ಕಲಬುರಗಿ:ದಿ 1.7.2024 ರಂದು ಕಲಬುರ್ಗಿ ಜಿಲ್ಲೆಯ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಪುನೀತ್ ರಾಜ್ ಸಿ ಕವಡೆ ಹಾಗೂ ಮಹಿಳಾ ಘಟಕ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷೆ ನಿರ್ಮಲಾ ಎನ್ ತಳವಾರ್ ಹಾಗೂ ಸಂಘಟನಾ ಕಾರ್ಯದರ್ಶಿ ಜರೀನಾ ಬೇಗಂ ಮತ್ತು ಕಲಬುರ್ಗಿ ಜಿಲ್ಲೆ ಯಡ್ರಾಮಿ ತಾಲೂಕಿನ ದೇವಿಂದ್ರಪ್ಪ ಗೌಡ ಪಾಟೀಲ್ ಹಾಗೂ ಜಿಲ್ಲೆಯ ಎಲ್ಲಾ ತಾಲೂಕಿನ ತಾಲೂಕು ಅಧ್ಯಕ್ಷರುಗಳು ಹಾಗೂ ಆಯಾ ತಾಲೂಕಿನ ಗ್ರಾಮ ಘಟಕದ ಅಧ್ಯಕ್ಷರುಗಳು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಇಂದಿನ ಸರಕಾರವು ಕರ್ನಾಟಕ ಜನತೆಗೆ ಕೆಲಸ ಕೊಡದೆ ಬೇರೆಡೆಯಿಂದ ಬಂದ ಜನತೆಗೆ ಕೆಲಸ ಕೊಡುತಿದ್ದು ಕನ್ನಡಿಗರಿಗೆ ದ್ರೋಹ ಮಾಡುತ್ತಿದ್ದಾರೆ ಇದನ್ನು ಖಂಡಿಸಿ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಬೃಹತ್ ಪ್ರತಿಭಟನೆ ಸತ್ಯಾಗ್ರಹ ಮಾಡಲಾಯಿತು ಹಾಗೂ ಜಿಲ್ಲಾಧಿಕಾರಿಗಳ ಮುಖಾಂತರ ಸರಕಾರಕ್ಕೆ ಮನವಿಯನ್ನು ನೀಡಲಾಯಿತು ಕನ್ನಡಿಗರಿಗೆ ನೂರಕ್ಕೆ ನೂರರಷ್ಟು ಕೆಲಸ ಒದಗಿಸಿ ಕೊಡುವಂತೆ ಒತ್ತಾಯಿಸಿ ಮನವಿ ಮಾಡಿಕೊಳ್ಳಲಾಯಿತು.
ವರದಿ ತಿಪ್ಪಣ್ಣ ಜಾಲಹಳ್ಳಿ