ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಸೇವಾ ನ್ಯೂನ್ಯತೆ:ಸಂಶೋಧನಾ ಕೇಂದ್ರಕ್ಕೆ ಪರಿಹಾರ ನೀಡುವಂತೆ ಆದೇಶ

ಶಿವಮೊಗ್ಗ:ಅರ್ಜಿದಾರರಾದ ಕರ್ನಾಟಕ ಪಶುವೈದ್ಯಕೀಯ ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಜಾನುವಾರುಗಳ ಅಸ್ಪಷ್ಟ ರೋಗಗಳ ಸಂಶೋಧನಾ ಕೇಂದ್ರಕ್ಕೆ ಖರೀದಿಸಲಾದ ಉಪಕರಣಕ್ಕೆ ಸಂಬಂಧಿಸಿದಂತೆ ಎದುರುದಾರ ವಿತರಕ ಸಂಸ್ಥೆಯ ವಿರುದ್ದ ದಾಖಲಿಸಿದ್ದ ಸೇವಾ ನ್ಯೂನ್ಯತೆ ಪ್ರಕರಣದಲ್ಲಿ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಎದುರುದಾರರಿಗೆ ಉಪಕರಣ ದುರಸ್ತಿಪಡಿಸಿಕೊಡಲು ತಪ್ಪಿದಲ್ಲಿ ಅದರ ಮೌಲ್ಯ ಮರುಪಾವತಿಸುವಂತೆ ಆದೇಶಿಸಿದೆ.
ಸಂಶೋಧನಾ ಕೇಂದ್ರಕ್ಕೆ ಆಸ್ಟ್ರಿಯ ದೇಶದ HYCEL HNDEL SGESELLSCHAFT ಸಂಸ್ಥೆಯಿಂದ ತಯಾರಿಸಲ್ಪಟ್ಟ ‘ಆಟೋ ಹೆಮಟಾಲಜಿ ಆನಲೈಸರ್’ ಉಪಕರಣವನ್ನು ಈ ಸಂಸ್ಥೆಯಿಂದ ಅಧಿಕೃತಗೊಳಿಸಲಾದ ಚೆನ್ನೈನ ಮೆ|| ಬೀಟಾ ಎಕ್ಟಿಪ್‍ಮೆಂಟ್ಸ್ & ಎಕ್ವಿಪ್‍ಮೆಂಟ್ಸ್ ಇವರಿಂದ ಟೆಂಡರ್ ಮೂಲಕ ರೂ.6,73,200 ಗಳಿಗೆ ಖರೀದಿಸಿದ್ದು ದಿ:05-10-2018 ರಂದು ಸದರಿ ಉಪಕರಣವನ್ನು ಚೆನ್ನೈನ ಸಂಸ್ಥೆಯವರು ಜಾನುವಾರುಗಳ ಅಸ್ಪಷ್ಟ ರೋಗಗಳ ಸಂಶೋಧನಾ ಕೇಂದ್ರದ ಪ್ರಯೋಗಾಲಯದಲ್ಲಿ ಅಳವಡಿಸಿರುತ್ತಾರೆ.
ಈ ಉಪಕರಣವು ಪ್ರಾರಂಭದಿಂದಲೂ ಸೂಕ್ತವಾಗಿ ಕಾರ್ಯ ನಿರ್ವಹಿಸುತ್ತಿಲ್ಲವೆಂದು ಮತ್ತು ಜಾನುವಾರುಗಳ ರಕ್ತದ ಮಾದರಿಗಳನ್ನು ವಿಶ್ಲೇಷಣೆಗೆ ಒಳಪಡಿಸಿದಾಗ,ಒಂದೇ ಮಾದರಿಯನ್ನು ಪುನರ್ ವಿಶ್ಲೇಷಣೆಗೆ ಒಳಪಡಿಸಿದಾಗ ಪ್ರತಿಫಲಿತ ಫಲಿತಾಂಶಗಳು ಸ್ಥಿರವಾಗಿರದೆ ವ್ಯತ್ಯವಾಗುತ್ತಿದ್ದು ಸದರಿ ಉಪಕರಣ ಉತ್ಪಾದನಾ ದೋಷ ಹೊಂದಿರುವುದಾಗಿ ಮತ್ತು ಸದರಿ ಉಪಕರಣವನ್ನು ದುರಸ್ತಿಪಡಿಸಿಕೊಡಲು ಅಥವಾ ಬದಲಿ ಉಪಕರಣವನ್ನು ಒದಗಿಸಲು ಉತ್ಪಾದಕ ಮತ್ತು ವಿತರಕ ಸಂಸ್ಥೆಗಳಿಗೆ ದೂರುದಾರರಾದ ಸಂಶೋಧನಾ ಕೇಂದ್ರದ ಮುಖ್ಯಸ್ಥರು ಕೋರಿರುತ್ತಾರೆ.
ಚೆನ್ನೈನ ವಿತರಕ ಸಂಸ್ಥೆ ಲಿಖಿತ ಆಶ್ವಾಸನೆ ನೀಡಿ ವಾಪಸ್ ಒಯ್ದಿದ್ದರೂ ಸಹ ಇದುವರೆಗೆ ಸದರಿ ಉಪಕರಣವನ್ನು ದುರಸ್ತಿಪಡಿಸಿ ವಾಪಸ್ ನೀಡದೇ ಅಥವಾ ಬದಲಿ ಉಪಕರಣ ಒಗದಿಸದೆ ಎದುರುದಾರ ಉತ್ಪಾದನಾ ಮತ್ತು ವಿತರಕ ಸಂಸ್ಥೆಯವರು ಸೇವಾ ನ್ಯೂನ್ಯತೆ ಎಸಗಿದ್ದಾರೆಂದು ಸೂಕ್ತ ಪರಿಹಾರ ಕೋರಿ ಆಯೋಗದ ಮುಂದೆ ಪ್ರಕರಣ ದಾಖಲಿಸಲಾಗಿರುತ್ತೆ.
