ಕರುನಾಡ ಕಂದ ಮುಂಡಗೋಡ: ಮುಂಡಗೋಡದ ಪ್ರಥಮ ದರ್ಜೆ ಕಾಲೇಜು, ನಗರ ಹಾಗೂ ತಾಲೂಕಿನ ಸುತ್ತಮುತ್ತಲಿನ ಹಳ್ಳಿಗಳ ಸಾವಿರಾರು ವಿಧ್ಯಾರ್ಥಿ ಗಳಿಗೆ ವಿದ್ಯಾರ್ಜನೆಯ ತಾಣವಾಗಿದೆ.ಆದರೆ ಪ್ರತಿನಿತ್ಯ ಕಾಲೇಜಿಗೆ ಬರುವ ವಿಧ್ಯಾರ್ಥಿಗಳ ಪ್ರಾಣಕ್ಕೆ ರಕ್ಷಣೆಯೇ ಇಲ್ಲದಾಗಿದೆ,ಕಾರಣ ಪ್ರಥಮ ದರ್ಜೆ ಕಾಲೇಜು ಮುಂದೆ ಹಾದು ಹೋಗಿರುವ ರಾಜ್ಯ ಹೆದ್ದಾರಿ 69, ಕರಾವಳಿ ಜಿಲ್ಲೆಯಾಗಿರುವುದರಿಂದ ಉತ್ತರ ಕರ್ನಾಟಕದ ಭಾಗಗಳಿಂದ ಶಿರಸಿ, ಕುಮಟಾ ,ಮಂಗಳೂರು ಭಾಗಗಳಿಗೆ ಪ್ರವಾಸಕ್ಕೆ ತೆರಳುವ ವಾಹನಗಳು ಹಾಗೂ ಪ್ರತಿನಿತ್ಯ ಸಂಚರಿಸುವ ಸಾರಿಗೆ ಬಸ್, ಲಾರಿಗಳು ಕಾಲೇಜಿನ ಮುಂದೆ ಅತ್ಯಂತ ವೇಗವಾಗಿ ಸಂಚರಿಸುತ್ತವೆ, ಅದರಲ್ಲಿಯೂ ಹೊರ ತಾಲೂಕುಗಳಿಂದ ,ಜಿಲ್ಲೆಗಳಿಂದ ಮುಂಡಗೋಡ ಕ್ಕೆ ಮೊದಲ ಬಾರಿ ಬರುವ ಸಾಕಷ್ಟು ವಾಹನ ಸವಾರರಿಗೆ ಕಾಲೇಜು ಇರುವ ಬಗ್ಗೆ ಮಾಹಿತಿಯೇ ಇರುವುದಿಲ್ಲ,ಇದರಿಂದ ಚಾಲಕರು ನಗರ ಭಾಗದಲ್ಲಿ ವೇಗವಾಗಿ ವಾಹನ ಸಂಚಾರ ಮಾಡುತ್ತಾರೆ. ಹೀಗಾಗಿ ಕಾಲೇಜು ಎದುರುಗಡೆ ಸಾಕಷ್ಟು ಬಾರಿ ಅಪಘಾತಗಳು ಆಗಿದ್ದುಂಟು, ಕೆಲ ದಿನಗಳ ಹಿಂದೆ ಕಾಲೇಜಿನಿಂದ ಮನೆಗೆ ತೆರಳುತ್ತಿದ್ದ ವಿಧ್ಯಾರ್ಥಿನಿಯರಿಗೆ ಕಾರೊಂದು ಡಿಕ್ಕಿ ಯಾಗಿ ಮೂವರು ವಿದ್ಯಾರ್ಥಿನಿಯರ ಪೈಕಿ ಓರ್ವಳಿಗೆ ತಲೆಗೆ ಪೆಟ್ಟಾಗಿ ತೀವ್ರ ಸಮಸ್ಯೆ ಅನುಭವಿಸಿದ್ದಾರೆ.ಪ್ರತಿನಿತ್ಯ ಕಾಲೇಜಿಗೆ ವಿದ್ಯಾರ್ಥಿಗಳು ಬೆಳಿಗ್ಗೆ ಬರುವಾಗ ಹಾಗೂ ಸಂಜೆ ಮನೆಗೆ ತೆರಳುವಾಗ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಸಾಗುವ ಪರಿಸ್ಥಿತಿ ಇದೆ.ಆದ ಕಾರಣ ಕಾಲೇಜಿನ ಮುಂಬಾಗ “ಕಾಲೇಜು ವಲಯ ನಿಧಾನವಾಗಿ ಸಾಗಿರಿ” ಎನ್ನುವ ಫಲಕಗಳನ್ನು ಹಾಗೂ ಬ್ಯಾರಿಕೇಡ್ ಹಾಕುವ ತುರ್ತು ಅವಶ್ಯಕತೆ ಇದೆ ಹಾಗೂ ಇದರಿಂದ ವಾಹನಗಳು ತಮ್ಮ ವೇಗ ಮಿತಿ ಕಡಿಮೆ ಮಾಡಿಕೊಂಡು ಕಾಲೇಜು ವಲಯದಲ್ಲಿ ಸಂಚರಿಸುತ್ತವೆ, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಮುಂಡಗೋಡ ಸಿಪಿಐ ಹಾಗೂ ಪಿಎಸ್ಅಯ್ ಅವರಿಗೆ ಮೌಖಿಕವಾಗಿ ಮನವಿ ಮಾಡಲಾಗಿದೆ ಎಂದು ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ರಾದ ಹಜಾರೆ ಅವರು ತಿಳಿಸಿದರು. ಇನ್ನಾದರೂ ಪೊಲೀಸ್ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಶೀಘ್ರವಾಗಿ ಬ್ಯಾರಿಕೇಡ್ ಹಾಗೂ ನಾಮಫಲಕಗಳನ್ನೂ ಹಾಕಿಸಿ ಭವಿಷ್ಯದಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆ ಆಗದ ರೀತಿ ನೋಡಿಕೊಳ್ಳಬೇಕು ಎಂದು ವಿಧ್ಯಾರ್ಥಿಗಳು ಆಗ್ರಹ ಮಾಡುತ್ತಿದ್ದಾರೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.