ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ನಮ್ಮ ಹೋರಾಟ ನಿರಂತರ ಇರಲಿದೆ: ಸಾಮಾಜಿಕ ಯುವ ಹೋರಾಟಗಾರ ಸುರೇಶ ಕೋರಿ

ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದ ಕರ್ನಾಟಕ ಮಹಾವಿದ್ಯಾಲಯದ(ಕೆಸಿಡಿ) ಪ್ರಥಮ ಪಿಯು ಕಲಾ, ವಾಣಿಜ್ಯ, ವಿಜ್ಞಾನ ಹಾಗೂ ಪದವಿಗಳಾದ ಬಿಎ, ಬಿಕಾಂ, ಬಿಎಸ್ಸಿ, ಬಿಸಿಎ ಕೋರ್ಸ್‌ಗಳ ರೋಸ್ಟರ್ ಪದ್ಧತಿಯನ್ನು ಗಾಳಿಗೆ ತೂರಿ ಪ್ರವೇಶಾತಿಯ ಅರ್ಹತೆಯುಳ್ಳ ವಿದ್ಯಾರ್ಥಿಗಳಿಗೆ ಪ್ರವೇಶಾತಿಯನ್ನು ನಿರಾಕರಿಸುತ್ತಿರುವ ಆಡಳಿತ ಮಂಡಳಿಯ ವಿರುದ್ಧ ಪ್ರಮುಖ ಬೇಡಿಕೆಗಳೊಂದಿಗೆ ಪೋಷಕ-ವಿದ್ಯಾರ್ಥಿಗಳು ಕೌನ್ಸಲಿಂಗ್ ಕೇಂದ್ರದ ಮುಂದೆ ಧಿಡೀರನೆ ಹೋರಾಟಕ್ಕೆ ಕುಳಿತು ಪ್ರತಿಭಟಿಸಿದರು.

ವಿದ್ಯಾರ್ಥಿ-ಪೋಷಕರ ಬೇಡಿಕೆಗಳು ಈ ಕೆಳಗಿನಂತಿವೆ.

  1. ಈಗಾಗಲೇ ಹೆಚ್ಚಿನ ಸಂಖ್ಯೆಯಲ್ಲಿ Enhanced Fee(ಹೆಚ್ಚುವರಿ ಶುಲ್ಕ) ಸೀಟುಗಳನ್ನು ತೆಗೆದುಕೊಳ್ಳುತ್ತಿದ್ದು ಅವುಗಳನ್ನು ನಿಲ್ಲಿಸಿ ಎಲ್ಲಾ ಸೀಟುಗಳನ್ನು ಸಾಮಾನ್ಯ ಸೀಟುಗಳಾಗಿ ರೂಪಾಂತರಿಸಬೇಕು.
  2. ವಿದ್ಯಾರ್ಥಿಗಳ ಹೆಚ್ಚು ಬೇಡಿಕೆಯಿರುವ ವಿಷಯಗಳ ಸೀಟುಗಳನ್ನು 75% ಹೆಚ್ಚಿಸಬೇಕು.
  3. ಆಯ್ಕೆ ಮಾಡಿದ ವಿಷಯಗಳನ್ನು ಹೊರತುಪಡಿಸಿ ವಿದ್ಯಾರ್ಥಿಗಳಿಗೆ ಸಂಬಂಧವೇ ಇರದ ವಿಷಯಗಳನ್ನು ಒತ್ತಾಯಪೂರ್ವಕವಾಗಿ ಕೌನ್ಸಲಿಂಗ್‌ನಲ್ಲಿ ಕೊಡುತ್ತಿರುವುದನ್ನು ಈ ಕೂಡಲೇ ನಿಲ್ಲಿಸಬೇಕು.
  4. ಪ್ರಥಮ ಹಾಗೂ ದ್ವಿತೀಯ ಸುತ್ತಿನ ಮೆರಿಟ್ ಆಧಾರಿತ ಪಟ್ಟಿಯನ್ನು ಪ್ರಕಟಿಸಬೇಕು. ಮೆರಿಟ್ ವಿದ್ಯಾರ್ಥಿಗಳಿಗೆ 2-3 ದಿನ ಪ್ರವೇಶಕ್ಕೆ ಕಾಲಾವಕಾಶ ಮಾಡಿಕೊಡಬೇಕು.
  5. ಅರ್ಜಿ ಸಲ್ಲಿಸಿದ ಪ್ರತಿಯೊಬ್ಬ ವಿದ್ಯಾರ್ಥಿಗೆ ಒಂದು ವಿಷಯದ ಆಯ್ಕೆಗೆ ಅವಕಾಶ ಬಿಟ್ಟು ಕನಿಷ್ಠ ಎರಡರಿಂದ-ಮೂರು ವಿಷಯಗಳನ್ನು ಆಯ್ದುಕೊಳ್ಳಲು ಅವಕಾಶ ನೀಡಬೇಕು.
  6. ಕಲ್ಯಾಣ ಕರ್ನಾಟಕದ 8% ಮೀಸಲಾತಿಯನ್ನು ಪರಿಗಣಿಸಬೇಕು. ಕೆಟಗೆರಿಯ ಆಯ್ಕೆ ಮಾಡುವಾಗಲೇ HK ಆಯ್ಕೆ ಪಟ್ಟಿಯನ್ನು ತತ್‌ಕ್ಷಣ ಬಿಡುಗಡೆಗೊಳಿಸಬೇಕು.

