ಯಾದಗಿರಿ:ಕಡಿಮೆ ದರದಲ್ಲಿ ಪ್ರಯಾಣಿಸುತ್ತಿದ್ದ ಬಡವರು ಕಾರ್ಮಿಕರಿಗೆ ಅನುಕುಲವಾಗಿದ್ದ ರೈಲುಗಳು ಈಗ ಬಡವರಿಂದ ದೂರವಾಗುತ್ತಿವೆ ಮಾತಿನಲ್ಲಿ ನಮ್ಮ ಬಗ್ಗೆ ಅನುಕಂಪ ತೋರಿಸಿ ಕಣ್ಣೀರು ಸುರಿಸಿ ಮತ ಪಡೆದು ಅಧಿಕಾರಕ್ಕೆ ಬಂದವರಿಗೆ ಜನಸಾಮಾನ್ಯರ ಪ್ರಯಾಣ ಸೌಲಭ್ಯದ ಬಗ್ಗೆ ಚಿಂತೆಯೇ ಇಲ್ಲವಾಗಿದೆ ಕಲಬುರ್ಗಿ ಯಾದಗಿರಿ ರಾಯಚೂರು ಜಿಲ್ಲೆಯಲ್ಲಿ ಉದ್ಯೋಗವಿಲ್ಲದೆ ಬಡವರು ಕಾರ್ಮಿಕರು ಬೆಂಗಳೂರು ಪಟ್ಟಣಕ್ಕೆ ವಲಸೆ ಹೋಗುತ್ತಿರುವುದು ಪ್ರಯಾಣಿಸುತ್ತಿರುವುದು ಹೆಚ್ಚಾಗುತ್ತಿದೆ ತಮ್ಮ ತಮ್ಮ ಕ್ಷೇತ್ರದಲ್ಲಿ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಿ ಕೊಡದ ಜನಪ್ರತಿನಿಧಿಗಳು ಕನಿಷ್ಠ ಅವರ ಪ್ರಯಾಣಕ್ಕಾದರೂ ಸುರಕ್ಷಿತ ವ್ಯವಸ್ಥೆ ಕಲ್ಪಿಸಿಕೊಡಬೇಕಲ್ಲವೆ ಯಾದಗಿರಿ ಮಾರ್ಗವಾಗಿ ಬೆಂಗಳೂರಿಗೆ ಹೋಗುವ ನಾಂದೇಡ್ ಎಕ್ಸ್ ಪ್ರೆಸ್ ಉದ್ಯಾನ ಎಕ್ಸ್ ಪ್ರೆಸ್ ಸೋಲಪೂರ ಹಾಸನ್ ಎಕ್ಸ್ ಪ್ರೆಸ್ ಬೀದರ್ ಎಕ್ಸ್ ಪ್ರೆಸ್ ಬಸವ ಎಕ್ಸ್ ಪ್ರೆಸ್ ರೈಲುಗಳು ಎಲ್ಲವೂ ಸಾಮಾನ್ಯ ಬೋಗಿಗಳು ತುಂಬಿ ಸ್ಲಿಪರ್ ಬೋಗಿಗಳಲ್ಲಿಯೂ ಸಹ ತುಂಬಿ ತುಳುಕುತ್ತಿದ್ದ ಪ್ರಯಾಣಿಕರು ಸಾಮಾನ್ಯ ಟಿಕೇಟ್ ಪಡೆದು ಸ್ಲಿಪರ್ ಬೋಗಿಯಲ್ಲಿ ಪ್ರಯಾಣಿಸುತ್ತಿರುವುದು ಕಂಡು ರಿಸರ್ವ್ಷನ ಮಾಡಿಕೊಂಡು ಪ್ರಯಾಣಿಕರು ದೂರು ನೀಡುತ್ತಿರುವುದರಿಂದ (TC)ಗಳು ರೈಲ್ವೆ ಪೋಲಿಸ್ ಅಧಿಕಾರಿಗಳು ಸ್ಲೀಪರ್ ಬೋಗಿಯಲ್ಲಿ ಪ್ರಯಾಣಿಸುತ್ತಿರುವ ಸಾಮಾನ್ಯ ಬೋಗಿಯ ಪ್ರಯಾಣಿಕರನ್ನ ಮದ್ಯದಲ್ಲಿ ಮಂತ್ರಾಲಯ ಗುಂತಕಲ್ ಧರ್ಮವರಂ ರೈಲ್ವೆ ನಿಲ್ದಾಣದಲ್ಲಿ ಕೆಳಗೆ ಇಳಿಸುವುದು ಸರ್ವೇ ಸಾಮಾನ್ಯವಾಗಿದೆ ದುಡಿಯಲು ವಲಸೆ ಹೊರಟ ಕೂಲಿಕಾರ್ಮಿಕರು ವಯಸ್ಸಾದವರು ಅಂಗವಿಕಲರು ಕೈ ಮುಗಿದರೂ ಮಾನವೀಯತೆ ತೋರುತ್ತಿಲ್ಲ ದಿನನಿತ್ಯ ಪ್ರತಿ ರೈಲಿಗೆ ನೂರಾರು ಪ್ರಯಾಣಿಕರನ್ನು ಮದ್ಯದಲ್ಲಿ ಇಳಿಸಲಾಗುತ್ತಿದೆ ಬೇರೆ ಬೇರೆ ರೈಲುಗೆ ಹತ್ತಿ ಪ್ರಯಾಣ ಮಾಡುವುದು ತುಂಬಾ ಕಷ್ಟಕರವಾಗಿದೆ ಆದ್ದರಿಂದ ಕಲಬುರ್ಗಿ ಯಾದಗಿರಿ ರಾಯಚೂರು ಜಿಲ್ಲೆಯ ಶಾಸಕರು ಸಂಸದರು ತಮ್ಮ ಕ್ಷೇತ್ರದ ಜನತೆ ಮೇಲೆ ಕಾಳಜಿ ಪ್ರೀತಿ ಇದ್ದರೆ ಒಂದು ದಿನ ಸಾಮಾನ್ಯ ಬೋಗಿಯಲ್ಲಿ ಪ್ರಯಾಣಿಸಿ ತಮ್ಮ ಕ್ಷೇತ್ರದ ಪ್ರಯಾಣಿಕರ ಕಷ್ಟವನ್ನರಿತು ಯಾದಗಿರಿ ಮಾರ್ಗವಾಗಿ ಬೆಂಗಳೂರಿಗೆ ಹೋಗುವ ಎಲ್ಲಾ ರೈಲುಗಳಿಗೆ ಹೆಚ್ಚುವರಿ ಸಾಮಾನ್ಯ ಬೋಗಿಗಳು ಕಲ್ಪಿಸಲು ಕೇಂದ್ರ ರೈಲ್ವೆ ಸಚಿವರಿಗೆ ಬೇಟಿ ಮಾಡಿ ಸಾಮಾನ್ಯ ಬೋಗಿ ಕಲ್ಪಿಸಿ ಅಥವಾ ಕಲಬುರ್ಗಿ ಯಿಂದ ಬೆಂಗಳೂರು ವರೆಗೆ ಪ್ಯಾಸೆಂಜರ್ ರೈಲು ಕಲ್ಪಿಸಿ ಕೊಡಬೇಕೆಂದು ಸಾಮಾಜಿಕ ಕಾರ್ಯಕರ್ತ ನಿಂಗಣ್ಣ ಕರಡಿ ಆಗ್ರಹಿಸಿದ್ದಾರೆ.
ವರದಿ: ಶಿವರಾಜ ಸಾಹುಕಾರ್ ವಡಗೇರಾ