ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಮುಂಡಿಗೇಸರ ಮೂಲದ ಹುಬ್ಬಳ್ಳಿಯ ಯುವತಿ ಇತ್ತೀಚೆಗೆ ಅಮೆರಿಕದಲ್ಲಿ ನಡೆದ ಸೌಂದರ್ಯ ಸ್ಪರ್ಧೆಯಲ್ಲಿ ಗೆದ್ದಿದ್ದಾಳೆ.
ಮುಂಡಿಗೇಸರ ಅಜ್ಜೋರಮನೆ ಮನೆತನದವರಾಗಿ ಹುಬ್ಬಳ್ಳಿಯಲ್ಲಿ ನೆಲೆಸಿರುವ ಕೃಷ್ಣ ಹೆಗಡೆ ಮತ್ತು ಕಮಲಾ ದಂಪತಿಯ ಪುತ್ರಿ ಶ್ರುತಿ ಹೆಗಡೆ ಅಮೆರಿಕದಲ್ಲಿ ವಿಶ್ವ ಸುಂದರಿಯಾಗಿ ಹೊರಹೊಮ್ಮಿದ್ದಾರೆ.
ಅವರು ಮೊದಲು ಮಿಸ್ ಕರ್ನಾಟಕ ರನ್ನರ್ ಅಪ್ ಆಗಿದ್ದರು, 2018 ರಲ್ಲಿ ಮಿಸ್ ಸೌತ್ ಇಂಡಿಯಾ ವಿಜೇತರಾಗಿದ್ದರು. ಅವರು 2023 ರಲ್ಲಿ ಮಿಸ್ ಏಷ್ಯಾ ಇಂಟರ್ನ್ಯಾಷನಲ್ ಇಂಡಿಯಾ ಪ್ರಶಸ್ತಿಯನ್ನು ಗೆದ್ದರು ಮತ್ತು ಅಮೇರಿಕಾದಲ್ಲಿ ವಿಶ್ವ ಸುಂದರಿ ಕಿರೀಟವನ್ನು ಪಡೆದರು.
ಅಮೆರಿಕದ ಫ್ಲೋರಿಡಾದಲ್ಲಿ ಜೂ.6ರಿಂದ 10ರವರೆಗೆ ನಡೆದ ಸ್ಪರ್ಧೆಯಲ್ಲಿ ಭಾರತ ಸೇರಿದಂತೆ 40 ದೇಶಗಳ ಮಿಸ್ ಗಳು ಭಾಗವಹಿಸಿದ್ದರು.ರಾಷ್ಟ್ರೀಯ ಉಡುಗೆ, ಈಜು ಉಡುಗೆ, ಪ್ರಶ್ನೆ ಉತ್ತರ, ವೈಯಕ್ತಿಕ ಸಂದರ್ಶನ ಹೀಗೆ ನಾನಾ ಸುತ್ತುಗಳಲ್ಲಿ ಸ್ಪರ್ಧೆ ನಡೆಯಿತು. ಎಲ್ಲದರಲ್ಲೂ ಉತ್ತಮ ಪ್ರದರ್ಶನ ನೀಡಿ ಶ್ರುತಿ ಹೆಗಡೆ ಗೆದ್ದಿದ್ದಾರೆ.
ವರದಿ:ಕೊಡಕ್ಕಲ್ ಶಿವಪ್ರಸಾದ್,ಶಿವಮೊಗ್ಗ