ಈ ಮೇಲಿನ ಬೇಡಿಕೆಗಳನ್ನು ಕೂಡಲೇ ನಿರ್ಲಕ್ಷಿಸದೇ ಲಿಖಿತ ಆದೇಶವನ್ನು ಹೊರಡಿಸುವುದರ ಮೂಲಕ ಖಚಿತಪಡಿಸದೇ ವಿಳಂಬ ನೀತಿಯನ್ನು ಅನುಸರಿಸಿದರೆ ನಮ್ಮ ಹೋರಾಟದ ಮುಂದಿನ ಸ್ವರೂಪ ಬದಲಾಗಲಿದೆ ಎಂಬ ಎಚ್ಚರಿಕೆಯನ್ನು ಪೋಷಕ-ವಿದ್ಯಾರ್ಥಿಗಳು ಆಡಳಿತ ಮಂಡಳಿಗೆ ಜು.12 ರಂದು ಗಮನಕ್ಕೆ ತರಲಾಗಿತ್ತು.

ಮುಂದುವರೆದು ಇಂದು ಮಹಾವಿದ್ಯಾಲಯದ ಪ್ರಾಂಶುಪಾಲರು ಹಾಗೂ ವಿಶ್ವವಿದ್ಯಾಲಯದ ಕುಲಪತಿಗಳಿಗೆ ಪ್ರತ್ಯೇಕವಾಗಿ ಮನವಿ ಪತ್ರವನ್ನು ಸಲ್ಲಿಸಿ ಬಡ ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಮನವರಿಕೆ ಮಾಡಿ ತಿಳಿಸಲಾಗಿದ್ದು, 108 ವರ್ಷದ ಇತಿಹಾಸ ಇರುವ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಂದ ಅನಾವಶ್ಯಕವಾಗಿ ಹೆಚ್ಚುವರಿ ಶುಲ್ಕ ಕಟ್ಟಿಸುವಂತಹ ಜರೂರು ಏನಿದೆ ಎಂಥಾ ಸಮಸ್ಯೆ ಈ ಕರ್ನಾಟಕ ಕಾಲೇಜು ಸರಕಾರಿ ಸಂಸ್ಥೆಯಾಗಿದ್ದು ಅದನ್ನು ಉಳಿಸುವಲ್ಲಿ ನಮ್ಮ ಪ್ರಯತ್ನ ಸದಾ ಮುಂದುವರೆಯುತ್ತದೆ.

