ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಸುಮಾರು ದಿನಗಳಿಂದ ಎಕ್ಸರೇ ಮಷೀನ್ ಕೆಲಸ ಮಾಡುತ್ತಿಲ್ಲ ಯಾವಾಗ ರಿಪೇರಿಯಾಗುತ್ತದೆ ಅಂತ ಕೇಳಿದರೆ ಸರಿಯಾಗಿ ಉತ್ತರನೇ ಹೇಳುತ್ತಿಲ್ಲ ಎಕ್ಸರೆ ಮಷೀನ್ ಇಲ್ಲದ ಕಾರಣ ಬಡ ಜನರಿಗೆ ತುಂಬಾ ತೊಂದರೆ ಆಗುತ್ತಿದೆ ಇದರ ಬಗ್ಗೆ ಮಾತನಾಡುವುದಕ್ಕೆ ಮೇಲಾಧಿಕಾರಿಗಳಿಗೆ ಫೋನ್ ಮಾಡಿದ್ರೂ ಅವರು ಸರಿಯಾಗಿ ಉತ್ತರ ಕೊಡುತ್ತಿಲ್ಲ ಫೋನ್ ಮಾಡಿದ್ರೂ ರಿಸೀವ್ ಮಾಡುತ್ತಿಲ್ಲ ಈ ಎಕ್ಸ್ರೇ ಮಷೀನ್ ರಿಪೇರಿ ಆಗೋದು ಯಾವಾಗ ಈ ಮಷೀನ್ ರಿಪೇರಿ ಆಗೋವರೆಗೂ ಜನರ ಪರಿಸ್ಥಿತಿ ಏನು ಆರೋಗ್ಯ ಇಲಾಖೆಯ ಅಧಿಕಾರಿಗಳು ಇದರ ಬಗ್ಗೆ ಬೇಗನೆ ಕ್ರಮ ಕೈಗೊಳ್ಳಬೇಕೆಂದು ಜನರು ಕೇಳಿ ಕೊಳ್ಳುತಿದ್ದಾರೆ ಆದರೂ ಪ್ರಯೋಜನ ಇಲ್ಲದಂತಾಗಿದೆ.
ವರದಿ ಎಸ್.ಏ.ನಿಜಾಮ್