ಬೆಂಗಳೂರು:ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಕಳೆದ 5 ವರ್ಷಗಳ ಹಿಂದೆ ಪ್ರಪ್ರಥಮ ಬಾರಿಗೆ ಪ್ರಾರಂಭಿಸಿ ಇವತ್ತು ನಾಡಿನ ಪ್ರತಿ ಮನ ಮನೆಗಳಲ್ಲಿಯೂ ಆಚರಣೆ ಮಾಡುವಂತ ಕೆಲಸ ಮಾಡಿದೆ.ಈ ವರ್ಷ ವಿಶೇಷವಾಗಿ ದೆಹಲಿಯಲ್ಲಿ ಆಚರಣೆ ಮಾಡಲು ನಿರ್ಧಾರ ತೆಗೆದುಕೊಳ್ಳುತ್ತಿರುವುದು ಖುಷಿ ವಿಚಾರ ಎಂದು ಹುಕ್ಕೇರಿ ಚಂದ್ರಶೇಖರ ಸ್ವಾಮೀಜಿಯವರು ತಿಳಿಸಿದರು.
ವಿಶ್ವಾದ್ಯಂತ ವೀರಭದ್ರೇಶ್ವರ ಜಯಂತ್ಯೋತ್ಸವ ಸಮಿತಿಯ ಪ್ರತಿನಿಧಿಗಳನ್ನು ಆಯ್ಕೆ ಮಾಡುವುದರ ಮೂಲಕ ಎಲ್ಲಾ ಭಾಗಗಳಲ್ಲಿ ಜಯಂತಿಯನ್ನು ಅದ್ದೂರಿಯಾಗಿ ಆಚರಣೆ ಮಾಡಲು ವ್ಯವಸ್ಥೆ ಮಾಡಿಕೊಳ್ಳಲಾಗುತ್ತದೆ ಎಂದು ಸಂಸ್ಥಾಪಕ ಅಧ್ಯಕ್ಷ ಪ್ರದೀಪ ಕಂಕಣವಾಡಿ ಹೇಳಿದರು
ಪ್ರತಿಯೊಂದು ಜಿಲ್ಲೆಗಳಲ್ಲಿ ಈ ವರ್ಷ ಶ್ರೀ ವೀರಭದ್ರೇಶ್ವರ ಜಯಂತ್ಯೋತ್ಸವ ಸಮಿತಿ ವತಿಯಿಂದ ಮಠಾಧೀಶರ ನೇತೃತ್ವದಲ್ಲಿ ಸಭೆ ಕರೆದು ವೀರಭದ್ರೇಶ್ವರ ಜಯಂತಿಯನ್ನು ಅದ್ದೂರಿಯಾಗಿ ಮಾಡಬೇಕೆಂದು ಕಲ್ಬುರ್ಗಿ ಜಿಲ್ಲೆಯ ಶ್ರೀನಿವಾಸ ಸರಡಗಿ ರೇವಣಸಿದ್ದ ಸ್ವಾಮೀಜಿಯವರು ತಿಳಿಸಿದರು.
ವೀರಭದ್ರೇಶ್ವರ ವೀರಶೈವ ಲಿಂಗಾಯತರ ಮೂಲ ಪುರುಷ ಆಗಿದ್ದು ನಾಡಿನ ಎಲ್ಲಾ ಮಠಾಧೀಶರು ಮತ್ತು ಸಮಸ್ತ ಭಕ್ತರೊಂದ ಪ್ರತಿ ವರ್ಷ ಅದ್ದೂರಿಯಾಗಿ ವೀರಭದ್ರೇಶ್ವರ ಜಯಂತ್ಯೋತ್ಸವ ಆಚರಣೆ ಮಾಡಲಾಗುತ್ತಿದೆ ಈ ವರ್ಷ ಇನ್ನೂ ಹೆಚ್ಚಿನ ಮಟ್ಟದಲ್ಲಿ ಸಂಘಟನಾತ್ಮಕವಾಗಿ ಜಯಂತಿ ಆಚರಣೆ ಮಾಡಲಾಗುವುದು ಎಂದು ಕಲ್ಯಾಣ ಸ್ವಾಮೀಜಿ ತಿಳಿಸಿದರು.
