ವಿಜಯನಗರ ಜಿಲ್ಲೆಯ ಕೊಟ್ಟೂರು ಪಟ್ಟಣದ ಯುನಿಕ್ ಚಾರಿಟಬಲ್ ಟ್ರಸ್ಟ್ (ರಿ.) ಹಾಗೂ ಸರ್ಕಾರಿ ಬಾಲಕಿಯರ ಪ್ರೌಢ ಶಾಲೆ ಇವರ ಸಹಯೋಗದಲ್ಲಿ ಜುಲೈ 6 ರಂದು “ಮಕ್ಕಳ ಹಕ್ಕುಗಳಿಂದ ಮಕ್ಕಳ ರಕ್ಷಣೆ” ಎಂಬ ತಲೆಬರಹದಡಿ ಶಾಲಾ ಮಕ್ಕಳಿಗಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಪಿ.ಎಂ. ಈಶ್ವರಯ್ಯ ಹೇಳಿದರು.
ಸರ್ಕಾರಿ ಬಾಲಕಿಯರ ಪ್ರೌಢ ಶಾಲೆಯಲ್ಲಿ ಸಂಶೋಧನೆ ಹಾಗೂ ಸಮಾಜ ಕಾರ್ಯವಿಭಾಗದ ಎಂ. ಬೊಮ್ಮಣ್ಣ ಹಾಗೂ ಶಾಲಾ ಮುಖ್ಯೋಪಾಧ್ಯಾಯರಾದ ಎಸ್. ಎ. ಬಸವರಾಜ, ಮಂಜುನಾಥ ಗಂಗಾವತಿ, ಕೆ ರಾಮಣ್ಣ, ಕೆ.ಎಸ್. ರುದ್ರೇಶ ಹಾಗೂ ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ಆಯೋಗದ ನಿಕಟ ಪೂರ್ವ ಸದಸ್ಯರಾದ ಹೆಚ್.ಸಿ.ರಾಘವೇಂದ್ರ ಅವರು ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಮಕ್ಕಳ ಹಕ್ಕುಗಳನ್ನು ನಮಗೆ ಅರಿವಿಲ್ಲದೆ ಉಲ್ಲಂಘನೆ ಮಾಡುತ್ತೆವೆ. ನಮ್ಮ ಶಿಕ್ಷಣ ವ್ಯವಸ್ಥೆ ಮಕ್ಕಳಿಗೆ ಕಲಿಕೆಗೆ ಬೇಕಾದ ಸೂಕ್ತ ವಾತಾವರಣ ರೂಪಿಸುತ್ತಿಲ್ಲ, ಮಕ್ಕಳು ಅಂದರೆ ಯಾರು? ಎಂಬ ಪ್ರಶ್ನೆ ಕೇಳಿ ಒಬ್ಬ ತಾಯಿ ಗರ್ಭಧರಿಸಿದ ದಿನದಿಂದ ಇಡಿದು 18 ವರ್ಷದ ಒಳಗಿನ ಬಾಲಕ ಬಾಲಕಿಯರನ್ನ ನಾವು ಮಕ್ಕಳು ಎನ್ನುತ್ತೇವೆ ಎಂದು ಅವರೆ ಉತ್ತರಿಸಿದರು, ಜನನ ಪ್ರಮಾಣ ಪತ್ರ ಪಡೆದ ದಿನದಿಂದಲೇ ನಾನು ಭಾರತ ದೇಶದ ಪ್ರಜೆ ಹೊರತು, ನಾನು ಮತದಾನ ವಯಸ್ಸಿಗೆ ಬಂದಮೇಲೆ ಭಾರತ ಪ್ರಜೆಯಲ್ಲ, ಮಕ್ಕಳ ಅಭಿಪ್ರಾಯ, ಅಭಿರುಚಿ, ಆಸಕ್ತಿಗಳನ್ನು ಪೋಷಕರು ಸಮಾಜ ಗೌರವಿಸಬೇಕು, ಮಕ್ಕಳ ಹಕ್ಕುಗಳು ಮಕ್ಕಳನ್ನು ಹೇಗೆ ರಕ್ಷಣೆ ನೀಡುತ್ತವೆ. ಶಾಲೆ,ಮನೆ,ಸಮಾಜದಲ್ಲಿ ಮಕ್ಕಳ ಭಾಗವಹಿಸುವಿಕೆಗೆ ಪ್ರೋತ್ಸಾಹ ನೀಡಬೇಕು , ಸಮಾನತೆ ಹಕ್ಕಿರಬೇಕು, ಜಾತಿ, ಬೇಧವಿಲ್ಲದೆ ಜೀವಿಸಬೇಕು, ಶಾಲೆ ನಮಗೆ ವಿದ್ಯೆ ಬುದ್ಧಿ ನೀಡುವುದರ ಜೊತೆಗೆ ರಕ್ಷಣೆ ನೀಡುತ್ತದೆ ಎಂದು ತಮ್ಮ ವೃತ್ತಿಪರ ಅನುಭವಗಳನ್ನು ಉದಾಹರಣೆ ಕೊಡುವ ಮೂಲಕ ಹೆಚ್.ಸಿ. ರಾಘವೇಂದ್ರ ಮಕ್ಕಳ ಹಕ್ಕುಗಳಿಂದ ಮಕ್ಕಳ ರಕ್ಷಣೆ ಹೇಗೆ ಸಾದ್ಯವಾಗುತ್ತದೆ ಎಂಬುವ ಕುರಿತು ಮಾಹಿತಿ ನೀಡಿದರು.
ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಪದ್ಮನಾಭ ಕರಣಂ ಮಾತನಾಡಿದ ಮಕ್ಕಳ ದೇಹದಲ್ಲಿ ಕಬ್ಬಿಣ ಅಂಶದ ಕೊರತೆ ಹೆಚ್ಚಾಗಿ ಕಂಡುಬರುತ್ತಿದೆ. ಅದಕ್ಕಾಗಿ ಎಲ್ಲಾ ಶಾಲೆಗಳಲ್ಲಿ ಪೌಷ್ಟಿಕಯುಕ್ತ ಆಹಾರ ಪದಾರ್ಥಗಳನ್ನು ಸರ್ಕಾರ ನೀಡುತ್ತಿದೆ, ಮಕ್ಕಳ ಕಲಿಕೆಗೆ ಶಾಲಾ ಪರಿಸರ ಅತ್ಯುತ್ತಮವಾಗಿದೆ. ಶಾಲೆಗೆ ಬರದಿರುವ ಮಕ್ಕಳನ್ನು ಶಾಲೆಗೆ ಕರೆತನ್ನಿ, ಈ ಕೆಲಸ ಕೇವಲ ಶಿಕ್ಷಕರ ಜವಾಬ್ದಾರಿ ಮಾತ್ರವಲ್ಲ ಸ್ನೇಹಿತರಾಗಿ ನಿಮ್ಮ ಜವಾಬ್ದಾರಿ ಕೂಡಾ ಇದೆ. ನಿಮ್ಮ ಹಕ್ಕುಗಳನ್ನು ನೀವು ದೈರ್ಯದಿಂದ ಕೇಳಿ ಪಡೆಯಬೇಕು ಎಂದರು.
ನಾವುಗಳು ಕಾನೂನಿನ ಚೌಕಟ್ಟಿನಲ್ಲಿ ಇದ್ದು ಕೂಡಾ ನಮ್ಮ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ , ಮಕ್ಕಳ ಹತ್ಯೆ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿರುವುದು ಕಂಡು ಬರುತ್ತಿವೆ, ನಾವುಗಳು ದೇಶದ ಅಡಿಪಾಯವಾದ ಮಕ್ಕಳ ಭವಿಷ್ಯವನ್ನು ಹೇಗೆ ರಕ್ಷಿಸಿಕೊಳ್ಳಬೇಕು ಎಂಬುವುದೇ ಒಂದು ದೊಡ್ಡ ಸವಾಲಿನ ಕೆಲಸವಾಗಿದೆ. ಬಾಲ್ಯವಿವಾಹ ನಡೆದರೆ ಮಕ್ಕಳಾಗಿ ನೀವು ದೈರ್ಯದಿಂದ ತಡೆಯಿರಿ, ದಯವಿಟ್ಟು ಮೊಬೈಲ್ ನಿಂದ ಆದಷ್ಟೂ ದೂರವಿರಿ, ಯಾವುದೇ ವ್ಯಕ್ತಿಯ ಪಾಲಿಸಿನ ಮಾತಿಗೆ ಮರುಳಾಗಿ ಪ್ರೀತಿ ಪ್ರೇಮ ಎಂದುಕೊಂಡು ನಿಮ್ಮ ಅಮೂಲ್ಯವಾದ ಬಂಗಾರದಂತ ಜೀವನ ಕಳೆದುಕೊಳ್ಳಬೇಡಿ, ಕಲಿಕೆ ಎಂಬುವುದು ಮಾನವೀಯ ಮೌಲ್ಯಗಳನ್ನು ಬೆಳಸಲಿಕ್ಕೆ ಇರಬೇಕು ಅಷ್ಟೇ ವಿನಃ ಕೆಲಸದ ಉದ್ದೇಶಕ್ಕೆ ಆಗಬಾರದು. ಮಾನವೀಯ ಮೌಲ್ಯಗಳಿಲ್ಲದಿದ್ದರೆ ನಿಮ್ಮ ಕಲಿಕೆ ಅರ್ಥಪೂರ್ಣ ಆಗುವುದಿಲ್ಲ, ಮಾನವೀಯತೆ ಗುಣಗಳ ಕಲಿಕೆ ಯಿಲ್ಲದೆ ಓದಿ ಡಾಕ್ಟರ್, ಇಂಜಿನಿಯರ್, ಆದರೆ ಸಮಾಜಕ್ಕೆ ಏನು ಪ್ರಯೋಜನ ? ಎಂದು ಸಂಶೋಧನೆ ಹಾಗೂ ಸಮಾಜ ಕಾರ್ಯವಿಭಾಗದ ಶ್ರೀ ಕೃಷ್ಣದೇವರಾಯ ವಿ.ವಿ. ಪ್ರಾಧ್ಯಾಪಕರಾದ ಎಂ.ಬೊಮ್ಮಣ್ಣ ಮಕ್ಕಳ ಕುರಿತು ಮಾತನಾಡಿದರು.
ಗಂಗಮ್ಮ ಪಿ. ಮತ್ತು ಸುನಿತ ವಿಧ್ಯಾರ್ಥಿನಿಯರು ಪ್ರಾರ್ಥನೆ ಹಾಡಿದರು. ಪಿ.ಎಂ. ಈಶ್ವರಯ್ಯ ಸ್ವಾಗತಿಸಿದರು, ಸುರೇಶ್ ಎಸ್. ನಿರೂಪಿಸಿದರು. ಪ್ರಾಸ್ತಾವಿಕವಾಗಿ ಮಂಜುನಾಥ ಮೋರಗೇರಿ ಮಾತನಾಡಿದರು. ಯುನಿಕ್ ಚಾರಿಟಬಲ್ ಟ್ರಸ್ಟ್ ನ ಸರ್ವ ಸದಸ್ಯರು, ಶಾಲಾ ಸಹಶಿಕ್ಷಕರು ಇತರರು ಉಪಸ್ಥಿತರಿದ್ದರು.