ಅತಿಹೆಚ್ಚು SC-ST ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಹೆಚ್ಚುವರಿ ಶುಲ್ಕ ಅಡಿಯಲ್ಲಿ ಪ್ರವೇಶ ಪಡೆಯಲು ಸಾಧ್ಯವೇ ಇಲ್ಲಾ ಎಂಬ ನಮ್ಮ ಬೇಡಿಕೆಗೆ ಇದುವರೆಗೂ ಸಕರಾತ್ಮಕವಾಗಿ ಸ್ಪಂದನೆ ಬರದೇ ಇರುವುದರಿಂದ ನಾವು ಹೋರಾಟ ಕೈಗೊಳ್ಳಲು ಹಿಂದೇಟು ಹಾಕುವುದಿಲ್ಲ. Enhance fee ರದ್ದಾದರೆ ಎಷ್ಟೋ ಬಡಮಕ್ಕಳಿಗೆ ಉಪಯೋಗವಾಗಿ ಅಧಿಕಾರಿ ವರ್ಗಕ್ಕೆ ಪುಣ್ಯ ಬರುತ್ತದೆ. ಕೌನ್ಸಲಿಂಗ್ ಬಿಟ್ಟರೆ ಬಹಳಷ್ಟು ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಮ್ಮ ಮನವಿಗೆ ಮಹಾವಿದ್ಯಾಲಯವು ಮುಂದಿನ ವರ್ಷದಿಂದ ಕೌನ್ಸಲಿಂಗ್ ಮಾಡುವುದಿಲ್ಲ ಸಮಸ್ಯೆಯಾಗಿದೆ ಒಪ್ಪಿಕೊಳ್ಳುತ್ತೇವೆ ಅದನ್ನು ಬಗೆಹರಿಸುತ್ತೇವೆ ಎಂದು ಮೌಖಿಕವಾಗಿ ಅಲ್ಲಿನ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ ಒಂದು ವೇಳೆ ಇದೇರೀತಿ ಮುಂದುವರೆದರೆ ಮುಂದಿನ ವರ್ಷವೂ ಹೋರಾಟ ಅನಿವಾರ್ಯ. Enhance feeಗೆ ಇರುವ ಪ್ರವೇಶಾತಿಯ ಬೇಡಿಕೆಯನ್ನು ನಾವು ಬಿಡಲೇಬೇಕು ಎಂದು ಒತ್ತಾಯ ಮಾಡುತ್ತಿದ್ದೇವೆ ಇಲ್ಲದಿದ್ದರೆ ಖಾಸಗಿ ಮತ್ತು ಸರಕಾರಿ ಸಂಸ್ಥೆಗಳ ಮಧ್ಯ ಇರುವ ವ್ಯತ್ಯಾಸವೇನು ಇದ್ದಂತಾಗುತ್ತದೆ. ಈ ಸಲ ಕೆ.ಸಿ.ಡಿ ಕಾಲೇಜಿಗೆ ಸಿಕ್ಕಾಪಟ್ಟೆ ಬೇಡಿಕೆ ಇರುವುದರಿಂದ Enhanced fee ಬೇಡ ಎಂಬ ನಮ್ಮ ಬೇಡಿಕೆಗೆ ಬಾಗದಿದ್ದರೆ ಮುಂದಿನ ಹಂತದ ದೊಡ್ಡ ಹೋರಾಟಕ್ಕೆ ಅಣಿಯಾಗಬೇಕಾಗುತ್ತದೆ ಎಂದು ಸಾಮಾಜಿಕ ಹೋರಾಟಗಾರ ಸುರೇಶ ಕೋರಿ ಎಚ್ಚರಿಕೆ ನೀಡಿದರು.

