ರೈತನ ಮಿತ್ರರು ಆದ್ರು
ರೈತನ ಜೀವಾಳ ಇವ್ರು
ಹೆಗಲಿಗೆ ಹೆಗಲು ಕೊಟ್ಟು ನಿಂತ್ರು
ಜಗಕೆ ಅನ್ನವು ನೀಡಿದ್ರು….//
ಕಷ್ಟ ಸುಖಕ್ಕೆ ಜೊತೆಯಾಗಿ ನಿಂತ್ರು
ಕಾಯಕದಲ್ಲಿ ನಿತ್ಯ ತೊಡಗಿದ್ರು
ಮಣ್ಣೆ ತಮ್ಮ ಹೊನ್ನೆಂದು ತಿಳಿದ್ರು
ಮಣ್ಣಿನಲ್ಲಿ ಹೊನ್ನವು ಬೆಳೆದ್ರು..//
ಮಳೆ ಗಾಳಿ ಎನ್ನದೆ ದುಡಿದ್ರು
ಜೀವನದ ಹಂಗು ತೊರೆದ್ರು
ಹಸಿವಿಗಾಗಿ ನಿತ್ಯ ಬಡಿದಾಡಿದ್ರು
ಜಗದ ಜನರ ಹಸಿವು ನಿಗಿಸಿದ್ರು..//
ರೈತನಿಲ್ಲದೆ ಜಗವಿಲ್ರಿ
ಎತ್ತುಗಳಿಲ್ಲದೆ ರೈತನಿಲ್ರಿ
ಇವರಿಬ್ಬರ ನಂಟು ಶಾಶ್ವತ್ರಿ
ಇವರಿಬ್ಬರಿಗೆ ನನ್ನ ಕೋಟಿ ನಮನ್ರಿ..//
-✍️ಚನ್ನಬಸಪ್ಪ ಬಳಗಾರ,(ಮಾಜಿ ಸೈನಿಕ)ಪೊಲೀಸ ಇಲಾಖೆ