ಬೀದರ:ಜಿಲ್ಲೆಯ ಖಡಕ್ ಪೊಲೀಸ್ ಆಫೀಸರ್ ಎಂದೇ ಹೆಸರಾಗಿದ್ದ ಶ್ರೀ ಚನ್ನಬಸವಣ್ಣ ಲಂಗೋಟಿ ಐಪಿಎಸ್ ಅಧಿಕಾರಿ ಅವರ ವರ್ಗಾವಣೆ ಆದೇಶವನ್ನು ರದ್ದುಪಡಿಸಲು ಸಾಹಿತಿ,ಹೋರಾಟಗಾರರಾದ ಸಂಗಮೇಶ್ ಎನ್ ಜವಾದಿಯವರು ಸರ್ಕಾರಕ್ಕೆ ವಿನಂತಿಸಿಕೊಂಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬೀದರ್ ಜಿಲ್ಲೆಯನ್ನು ಸಮಗ್ರ ಅಪರಾಧ ಮುಕ್ತ ಮಾಡುವ ನಿಟ್ಟಿನಲ್ಲಿ ನಮ್ಮ ಬೀದರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀ ಚನ್ನಬಸವಣ್ಣ ಲಂಗೋಟಿ ಸರ್ ಅವರು ಹತ್ತಾರು ಹೊಸ ಯೋಜನೆಗಳನ್ನು ಹಾಕಿಕೊಂಡು ಜಿಲ್ಲೆಯನ್ನು ಅಪರಾಧ ಮುಕ್ತ ಮಾಡುವ ನಿಟ್ಟಿನಲ್ಲಿ ಮಹತ್ವದ ಕ್ರಮಗಳನ್ನು ಕೈಗೊಂಡಿದ್ದಾರೆ.ಅಲ್ಲದೆ SP Bidar clean hand officer ಆದ ಇವರನ್ನು ಬೀದರ್ ಜಿಲ್ಲೆಯಿಂದ ವರ್ಗಾವಣೆ ಮಾಡುವುದು ಸರಿಯಲ್ಲ ಎನ್ನುವುದು ಇಡೀ ಬೀದರ್ ಜಿಲ್ಲೆಯ ಜನತೆಯ ಆಗ್ರಹ, ಜಿಲ್ಲೆಯ ಹಲವು ಪ್ರಜ್ಞಾವಂತರ ಪಾಲಿಗೆ ಇದು ನಿರಾಶೆಯ ಭಾವನೆ ಉಂಟು ಮಾಡಿದ್ದು ಅಲ್ಲದೆ ಬೀದರ್ ಜಿಲ್ಲೆಯ ಕಾನೂನು ಸುವ್ಯವಸ್ಥೆ ವಿಭಾಗದಲ್ಲಿ ಬದಲಾವಣೆ ಬೀಸುತ್ತಿರುವ ಸಮಯದಲ್ಲಿ ಈ ವರ್ಗಾವಣೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಮತ್ತು ಅಪರಾಧ ಮುಕ್ತ ಮಾಡುವ ಜಿಲ್ಲೆಯ ಗುರಿಯನ್ನು ಕುಸಿತಗೊಳಿಸುತ್ತದೆ. ಇವರ ಆಡಳಿತ ಕಾಲಾವಧಿಯಲ್ಲಿ ಅಕ್ರಮ ದಂಧೆಗಳು ಬಹುತೇಕ ಹತೋಟಿಗೆ ಬಂದು, ಇನ್ನು ಮುಂದೆ ತಮ್ಮ ಕಳ್ಳಾಟ ನಡೆಯುವುದಿಲ್ಲ ಎಂದು ಬಾಲ ಮುದುಡಿಕೊಂಡಿದ್ದ ಕಳ್ಳದಂಧೆ ಕೋರರು ಖುಷಿಪಡುವಂತಾಗಿದೆ. ಕಾರಣ ಈ ವರ್ಗಾವಣೆಯನ್ನು ದಯವಿಟ್ಟು ರದ್ದುಗೊಳಿಸಬೇಕೆಂದು ಸಂಗಮೇಶ ಎನ್ ಜವಾದಿ ಯವರು ವಿನಂತಿಸಿಕೊಂಡಿದ್ದಾರೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.