ರಾಯಚೂರು ಜಿಲ್ಲೆಯ ಸಿಂಧನೂರು ನಗರದ ಸಂಚಾರಿ ಪೋಲಿಸ್ ಠಾಣೆಯ ಅವರಣದಲ್ಲಿ ಕರ್ನಾಟಕ ಸರ್ಕಾರ ಪ್ರಾದೇಶಿಕ ಅರಣ್ಯ ವಲಯ, ಹಾಗೂ ಸಮಾಜಿಕ ಅರಣ್ಯ ಇಲಾಖೆ,ಸಂಚಾರಿ ಪೋಲಿಸ್ ಇಲಾಖೆ,ನಗರ ಪೊಲೀಸ್ ಇಲಾಖೆ ಹಾಗೂ ಗ್ರಾಮೀಣ ಪೊಲೀಸ ಇಲಾಖೆ ಮತ್ತು ವನಸಿರಿ ಫೌಂಡೇಶನ್ ವತಿಯಿಂದ ಸಿಂಧನೂರು ಸಂಚಾರಿ ಪೋಲಿಸ್ ಠಾಣೆಯ ಅವರಣದಲ್ಲಿ 100 ಸಸಿಗಳನ್ನು ನೆಡುವ ಮೂಲಕ ವನಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮವನ್ನ ಸಿಂಧನೂರಿನ ಶಾಸಕರಾದ ಶ್ರೀ ಹಂಪನಗೌಡ ಬಾದರ್ಲಿ ಅವರು ಉದ್ಘಾಟನೆ ಮಾಡಿದರು.
ಈ ಸಂಧರ್ಭದಲ್ಲಿ ಮಾನ್ಯ ಶಾಸಕರಾದ ಶ್ರೀ ಹಂಪನಗೌಡ ಬಾದರ್ಲಿ,DYSP BS ತಳವಾರ ಸಿಂಧನೂರು ಉಪ ವಿಭಾಗ, ತಹಶೀಲದಾರ ಅರುಣ್ ದೇಸಾಯಿ, PI ಸುಧೀರ್ ಬೆಂಕಿ, ನಗರ ಠಾಣೆ ಸಿಂಧನೂರು, ನಗರ ಸಭೆ ಆಯುಕ್ತರು ಮಂಜುನಾಥ ಗುಂಡೂರು, ಪ್ರಾದೇಶಿಕ ಅರಣ್ಯ ವಲಯ ಅಧಿಕಾರಿ ಸುರೇಶ ಆಲಮೇಲ್ (RFO),ಟ್ರಾಫಿಕ್ PSI ವೆಂಕಟೇಶ್ ಚೌಹಾಣ್,ಪರಿಸರ ರಾಜ್ಯ ಪ್ರಶಸ್ತಿ ಪುರಸ್ಕೃತರು ಹಾಗೂ ವನಸಿರಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಅಮರೇಗೌಡ ಮಲ್ಲಾಪೂರ, ತಾಲೂಕು ಪಂಚಾಯತ್ ಅಧಿಕಾರಿ ಚಂದ್ರಶೇಖರ ಪಾಟೀಲ್,ಕೃಷಿ ಅಧಿಕಾರಿ ನಜೀರ್ ಅಹ್ಮದ್,ಸಂಚಾರಿ ಪೊಲೀಸ್ ಠಾಣೆಯ PSI ಕೆ.ಕುಮಾರಸ್ವಾಮಿ,ಸನ್ ರೈಸ್ ಕಾಲೇಜು ಪ್ರಾಂಶುಪಾಲರು ಹಾಗೂ ವಿದ್ಯಾರ್ಥಿಗಳು, ಸಂಚಾರಿ ಪೋಲೀಸ್ ಸಿಬ್ಬಂದಿಗಳು,ಸಾಮಾಜಿಕ ಅರಣ್ಯ ವಲಯ ಅಧಿಕಾರಿ ಶ್ರೀಮತಿ ಮಲ್ಲಿಕಾ,ಮತ್ತು ಮಹೆಬೂಬ್ ಸಾಬ್,ವನಸಿರಿ ಫೌಂಡೇಶನ್ ಸದಸ್ಯರಾದ ಗಿರುಸ್ವಾಮಿ ಹೆಡಗಿನಾಳ,ರಾಜು ಪತ್ತಾರ ಬಳಗಾನೂರ, ಯಂಕೋಬ ನಾಯಕ ಬೂತಲದಿನ್ನಿ,ಮುದುಕಪ್ಪ ಹೊಸಳ್ಳಿ ಕ್ಯಾಂಪ್ ಉಪಸ್ಥಿತರಿದ್ದರು.