ವಿಜಯನಗರ/ಕೊಟ್ಟೂರು:ಪಟ್ಟಣ ವಾಣಿಜ್ಯ ಕೇಂದ್ರವಾದ ಎಪಿಎಂಸಿ ಆವರಣದಲ್ಲಿ ಜುಲೈ 5 ರಂದು ಬೆಳಿಗ್ಗೆ 10.30 ಕ್ಕೆ ಮಾನ್ಯ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಹಾಗೂ ಹಗರಿಬೊಮ್ಮನಹಳ್ಳಿ ಹಾಗೂ ಕೂಡ್ಲಿಗಿ ಕ್ಷೇತ್ರದ ಶಾಸಕರ ಘನ ಉಪಸ್ಥಿತಿಯಲ್ಲಿ ಕೊಟ್ಟೂರು ತಾಲೂಕಿನ ಜನರು ಜನತಾ ದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಊರು/ಗ್ರಾಮದ ಸಮಸ್ಯೆಗಳ ಕುರಿತು ಅಹವಾಲುಗಳನ್ನು ಸಲ್ಲಿಸಬಹುದು ಎಂದು ತಹಶೀಲ್ದಾರ್ ಜಿ.ಕೆ. ಅಮರೇಶ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.
