ಕೊಟ್ಟೂರು:ಬೆಂಗಳೂರು ಮಹಾನಗರದ ತ್ರಿಪುರ ವಾಸಿನಿ ಅರಮನೆ ಮೈದಾನದಲ್ಲಿ ಜುಲೈ 5- 6, 2024 ರಂದು ಫೋಟೋ ಟುಡೇ ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ನಡೆಯಲಿದೆ ಎಂದು ಕೊಟ್ಟೂರು ತಾಲೂಕು ಛಾಯಾಗ್ರಾಹಕರ ಘಟಕದ ಪದಾಧಿಕಾರಿಗಳು ತಿಳಿಸಿದರು.
ಕರ್ನಾಟಕ ವೀಡಿಯೋ ಮತ್ತು ಫೋಟೋ ಅಸೊಶಿಯೇಶನ್ ಮತ್ತು ಬೈಸೆಲ್ ಇಂಟ್ರಾಕ್ಷನ್ ಪ್ರೈ.ಲಿ ಅವರ ಸಹಯೋಗದೊಂದಿಗೆ ನಡೆಯಲಿರುವ ಅಂತರ್ರಾಷ್ಟ್ರೀಯ ಮಟ್ಟದ ವಸ್ತು ಪ್ರದರ್ಶನದಲ್ಲಿ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದ ನೂರಾರು ಕಂಪನಿಗಳು ಭಾಗವಹಿಸಲಿವೆ ಉಚಿತ ಕ್ಯಾಮರಾ ಸರ್ವೀಸ್ ಹಾಗೂ ಛಾಯಾಗ್ರಾಹಕರಿಗೆ ಉಪಯುಕ್ತ ಕಾರ್ಯಾಗಾರಗಳು ಸೇರಿದಂತೆ ಹಲವಾರು ಕಾರ್ಯಕ್ರಮಗಳು ನಡೆಯಲಿವೆ ಈ ಕಾರ್ಯಕ್ರದಲ್ಲಿ ನಾಡಿನಾದ್ಯಂತ ಸಾವಿರಾರು ಛಾಯಾಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.
ಇದೇ ಸಂಧರ್ಭದಲ್ಲಿ ವಿಜಯನಗರ ಜಿಲ್ಲೆ,ಕೊಟ್ಟೂರು ಪಟ್ಟಣದ ಹಿರಿಯ ಛಾಯಾಗ್ರಾಹಕರಾದ ಬಿ.ಮಂಜಪ್ಪ ಇವರಿಗೆ ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ಕಾರ್ಯಕ್ರಮ ಸಂದರ್ಭದಲ್ಲಿ ಕರ್ನಾಟಕ ಛಾಯಾ ರತ್ನ ಪಶಸ್ತಿ ಪ್ರಧಾನ ಮಾಡಲಾಗುವುದು ನಾಡಿನ ಛಾಯಾಗ್ರಹಣ ಕ್ಷೇತ್ರಕ್ಕೆ ದುಡಿದ ಶ್ರೇಷ್ಠ ಛಾಯಾಗ್ರಾಹಕರಿಗೆ ನೀಡುವ ಗೌರವ ಪ್ರಶಸ್ತಿ ಇದಾಗಿದೆ.ವಿಜಯನಗರ ಜಿಲ್ಲೆ, ಕೊಟ್ಟೂರು ಪಟ್ಟಣದ ಛಾಯಾಗ್ರಾಹಕನ್ನು ಗುರುತಿಸಿ ಪ್ರಶಸ್ತಿ ನೀಡಿದ
ಕರ್ನಾಟಕ ವೀಡಿಯೋ ಮತ್ತು ಫೋಟೋ ಅಸೊಶಿಯೇಶನ್ ಅವರಿಗೆ ಕೊಟ್ಟೂರು ತಾಲೂಕು ವೀಡಿಯೋ ಮತ್ತು ಫೋಟೋ ಅಸೋಶಿಯೇಶನ್ ತಾಲೂಕು ಘಟಕದ ಪದಾಧಿಕಾರಿಗಳು ಅಭಿನಂದನೆಗಳು ತಿಳಿಸಿ ಪ್ರಶಸ್ತಿಗೆ ಭಾಜನರಾದ ಬಿ.ಮಂಜಪ್ಪ ಇವರಿಗೆ ಕೊಟ್ಟೂರು ಪಟ್ಟಣದ ಛಾಯಗ್ರಾಹಕರು ಸ್ನೇಹಿತರು, ಕುಟುಂಬ ವರ್ಗ, ಮುಂತಾದವರು ಶುಭಾಶಯಗಳನ್ನು ಕೋರಿದ್ದಾರೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.