ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಹಿರಿಯರೊಂದಿಗೆ ನಾವು ನಮ್ಮೊಂದಿಗೆ ಹಿರಿಯರು ಇದೇ ನಮ್ಮ ಭಾರತೀಯ ಸಂಸ್ಕೃತಿ-ರಾಜೇಶ ಮಾಣಿಕ್

ರಾಯಚೂರು ಜಿಲ್ಲೆಯ ಸಿಂಧನೂರು ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಕರ್ನಾಟಕ ಸರ್ಕಾರದ ರಾಜ್ಯ ಪ್ರಶಸ್ತಿ ಪುರಸ್ಕೃತ ಸಂಸ್ಥೆಯಾದ ಶ್ರೀಮಠ ಸೇವಾ ಟ್ರಸ್ಟ್ (ರಿ.) ಹರೇಟನೂರು ಕಾರುಣ್ಯ ನೆಲೆ ವೃದ್ಧಾಶ್ರಮಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದಲ್ಲಿ ರಾಜೇಶ ಮಾಣಿಕ್ ಪತ್ರಕರ್ತರು ಲಿಂಗಸುಗೂರು ಇವರ 40ನೇ ವರ್ಷದ ಜನ್ಮದಿನ ಸಮಾರಂಭ ಕಾರ್ಯಕ್ರಮವನ್ನು ಆಶ್ರಮದಲ್ಲಿ ” ಹಿರಿಯರೊಂದಿಗೆ ನಾವು ನಮ್ಮೊಂದಿಗೆ ಹಿರಿಯರು ” ಎನ್ನುವ ವಿಶೇಷ ಕಾರ್ಯಕ್ರಮದಡಿಯಲ್ಲಿ ಆಶ್ರಮದಲ್ಲಿ ಮಹಾಪ್ರಸಾದ ಸೇವೆ ಹಾಗೂ ಹಣ್ಣು ಹಂಪಲುಗಳನ್ನು ವಿತರಿಸುವ ಮೂಲಕ ಅರ್ಥಪೂರ್ಣವಾಗಿ ನೆರವೇರಿಸಿದರು. ಈ ಕಾರ್ಯಕ್ರಮದಲ್ಲಿ ಪತ್ರಕರ್ತರಾದ ರಾಜೇಶ ಮಾಣಿಕ್. ಲಕ್ಷ್ಮಿ ಮಾಣಿಕ್ ದಂಪತಿಗಳಿಗೆ ಆಶ್ರಮದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಈ ಕಾರ್ಯಕ್ರಮದಲ್ಲಿ ಪತ್ರಕರ್ತರಾದ ರಾಜೇಶ್ ಮಾಣಿಕ್ ಮಾತನಾಡಿ ಇಂದು ನನ್ನ ಜನ್ಮ ಸಮಾರಂಭ ಕಾರ್ಯಕ್ರಮವನ್ನು ಜನ್ಮ ಸಾರ್ಥಕ ದಿನ ಎನ್ನುವ ಧ್ಯೇಯ ವಾಕ್ಯದೊಂದಿಗೆ ಹಿರಿಯರೊಂದಿಗೆ ನಾವು ನಮ್ಮೊಂದಿಗೆ ಹಿರಿಯರು ಎನ್ನುವ ವಿಶೇಷ ಕಾರ್ಯಕ್ರಮದಡಿಯಲ್ಲಿ ನನ್ನ ಹುಟ್ಟುಹಬ್ಬವು ಅರ್ಥಪೂರ್ಣವಾಗಿದೆ ಎನ್ನುವ ಆತ್ಮ ತೃಪ್ತಿ ನನಗಿದೆ. ನಮ್ಮ ಮಕ್ಕಳಿಗೆ ಶಿಕ್ಷಣ ಅಷ್ಟೇ ಅಲ್ಲದೆ ಸಂಸ್ಕಾರವೂ ಕೂಡ ತಂದೆ ತಾಯಿಗಳಾದ ನಾವು ಕಲಿಸಬೇಕಾಗಿದೆ. ವಿದ್ಯಾಭ್ಯಾಸ ಜೀವನದಲ್ಲಿ ನಾನು ಎದುರಿಸಿರುವಂತಹ ಅದೆಷ್ಟೋ ಕಷ್ಟಗಳು ಕಾರುಣ್ಯ ಆಶ್ರಮದಲ್ಲಿನ ಸೇವೆಯ ಮೂಲಕ ಮರೆಯುತ್ತಿದ್ದೇನೆ. ನಮ್ಮ ಹೆತ್ತವರಿಗೆ ಕೊಡುವ ಸಂತೋಷವೆಂದರೆ ಸಾರ್ವಜನಿಕ ವಲಯದಲ್ಲಿ ನಾವು ಮಾಡುವ ಸಾಮಾಜಿಕ ಕೆಲಸಗಳು ನಮ್ಮ ಹೆತ್ತವರ ಅದೆಷ್ಟೋ ನೋವುಗಳನ್ನು ಮರೆಸುತ್ತವೆ. ನಮ್ಮ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕರುಣೆಯ ಮಂದಿರವಾಗಿ ಕಾರುಣ್ಯ ಆಶ್ರಮವು ಅದೆಷ್ಟು ಅನಾಥ ನೊಂದ ಜೀವಿಗಳಿಗೆ ನಿರಂತರ ಜೋಳಿಗೆಯ ಮೂಲಕ ಪಾಲನೆ ಪೋಷಣೆ ಮಾಡುತ್ತಿರುವುದು ಅತ್ಯದ್ಭುತವಾದ ಕಾರ್ಯವಾಗಿದೆ. ನಾನು ಕಂಡಿರುವ ನಮ್ಮ ಕರ್ನಾಟಕದಲ್ಲಿನ ಅದೆಷ್ಟೋ ಆಶ್ರಮಗಳು ಆದಾಯದ ಮೂಲಕ್ಕಾಗಿ ಹುಟ್ಟಿಕೊಂಡಿರಬಹುದು ಎನ್ನುವ ಅನುಮಾನ ನನ್ನನ್ನು ಕಾಡುತ್ತಿದೆ. ಆದರೆ ಕಾರುಣ್ಯ ಆಶ್ರಮವು ವಿಶಿಷ್ಟ ವಿನೂತನ ರೀತಿಯಲ್ಲಿ ಕನಸಲ್ಲಿಯೂ ಕೂಡ ಕಂಡರಿಯದ ಅದೆಷ್ಟೋ ಕಾರ್ಯಗಳನ್ನು ನೆರವೇರಿಸುತ್ತಿದೆ. ಈ ಕಾರುಣ್ಯ ಆಶ್ರಮಕ್ಕೆ ನಮ್ಮ ಲಿಂಗಸಗೂರಲ್ಲದೆ ನಮ್ಮ ಕಲ್ಯಾಣ ಕರ್ನಾಟಕದ ಜನರು ಬೆನ್ನೆಲುಬಾಗಿದ್ದಾರೆ. ಸಿಂಧನೂರು ತಾಲೂಕಿನ ಹರೇಟನೂರು ಗ್ರಾಮದ ದ್ಯಾವಮ್ಮ ದೇವಿಯ ಅರ್ಚಕರಾಗಿ ನಿರಂತರ ಜೋಳಿಗೆಯ ಕಾಯಕದೊಂದಿಗೆ ಈ ಆಶ್ರಮವನ್ನು ನಡೆಸುತ್ತಿರುವ ಜಂಗಮ ಸಮಾಜದ ಅಮರಯ್ಯ ಸ್ವಾಮಿ ಹಿರೇಮಠ ಅವರಿಗೆ ಹಾಗೂ ಅವರ ಕುಟುಂಬಕ್ಕೆ ಆ ಭಗವಂತ ಉತ್ತಮ ಆಯಸ್ಸು ಆಯುರಾರೋಗ್ಯ ಸುಖ ಶಾಂತಿ ನೆಮ್ಮದಿಯನ್ನು ನೀಡಲಿ ಎಂದು ನಾನು ಸದಾಾವಕಾಲ ಬೇಡಿಕೊಳ್ಳುತ್ತೇನೆ. ಇಂದಿನ ನನ್ನ ಹುಟ್ಟುಹಬ್ಬಕ್ಕೆ ಶುಭ ಕೋರಿದ ಎಲ್ಲರಿಗೂ ಹೃದಯಪೂರ್ವಕ ಅಭಿನಂದನೆಗಳು ಎಂದು ಭಾವನಾತ್ಮಕವಾಗಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಲಕ್ಷ್ಮಿ ಮಾಣಿಕ್. ಸಂಗೀತಾ ಮಾಣಿಕ್. ಅಭಿಷೇಕ್ ಮಾಣಿಕ್. ಮಂಜು ಹೂಗಾರ ರವಡಕುಂದಾ. ಹಾಗೂ ಆಶ್ರಮದ ಸಿಬ್ಬಂದಿಗಳಾದ ಡಾ. ಚನ್ನಬಸವ ಸ್ವಾಮಿ ಹಿರೇಮಠ. ಸುಜಾತ ಹಿರೇಮಠ. ಸಿದ್ದಯ್ಯ ಸ್ವಾಮಿ ಶರಣಮ್ಮ ಮಲ್ಲಯ್ಯ ಸ್ವಾಮಿ ಮುತ್ತಯ್ಯ ಸ್ವಾಮಿ ಹರ್ಷವರ್ಧನ ಅನೇಕರು ಉಪಸ್ಥಿತರಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