ಬೀದರ್: ಕರ್ನಾಟಕ ವಿಧಾನ ಪರಿಷತ್ತಿಗೆ ಶಾಸಕರಾಗಿ ದ್ವಿತೀಯ ಬಾರಿಗೆ ಆಯ್ಕೆಯಾದ ಐವನ್ ಡಿಸೋಜಾರವರು ಮೊಟ್ಟ ಮೊದಲ ಬಾರಿಗೆ ಬೀದರ್ ಗೆ ಭೇಟಿ ನೀಡಿದ ಹಿನ್ನೆಲೆ ಬೀದರ್ ನ ದಾವೀದ ಸೈನ್ಯದ ಪ್ರಮುಖರು ಹಾಗೂ ಕ್ರೈಸ್ತ ಮುಖಂಡರಾಗಿರುವ ಎಸ್ ಪಿ ರಾಜಶೇಖರ್ ಹಾಗೂ ವಿಜಯರಾಜ ಮಿಷನ್ ಅಧ್ಯಕ್ಷರಾದ ವಿಜಯ ಶ್ರೀ ಧನರಾಜ್ ರವರ ನೇತೃತ್ವದಲ್ಲಿ ಎಲ್ಲಾ ಕ್ರೈಸ್ತರ ಮುಖಂಡರ ಸಮ್ಮುಖದಲ್ಲಿ ಬೀದರ್ ನ ಕೇಂದ್ರ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಎಸ್ ಆರ್ ಪಂಡಿತ್ ಶಾಲೆ ಸಭಾಂಗಣದಲ್ಲಿ ಐವಾನ್ ಡಿಸೋಜರವರ ಅಭಿನಂದನ ಸಮಾರಂಭ ಹಮ್ಮಿಕೊಳ್ಳಲಾಯಿತು.
ಕ್ರೈಸ್ತ ಸಮುದಾಯದ ಕಿರೀಟ ಐವನ್ ಡಿಸೋಜಾರವರಾಗಿದ್ದಾರೆ ಎಂದು ಎಸ್ ಪಿ ರಾಜಶೇಖರ್ ರವರು ಮಾತನಾಡಿ ತಿಳಿಸಿದರು. ಅದೇ ರೀತಿ ಮುಂದುವರೆದು ಮಾತನಾಡಿದ ಅವರು ಕರ್ನಾಟಕ ಸರ್ಕಾರ ಎರಡನೇ ಅವಧಿಗೆ ಐವಾನ್ ಡಿಸೋಜ ರವರನ್ನು ಎಂಎಲ್ಸಿ ಯಾಗಿ ಆಯ್ಕೆ ಮಾಡಿದ್ದು, ನಮ್ಮೆಲ್ಲರಿಗೂ ಒಂದು ರೀತಿಯಲ್ಲಿ ಹೆಮ್ಮೆಯ ವಿಷಯವಾಗಿದೆ. ಬೀದರ್ ಎಂದರೆ ಐವಾನ್ ಡಿಸೋಜ ಅವರಿಗೆ ಅಪಾರ ಕಾಳಜಿ, ಕಳಕಳಿ ಹಾಗಾಗಿ ಅವರು ಮೊಟ್ಟ ಮೊದಲು ಬೀದರ್ ಗೆ ಭೇಟಿ ಮಾಡಿದ್ದಾರೆ.
ನಮ್ಮೆಲ್ಲ ಕ್ರೈಸ್ತರಿಗೆ ಸಂರಕ್ಷಣೆಯ ಹೊಣೆ ಐವಾನ್ ಡಿಸೋಜರವರ ಮೇಲಿದೆ. ಕ್ರೈಸ್ತರ ಕುಂದು ಕೊರತೆಗಳನ್ನು ಅನಿಸುವಂತೆ, ಕ್ರೈಸ್ತರು ರಾಜಕೀಯವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಅಭಿವೃದ್ಧಿ ಆಗುವಂತೆ ಸಹಕರಿಸಿ ಎಂದು ಎಸ್ ಪಿ ರಾಜಶೇಖರ್ ಅವರು ಮಾತನಾಡಿ ಮನವಿ ಮಾಡಿದರು.
