ಕಲೆ ಎಂಬ ನಟನೆ ಮಾಡಿ
ಪ್ರತಿಭೆ ತೋರು ನಾಯಕ
ಕಲೆಯ ಗುರುತು ಕಳೆಯಬೇಕು
ರಂಗಭೂಮಿ ಸೇವಕ.
ಯಾರು ಏನು ಹಿರಿಯರಲ್ಲ
ಕಲೆ ಅನ್ನು ಪ್ರತಿಭೆಗೆ
ಎಲ್ಲಾ ಗೊತ್ತು ಗತ್ತುಬಿಟ್ಟು
ನವರಸಗಳ ಮೆಟ್ಟಿಗೆ.
ಸೊಕ್ಕು ಬೇಕು ಬದುಕಿನಲ್ಲಿ
ಕಲಿಯುತ್ತಿರುವ ಪಾಠದಿ
ಕಲಿತ ಮೇಲೆ ಮಧವಬಿಟ್ಟು
ಬಾಳಬೇಕು ಜನಜೀವನ ನೋಟದಿ.
ಎತ್ತರಕ್ಕೆ ಏರಬೇಕು
ಇಳಿಯುವೆನೆಂಬ ಹೊತ್ತಲಿ
ತುತ್ತು ತುದಿಯ ಎಟುಕಿದಾಗ
ಬೀಳಬಾರದು ಕುತ್ತಲಿ.
ಕಾಲವೇನು ನಮ್ಮದೆಂಬ
ಭ್ರಮೆಯ ಹುಚ್ಚು ಕಲ್ಪನೆ
ಸಮಯ ನಿನ್ನ ದಲ್ಲದಾಗ
ಎಡವಬಹುದು ಸುಮ್ಮನೆ.
ಇದ್ದುದನ್ನು ಉಂಡು ಹೋಗು
ಒದಗಿ ಬಂದ ಕಾಲಕ್ಕೆ
ಆಸೆ ಎಂಬ ಬಾವಿಯಲ್ಲಿ
ಜಲವೇ ಸಿಗದ ಸಮಯಕೆ.
ಯಾರ ಮನವ ಗೆಲುವಿಗಾಗಿ
ನೀನು ಮೊದಲು ಎಡವಿದೆ
ಅವಲೋಕನದ ಸಮಯದಲ್ಲಿ
ಪ್ರಜ್ಞೆಯನ್ನೆ ಮೀರಿದೆ.
ತೂಗುದೀಪ ತೂಗುತಿಹುದು
ಪ್ರೇಕ್ಷಕರ ಮನದಲಿ
ಬಿರುಗಾಳಿ ಬಿಸುತಿಹುದು
ಮಂಕು ಕವಿದ ಹೊತ್ತಲಿ…
-ಪಿಬಿ ಕಮ್ಮಾರ ಐಹೊಳೆ