ಅವಳು ಕೆಲವು ದಿನಗಳಿಂದ ಮನೆಯ ಹಿತ್ತಲಲ್ಲಿ ಬೆಳೆದಿದ್ದ ಕಳೆಗಳನ್ನು ಕಿತ್ತು, ಅಲ್ಲೇ ಬಿಸಾಕುತ್ತಿದ್ದಳು..ಅವಳು ಬಿಸಾಕಿದ ಜಾಗದಲ್ಲೇ ಕಳೆಗಳು ಮತ್ತೆ ಚಿಗುರುತ್ತಿದ್ದವು.. ಅದನ್ನು ನೋಡಿ, “ನಮ್ಮ ಮನದಲ್ಲಿ ಬರುವ ಕೆಟ್ಟ ಆಲೋಚನೆಗಳೂ ಹೀಗೇ ಅಲ್ಲವಾ..?” ಎಂದು ಅನಿಸಿ ಕಳೆಗಳನ್ನು ದೂರ ತೆಗೆದುಕೊಂಡು ಹೋಗಿ ಬಿಸಾಡಿದಳು…!
✍🏻ಮನು ಎಸ್ ವೈದ್ಯ