ರಾಯಚೂರು ಜಿಲ್ಲೆಯ ಸಿoಧನೂರು ತಾಲ್ಲೂಕಿನ ಆಯನೂರು,ತಾಲ್ಲೂಕು ಕೇಂದ್ರದಿoದ ಸುಮಾರು ೩೦ ಕಿ.ಮೀ ದೂರದಲ್ಲಿರುವ ನದಿ ದಂಡೆಯ ಚಿಕ್ಕ ಗ್ರಾಮ. ಈ ಗ್ರಾಮದ ಶ್ರೀಮತಿ ಲಕ್ಷ್ಮಿ ಗಂಡ ದಿllಅಂಗಡಿ ಮುದುಕಪ್ಪ ನಾಯಕ ಇವರ ಮೊದಲನೆಯ ಮಗನಾಗಿ ಸಾಮಾನ್ಯ ವರ್ಗದ ಕುಟುಂಬದಲ್ಲಿ ಜನಿಸಿದ ಡಾ.ಆಂಜನೇಯ ಅವರು ಇದೇ ಗ್ರಾಮದ ಸರಕಾರಿ ಶಾಲೆಯಲ್ಲಿ ೩ನೇ ತರಗತಿಯವರೆಗೆ ಅಭ್ಯಾಸ ಮಾಡಿ ನಂತರ ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯನ್ನು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿ ಬೆಂಗಳೂರಿನ ಕರ್ನಾಟಕ ಪಶು ವೈದ್ಯಕೀಯ, ಪ್ರಾಣಿ ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ವೃತ್ತಿಪರ ತರಬೇತಿ ಪಡೆದು ಪಶುವೈದ್ಯರಾಗಿ ವೃತ್ತಿ ಆರಂಭಿಸಿ, ಕಲ್ಲು ಮುಳ್ಳುಗಳನ್ನು ದಾಟಿ ಅಂತರಾಷ್ಟ್ರೀಯ ಮಟ್ಟದ ವರೆಗೆ ಪ್ರತಿಭೆಯನ್ನು ವಿಸ್ತರಿಸಿಕೊಂಡಿದ್ದಾರೆ.
ತರುವಾಯ, ಡೀಮ್ಡ್ ವಿಶ್ವವಿದ್ಯಾಲಯ, ಐಸಿಎಆರ್- ಭಾರತೀಯ ಜೆಆರ್‌ಎಫ್ ಸ್ನಾತಕ್ಕೋತ್ತರ ಪ್ರವೇಶ ಪರೀಕ್ಷೆಯಲ್ಲಿ ಅಖಿಲಭಾರತ ಮಟ್ಟದಲ್ಲಿ ೧೬ ನೇಸ್ಥಾನ ಪಡೆದರು.
ಸ್ನಾತಕೋತ್ತರ ಪದವಿಯಲ್ಲಿ ಪಕ್ಷಿಗಳಿಗೆ ಬರುವ ವಿವಿಧ ರೋಗಗಳ ಬಗ್ಗೆ ಅಧ್ಯಯನ ಮಾಡಿದರು.
ಪಿಎಚ್‌ಡಿ ಪೂರ್ವ ಪರೀಕ್ಷೆಯಲ್ಲಿ ಅಖಿಲಭಾರತ ಮಟ್ಟದಲ್ಲಿ ೪ನೇ ರ‍್ಯಾಂಕ್‌ಗಳಿಸುವ ಮೂಲಕ ಐಸಿಎಆರ್ ಭಾರತಿಯ ಪಶು ವೈದ್ಯಕೀಯ ಸಂಶೋಧನಾ ಸಂಸ್ಥೆಯ ಪಂಡಿತರು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಬೆರಗುಗೊಳಿಸಿದರು.
‘ಕುರಿ ಮತ್ತು ಮೇಕೆಗಳಿಗೆ ಬರುವ ವೈರಾಣುಗಳಿಗೆ ಲಸಿಕೆಗಳು’ ಕುರಿತಾಗಿ ಮಹಾಪ್ರಬಂಧ ಮಂಡಿಸಿ ಪಿಎಚ್‌ಡಿಗೆ ಭಾಜನರಾದರು.
ಪ್ರಸ್ತುತ ಡಾ.ಆಂಜನೇಯ ಅವರು ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಬರುವ ಲಕ್ನೋ ಪ್ರಯೋಗ ಶಾಲೆಯಲ್ಲಿ ಹಿರಿಯ ವಿಜ್ಞಾನಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಡಾ.ಆಂಜನೇಯ ಅವರ ೧೦ ವರ್ಷದ ಸೇವಾ ಪಾಂಡಿತ್ಯವನ್ನು ಗುರುತಿಸಿ ಭಾರತ ಸರ್ಕಾರದ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು ಯುವ ವಿಜ್ಞಾನಿಗಳಿಗೆ ನೀಡುವ ಅತ್ಯಂತ ಗೌರವಾನ್ವಿತ ಪ್ರಶಸ್ತಿಯಾದ ಐಸಿಎಂಆರ್ ಇಂಟರ್ ನ್ಯಾಷನಲ್ ಫೆಲೋ ಪ್ರಶಸ್ತಿಯನ್ನು ನೀಡಿ ಅವರನ್ನು ಹೆಚ್ಚಿನ ಸಂಶೋಧನೆಗಾಗಿ ಅಮೇರಿಕಾದ ಆಬರ್ನ್ ಮಹಾ ವಿಶ್ವವಿದ್ಯಾಲಯ ಅಲಬಾಮಾಕ್ಕೆ ಕಳುಹಿಸಲು ತೀರ್ಮಾನಿಸಿದೆ.
ಜೂ.೨೨ ರಂದು ಶನಿವಾರ ಡಾ.ಆಂಜನೇಯ ಅವರು ಭಾರತದಿಂದ ಅಮೇರಿಕಾಗೆ ತೆರಳಲಿದ್ದಾರೆ.
ಕಲ್ಯಾಣ ಕರ್ನಾಟಕದಂತಹ ಅತ್ಯಂತ ಹಿಂದುಳಿದ ಪ್ರದೇಶದ ಒಬ್ಬ ಸಾಮಾನ್ಯ ಕುಟುಂಬದ ವ್ಯಕ್ತಿ ವಿಜ್ಞಾನಿಯಾಗಿ ಬೆಳೆದಿರುವುದಕ್ಕೆ ಸಿಂಧನೂರು ತಾಲ್ಲೂಕಿನ ಜನತೆ ಮತ್ತು ಕುಟುಂಬದವರು,ಚಂದ್ರೇಗೌಡ್ರು ಪೊಲೀಸ್ ಪಾಟೀಲ್ ಯುವ ಮುಖಂಡರು ಹಾಗೂ ಕುಟುಂಬದವರು,ಸಾಕಿನ್ ಚಿಕ್ಕ ಬೆಣಕಲ್ ತಾಲೂಕು ಗಂಗಾವತಿ ಜಿಲ್ಲೆ ಕೊಪ್ಪಳ ಇವರು ಹರ್ಷ ವ್ಯಕ್ತಪಡಿಸಿ ಶುಭ ಹಾರೈಸಿದ್ದಾರೆ.
ವರದಿ-ಕರುನಾಡ ಕಂದ