ಈ ಪ್ರಕರಣದ ವಿಚಾರಣೆ ಕೈಗೊಂಡ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಎದುರುದಾರರಿಗೆ ವಿಚಾರಣೆಗೆ ಹಾಜರಾಗಲು ತಿಳುವಳಿಕೆ ಪತ್ರ ಜಾರಿಗೊಳಿಸಿದ್ದು,ಆಸ್ಟ್ರಿಯಾದ ತಯಾರಕ ಸಂಸ್ಥೆ ವಿಚಾರಣೆಗೆ ಗೈರು ಹಾಜರಾಗಿರುತ್ತದೆ ಚೆನ್ನೈನ ವಿತರಕ ಸಂಸ್ಥೆಯವರು ವಿಚಾರಣಗೆ ಹಾಜರಾಗಿ ತಮ್ಮಿಂದ ಸೇವಾ ನ್ಯೂನ್ಯತೆ ಆಗಿಲ್ಲವೆಂದು ವಾದಿಸಿರುತ್ತಾರೆ.
ಉಭಯ ಪಕ್ಷಕಾರರ ವಾದ-ವಿವಾದಗಳನ್ನು , ದಾಖಲೆಗಳನ್ನು ಆಯೋಗವು ಕೂಲಂಕುಷವಾಗಿ ಪರಿಶೀಲಿಸಿ ಚೆನ್ನೈನ ಎದುರುದಾರ ವಿತರಕ ಸಂಸ್ಥೆಯು ಉಪಕರಣವನ್ನು ವಾಪಸ್ಸು ತೆಗೆದುಕೊಂಡು ಹೋದ ದಿ: 16-11-2021 ರಿಂದ ಇದುವರೆಗೆ ತೃಪ್ತಿಕರವಾಗಿ ದುರಸ್ತಿ ಪಡಿಸಿ ಹಿಂದಿರುಗಿಸದಿರುವುದು ಅಥವಾ ಬದಲಿ ಉಪಕರಣ ಒದಗಿಸದಿರುವುದನ್ನು ಗಂಭೀರವಾಗಿ ಪರಿಗಣಿಸಿ ಎದುರುದಾರ ಸಂಸ್ಥೆಗಳು ಜಂಟಿಯಾಗಿ ಅಥವಾ ವೈಯಕ್ತಿಕವಾಗಿ ಜವಾಬ್ದಾರರೆಂದು ಪರಿಗಣಿಸಿ, ಆಯೋಗದ ಆದೇಶದ ದಿನಾಂಕದಿಂದ 45 ದಿನಗಳ ಒಳಗಾಗಿ ಉಪಕರಣವನ್ನು ದುರಸ್ತಿಪಡಿಸಿ ಹಿಂದಿರುಗಿಸಲು ತಪ್ಪಿದಲ್ಲಿ ಉಪಕರಣ ಖರೀದಿ ಮೌಲ್ಯವನ್ನು ವಾರ್ಷಿಕ ಶೇ.10 ರ ಸವಕಳಿ ಸೂತ್ರದಲ್ಲಿ ಪರಿಗಣಿಸಿ ದಿ:16-11-2021 ಕ್ಕೆ ಅನ್ವಯವಾಗುವಂತೆ ಉಪಕರಣದ ಮೌಲ್ಯವನ್ನು ಆಯೋಗದ ಆದೇಶದ ದಿನಾಂಕದಿಂದ 45 ದಿನಗಳ ಒಳಗೆ ಮರು ಪಾವತಿಸಲು ತಪ್ಪಿದಲ್ಲಿ ಸದರಿ ಉಪಕರಣದ ಮೌಲ್ಯಕ್ಕೆ ಶೇ.10ರ ಬಡ್ಡಿ ಸೇರಿಸಿ ನೀಡಲು ಹಾಗೂ ಎದುರುದಾರ ಸಂಸ್ಥೆಗಳಿಂದ ಸೇವಾ ನ್ಯೂನ್ಯತೆಯಿಂದಾಗಿ ಜಾನುವಾರುಗಳ ಅಸ್ಪಷ್ಟ ರೋಗಗಳ ಸಂಶೋಧನಾ ಕೇಂದ್ರ ಮತ್ತು ವಿಶ್ವವಿದ್ಯಾಲಯಕ್ಕೆ ಆದ ಅನಾನುಕೂಲತೆ ಮತ್ತು ಸಂಕಷ್ಟಗಳಿಗೆ ಪರಿಹಾರವಾಗಿ ರೂ.1,00,000/- ಗನ್ನು ಹಾಗೂ ಪ್ರಕರಣದ ವೆಚ್ಚ ರೂ.20,000/- ಗಳನ್ನು ಎದುರುದಾರ ಸಂಸ್ಥೆಗಳು ಪಾವತಿಸಬೇಕೆಂದು ನಿರ್ದೇಶಿಸಿ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಟಿ.ಶಿವಣ್ಣ, ಸದಸ್ಯರಾದ ಸವಿತಾ ಬಿ ಪಟ್ಟಣಶೆಟ್ಟಿ, ಬಿ.ಡಿ.ಯೋಗಾನಂದ ಭಾಂಡ್ಯ ಇವರ ಪೀಠವು ಜೂ.12 ರಂದು ಆದೇಶಿಸಿದೆ.

ವರದಿ:ಕೊಡಕ್ಕಲ್ ಶಿವಪ್ರಸಾದ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