ವೀರಭದ್ರೇಶ್ವರ ಜಯಂತ್ಯೋತ್ಸವ ಸಮಿತಿ ರಾಷ್ಟ್ರದ ತುಂಬಾ ಸಂಘಟನೆ ಮಾಡುವುದು ನನ್ನ ಗುರಿ ಎಂದು ಶಿವಲಿಂಗ ಮುರುಗರಾಜೇಂದ್ರ ಸ್ವಾಮೀಜಿಯವರು ತಿಳಿಸಿದರು
ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಅಂಗ ಸಂಸ್ಥೆಯಾದ ಶ್ರೀ ವೀರಭದ್ರೇಶ್ವರ ಜಯಂತ್ಯೋತ್ಸವ ಸಮಿತಿಯ ರಾಷ್ಟ್ರೀಯ ಅಧ್ಯಕ್ಷರಾಗಿ ಬೆಳಗಾವಿ ಜಿಲ್ಲೆಯ ಭಾಗೋಜಿಕೊಪ್ಪದ ಶಿವಲಿಂಗಮುರಗರಾಜೇಂದ್ರ ಸ್ವಾಮೀಜಿಯವರನ್ನು ಆಯ್ಕೆ ಮಾಡಲಾಯಿತು. ರಾಷ್ಟ್ರೀಯ ಉಪಾಧ್ಯಕ್ಷರಾಗಿ ಕೊಡಗು ಜಿಲ್ಲೆಯ ಕಿರಿಕೊಡ್ಲಿ ಸದಾಸಿವ ಸ್ವಾಮೀಜಿ ಮತ್ತು ಪುಣ್ಯಕೋಟಿ ಜಗದೀಶ್ವರ ಸ್ವಾಮೀಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಶ್ರೀನಿವಾಸ ಸರಡಗಿ ರೇವಣಸಿದ್ದ ಸ್ವಾಮೀಜಿ, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾಗಿ ತಾವರೆಕೆರೆ ಅಭಿನವ ಸಿದ್ಧಲಿಂಗ ಸ್ವಾಮೀಜಿ ಆಯ್ಕೆ ಮಾಡಲಾಯಿತು,
ಕರ್ನಾಟಕ ರಾಜ್ಯಾಧ್ಯಕ್ಷರಾಗಿ ಬಳ್ಳಾರಿ ಕಲ್ಯಾಣ ಸ್ವಾಮೀಜಿ, ಉಪಾಧ್ಯಕ್ಷರಾಗಿ ಕೊಡಗು ಜಿಲ್ಲೆಯ ಮನೆಹಳ್ಳಿ ಮಹಾಂತ ಸ್ವಾಮೀಜಿ, ಪ್ರಧಾನ ಕಾರ್ಯದರ್ಶಿಯಾಗಿ ಬಸವಕಲ್ಯಾಣ ಗವಿಮಠದ ಅಭಿನವ ಸ್ವಾಮೀಜಿ ಮತ್ತು ಅಥಣಿ ಕಾಡಸಿದ್ದೇಶ್ವರ ಸ್ವಾಮೀಜಿ, ಕಪರಟ್ಟಿ ಬಸವರಾಜ ಸ್ವಾಮೀಜಿಯವರನ್ನು ಆಯ್ಕೆ ಮಾಡಲಾಯಿತು.
ಮಹಾರಾಷ್ಟ್ರ ರಾಜ್ಯಾಧ್ಯಕ್ಷರಾಗಿ ಡಾ. ವೀರುಪಾಕ್ಷ ಸ್ವಾಮೀಜಿ ಮತ್ತು ಮಧ್ಯಪ್ರದೇಶ ರಾಜ್ಯಾಧ್ಯಕ್ಷರಾಗಿ ವೀರರುದ್ರಮುನಿ ಸ್ವಾಮೀಜಿಯವರನ್ನು ಆಯ್ಕೆ ಮಾಡಲಾಯಿತು
ವರದಿ. ನಾಗರಾಜ ಪ್ರಚಂಡಿ