ತದನಂತರದಲ್ಲಿ ಐವಾನ್ ಡಿಸೋಜರವರು ಮಾತನಾಡಿ ಬೀದರ್ ಗೆ ಯಾವಾಗಲೂ ಬಂದಾಗಲೂ ನನಗೆ ಇಲ್ಲಿನ ಭಾಗದ ಜನರು ಬಹಳ ಪ್ರೀತಿ ತೋರಿಸುತ್ತಾರೆ. ತಮ್ಮ ಸ್ವಂತಿಕೆಗಿಂತ ಸ್ವಾರ್ಥಕ್ಕಿಂತ ಸಮುದಾಯ ಜನರ ಏಳಿಗೆ ಮಾಡುವುದು, ಗೌರವ ಕಾಪಾಡುವುದು, ರಕ್ಷಣೆ ಮಾಡುವುದು, ಹೊಣೆ ಅವರ ಅಭಿವೃದ್ಧಿ ಮಾಡುವುದು ನನ್ನ ಜವಾಬ್ದಾರಿಯಾಗಿದೆ. ದೇಶದ ಕಾನೂನು, ನೆಲ, ಜಲ, ಭಾಷೆ ಎಲ್ಲದರಲ್ಲಿಯೂ ಕೂಡ ನಮ್ಮ ಕ್ರೈಸ್ತ ಸಮುದಾಯದವರು ಆವರಿಸಿಕೊಂಡಿದ್ದಾರೆ. ಬರೀ ಕ್ರೈಸ್ತ ಸಮುದಾಯದವರಷ್ಟೇ ಅಲ್ಲದೆ, ಸಮಾಜದ ಕಟ್ಟ ಕಡೆಯ ಜನರ ರಕ್ಷಣೆ ಮಾಡುವುದು, ಜೊತೆಗೆ ಎಲ್ಲರ ಒಳಿತಿಗಾಗಿ ಪ್ರಾರ್ಥನೆ ಮಾಡುವ ಸಮುದಾಯ ಏಕೈಕ ಸಮುದಾಯ ಅಂದರೆ ಕ್ರೈಸ್ತ ಸಮುದಾಯ ಆಗಿದೆ. ಶಿಕ್ಷಣ ಕ್ಷೇತ್ರದಲ್ಲಿ ,ಸಾಮಾಜಿಕ ಕ್ಷೇತ್ರದಲ್ಲಿ ಹೀಗೆ ಎಲ್ಲಾ ಕ್ಷೇತ್ರದಲ್ಲಿ ಕ್ರೈಸ್ತ ಕೊಡುಗೆಯ ಅಪರವಾಗಿದೆ. ಕ್ರೈಸ್ತರು ಮತಾಂತರ ಮಾಡ್ತಾರೆ, ಕ್ರೈಸ್ತರನ್ನು ಹೊಡೆಯಬೇಕು, ಕ್ರೈಸ್ತರನ್ನು ದಬ್ಬಾಳಿಕೆ ಮಾಡಬೇಕು ಎನ್ನುವಂತದ್ದು,ಒಂದಿಷ್ಟು ಜನರ ದೃಷ್ಟಿಕೋನವಾಗಿದೆ.
ಅದಕ್ಕಾಗಿ ಮತಾಂತರ ದೇಶದ ಕಾಯ್ದೆ ಜಾರಿಗೆ ತಂದಿರಬಹುದು, ಆದರೆ ಇದೆಲ್ಲದರಿಂದ ಕ್ರೈಸ್ತರಿಗೆ ರಕ್ಷಣೆ ಮಾಡಿ ಎನ್ನುವ ಒಂದು ಅನಿವಾರ್ಯ ಕೂಡ ಬಂದಿದೆ. ಆದರೆ ಕ್ರೈಸ್ತರ ಪ್ರಗತಿ ಅಭಿವೃದ್ಧಿ ಮಾಡುವುದು ರಕ್ಷಣೆ ಮಾಡುವುದು ನಮ್ಮೆಲ್ಲರ ಹೊಣೆಯಾಗಿದೆ ಎಂದು ತಿಳಿಸಿದರು.
ವರದಿ:ರೋಹನ್ ವಾಘಮಾರೆ