ಮೇಲೆ ಪರಿಣಾಮ ಬೀರಿ ಪರದೆಯನ್ನು ತೆಳ್ಳಗೆ ಮಾಡುತ್ತದೆ ಈ ಹಿನ್ನಲೆಯಲ್ಲಿ ಸೂರ್ಯನ ಕಿರಣಗಳು ಭೂಮಿಯ ಮೇಲೆ ಬೀಳುವುದರಿಂದ ವಾತಾವರಣದಲ್ಲಿ ಏರುಪೇರುಗಳು ಉಂಟಾಗುತ್ತಿವೆ.ಈಗೀನಿಂದಲೇ ಎಲ್ಲಾ ಸಾರ್ವಜನಿಕರು,ಜನಪ್ರತಿನಿಧಿಗಳು,ಶಾಲೆಯ ಶಿಕ್ಷಕರುಗಳು ಪರಿಸರದ ಬಗ್ಗೆ ಹೆಚ್ಚು ಕಾಳಜಿಯನ್ನು ಮಾಡಿದರೆ ಉತ್ತಮವಾಗಿ ಜೀವನವನ್ನು ಸಾಗಿಸಬಹುದಾಗಿದೆ ಈ ನಿಟ್ಟಿನಲ್ಲಿ ವನಸಿರಿ ಫೌಂಡೇಶನ್ ಅವರು ಅಮರೇಗೌಡ ಮಲ್ಲಾಪೂರ ಅಧ್ಯಕ್ಷತೆಯಲ್ಲಿ ಹಲವಾರು ಪರಿಸರ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ನಮ್ಮ ಇಡೀ ತಾಲೂಕಿಗೆ ಮಾದರಿಯಾಗಿದ್ದಾರೆ.ನಾವುಗಳೆಲ್ಲರೂ ಪರಿಸರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಮಾಡಬೇಕೆಂದರೆ ಮಗುವಿಗೆ ಒಂದರಂತೆ ಗಿಡಗಳನ್ನು ನೆಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಬೇಕೆಂದು ತಿಳಿಸಿದರು.

ನಂತರ ಅರಣ್ಯ ಅಧಿಕಾರಿ ರುದ್ರಮುನಿ ಮಾತನಾಡಿ ಪರಿಸರವನ್ನು ಉಳಿಸಿ ಬೆಳಬೇಕಾದರೆ ನಾವುಗಳೆಲ್ಲರೂ ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸಬೇಕು.ಪ್ಲಾಸ್ಟಿಕ್ ಬಳಕೆಯನ್ನು ನಮ್ಮ ಜೀವನವೇ ಹಾಳಾಗುತ್ತಿದೆ ನಮ್ಮನ್ನು ಸಂರಕ್ಷಣೆ ಮಾಡುವ ಪರಿಸರವೇ ನಮ್ಮಿಂದ ಹಾಳಾಗುತ್ತಿರುವುದು ಬಹಳ ನೋವಿನ ಸಂಗತಿ.ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡರೆ ನಮಗೆ ಉತ್ತಮ ಆರೋಗ್ಯ ದೊರೆಯುತ್ತದೆ ಸುತ್ತಲೂ ಒಳ್ಳೆಯ ಗಿಡಗಳನ್ನು ಬೆಳಬೇಕು ಶುದ್ಧವಾದ ಗಾಳಿ ದೊರೆಯುತ್ತದೆ ನಮ್ಮ ಇಲಾಖೆಯ ಜೊತೆಗೆ ಅಮರೇಗೌಡ ಮಲ್ಲಾಪೂರ ಅವರು ಕೂಡ ಇಂತಹ ಕಾರ್ಯಗಳನ್ನು ಮಾಡುತ್ತಿರುವುದು ಹೆಮ್ಮೆಯ ವಿಷಯ ಅವರ ಇಂತಹ ಕಾರ್ಯಗಳಿಗೆ ನಮ್ಮ ಇಲಾಖೆ ಸದಾಕಾಲ ಬೆಂಬಲ ಇರುತ್ತದೆ ಎಲ್ಲರಿಗೂ ವಿಶ್ವ ಪರಿಸರ ದಿನಾಚರಣೆಯ ಶುಭಾಷಯಗಳು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪರಿಸರ ರಾಜ್ಯ ಪ್ರಶಸ್ತಿ ಪುರಸ್ಕೃತರು ಹಾಗೂ ವನಸಿರಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಅಮರೇಗೌಡ ಮಲ್ಲಾಪೂರ, ಬಸವರಾಜ್ ನಿಟ್ಟೂರ್ ಗುತ್ತೇದಾರರು ಫೌಂಡೇಶನ್ ಸದಸ್ಯರಾದ ಶಂಕರಗೌಡ ಎಲೆಕೂಡ್ಲಿಗಿ,ಗಿರಿಸ್ವಾಮಿ ಹೆಡಿಗಿನಾಳ,DSP ದುರಗೇಶ,ಮಂಜುನಾಥ ಗಾಣಗೇರ,ಚನ್ನಬಸಯ್ಯ ಸ್ವಾಮಿ ಕಾರುಣ್ಯಾಶ್ರಮ,ರಾಜು ಪತ್ತಾರ ಬಳಗಾನೂರ, ಮುದಿಯಪ್ಪ ಹೊಸಳ್ಳಿ ಕ್ಯಾಂಪ್,ಚನ್ನಪ್ಪ ಕೆ.ಹೊಸಹಳ್ಳಿ, ಹುಸೇನ್ ಸಾಬ್ ಹೃದಯ ಸಂಗಮ ಲಿಂಗಸೂಗೂರು, ಅರಣ್ಯ ಇಲಾಖೆಯ ಅಧಿಕಾರಿ ಶ್ರೀಮತಿ ಮಲ್ಲಿಕಾ, ಬಸವರಾಜ ,ECO ಹನುಮಂತಪ್ಪ ಬಂಡಿ ಹೊಡ್ಡರ್, CRP ಶಣ್ಮುಖಗೌಡ, ಮುಖ್ಯ ಗುರುಗಳು ಅಮರೇಶ,ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕರು ಆದೇಶ ತಿಡಿಗೋಳ,ಮಲ್ಲಪ್ಪ ಬಸ್ಸಾಪೂರ,ರಾಜೇಶ ರಾಮರಡ್ಡಿ ಕ್ಯಾಂಪ್, ಅಮಿನುದ್ದೀನ್ ರೈತನಗರ ಕ್ಯಾಂಪ್, ಅಣ್ಣಪ್ಪ ಮುಖ್ಯ ಶಿಕ್ಷಕರು ಉರ್ದು GLP ತಿಪ್ಪನಟ್ಟಿ,ರಮೇಶ ಮುಖ್ಯ ಶಿಕ್ಷಕರುGHPS ತಿಪ್ಪನಟ್ಟಿ,ಬೀರಪ್ಪ ಶಂಭೋಜಿ, ಬಸಮ್ಮ ಹಿರೇಮಠ ಮುಖ್ಯ ಗುರುಗಳು,ಶರಣಬಸವ ಛಲವಾದಿ ಮಲ್ಲಾಪೂರ, ರಾಜು ಮಲ್ಲಾಪೂರ,ಸಿದ್ದಪ್ಪ ಮುಖ್ಯ ಗುರುಗಳು,ಶಾಲೆಯ ವಿದ್ಯಾರ್ಥಿಗಳು ಊರಿನ ಯುವಕರು ಹಿರಿಯರು ಭಾಗವಹಿಸಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