ಶಿವಮೊಗ್ಗ : ಅತಿ ಕಡಿಮೆ ಜಾಗದಲ್ಲಿ ಅತಿ ವೇಗವಾಗಿ ಕಾಡನ್ನು ಬೆಳೆಯುವ ಮಿಯಾವಾಕಿ ವಿಧಾನದ ಉಚಿತ ತರಬೇತಿ “ಮಿರಾಕಲ್ ಫಾರೆಸ್ಟ್ ಚಾಲೆಂಜ್” ನಗರದ “ಪವನ್ ಐಸ್ ಕ್ರೀಮ್” ಹೋಟೆಲ್ ಸಭಾಂಗಣದಲ್ಲಿ ಜುಲೈ,೦೭ರ ಭಾನುವಾರ ಸಂಜೆ ೪.೩೦ ರಿಂದ ೫.೩೦ ಗಂಟೆ ತನಕ ನಡೆಯಲಿದೆ. ತರಬೇತಿಯಲ್ಲಿ ಭಾಗವಹಿಸಲು ಆಸಕ್ತಿ ಹೊಂದಿರುವವರು ಸಕಾಲದಲ್ಲಿ ಹಾಜರಿದ್ದು ಹೆಸರನ್ನು ನೊಂದಾಯಿಸುವಂತೆ ಆಯೋಜಕರು ತಿಳಿಸಿದ್ದಾರೆ.
ತರಬೇತಿ ಕಾರ್ಯಕ್ರಮದ ಉದ್ಘಾಟನೆಯನ್ನು ಜೆಸಿಐ ಶಿವಮೊಗ್ಗ ಶರಾವತಿ ಘಟಕದ ಅಧ್ಯಕ್ಷರು ಹಾಗೂ ಮಲ್ನಾಡ್ ಹೋಳಿಗೆ ಮನೆಯ ಮಾಲಿಕರಾಗಿರುವ ಜೆಸಿ. ಸ್ವಪ್ನ ಸಂತೋಷ ಗೌಡ ಅವರು ನೆರವೇರಿಸಲಿದ್ದಾರೆ, ಪತ್ರಕರ್ತ ಗಾರಾ. ಶ್ರೀನಿವಾಸ್. ಉದ್ಯಮಿ ಕೆ. ಮೋಹನ್ ದಾಸ್ ನಾಯಕ್ ಪಾಲುದಾರರು ಪವನ್ ಐಸ್ ಕ್ರೀಮ್ ಶಿವಮೊಗ್ಗ ಇವರು ಮುಖ್ಯ ಅತಿಥಿಗಳಾಗಿದ್ದು, ಕೆ.ಮಹೇಶ್ ಶೆಣೈ ಅವರು ಸಂಪನ್ಮೂಲ ವ್ಯಕ್ತಿಗಳಾಗಿರುತ್ತಾರೆ. ಶಿವಮೊಗ್ಗದ ಪರಿಸರ ಆಸಕ್ತರು ಈ ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ಈ ಮೂಲಕ ವಿನಂತಿಸಲಾಗಿದೆ. ವರದಿ: ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.