ಹೈಕೋರ್ಟ್ ವಕೀಲ ವಿಜಯಾನಂದ ಜಾದವ್ ಮಾತನಾಡಿ; ವಿದ್ಯಾರ್ಥಿ-ಪೋಷಕರು, ಸಾಮಾಜಿಕ ಹೋರಾಟಗಾರರು, ವಕೀಲರು ಹೋರಾಟಕ್ಕೆ ಕುಳಿತಿದ್ದೇವೆ ಎಂಬ ಕಾರಣಕ್ಕೆ ನಮ್ಮ ಪಟ್ಟುಬಿಡದ ಹೋರಾಟಕ್ಕೆ ಕಂಗಾಲಾದ ಆಡಳಿತ ಮಂಡಳಿ ಹೋರಾಟದ ಫಲವಾಗಿ ಒಂದೇ ದಿನದಲ್ಲಿ HK ಲಿಸ್ಟ್ ಬಿಟ್ಟರು ಹಾಗೂ ಇನ್ನೂ 50 ಸೀಟುಗಳನ್ನು Normal seat(Normal seat ಅವಧಿ ಮುಗಿದರೂ) ಕೊಡಲು ಮೌಖಿಕವಾಗಿ ಸೂಚಿಸಿದ್ದೇನೆಂದು ವಿಸಿಯವರು ನಮಗೆ ಹೇಳಿದ್ದಾರೆ ಹಾಗೂ Enhance seat ಗಳು ಎಷ್ಟು ಇವೆ ಎಂದು ಇದುವರೆಗೂ ಮಹಾವಿದ್ಯಾಲಯ ಹಾಗೂ ವಿಶ್ವವಿದ್ಯಾಲಯ ಹೇಳದೇ ಮುಚ್ಚಿಡುತ್ತಿದೆ ನಮ್ಮ ಬೇಡಿಕೆ ಎಲ್ಲಾ ಸೀಟುಗಳೂ ಸಹ ಸಾಮಾನ್ಯ ಸೀಟುಗಳಾಗಲಿ. Enhance ಸೀಟುಗಳು ಬೇಡವೇ ಬೇಡ ಇನ್ನೂ ಮಿಕ್ಕ ಸೀಟುಗಳ ಪ್ರವೇಶವನ್ನು ಸಾಮಾನ್ಯ ರೀತಿಯಲ್ಲಿಯೇ ತುಂಬಿಸಿಕೊಳ್ಳಬೇಕೆಂದು ಬಲವಾದ ವಿದ್ಯಾರ್ಥಿಸ್ನೇಹಿ ಬೇಡಿಕೆ ನಮ್ಮದಾಗಿದೆ ಎಂದರು.

ಸಾಮಾಜಿಕ ಹೋರಾಟಗಾರ ಪ್ರಕಾಶ್ ರಾಥೋಡ್ ಮಾತನಾಡುತ್ತಾ; ಪೇಮೆಂಟ್ ಸೀಟುಗಳಿಗಾಗಿ ಮಹಾವಿದ್ಯಾಲಯ ಹೆಚ್ಚು ಅಪೇಕ್ಷಿಸುತ್ತಿದೆ ಎಂದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಅತಿಹೆಚ್ಚು ಅತಿಥಿ ಉಪನ್ಯಾಸಕರು ಇದ್ದಾರೆ ಅವರಿಗೆ ಸಂಬಳ ಎಲ್ಲಿಂದ ತರಬೇಕು ಎಂದು ವಿಸಿಯವರು ನಮಗೆಯೇ ಕೇಳುತ್ತಾರೆ. Enhance fees ತೆಗೆದುಕೊಳ್ಳದೇ ಹೋದರೆ ವಿಶ್ವವಿದ್ಯಾಲಯ, ನಮ್ಮ ಸಂಸ್ಥೆಗಳು ಮುಂದುವರೆಯಲು(ಬದುಕಲು) ತುಂಬಾ ಕಷ್ಟಸಾಧ್ಯವೆಂದು ಅಸಹಾಯಕರಾಗಿ ಕುಲಪತಿ ಅವರೇ Source of income ನಮಗೇನಿದೆ ಎಂದು ವಿದ್ಯಾರ್ಥಿಗಳ ಮೇಲೆ ಹೆಚ್ಚಿನ ಶುಲ್ಕ ವಿಧಿಸುವುದು ಬಿಟ್ಟು ಬೇರೆ ದಾರಿಯೇ ಇಲ್ಲಾ ಎಂದು ಪರೋಕ್ಷವಾಗಿ ಸಮರ್ಥಿಸುತ್ತಿದ್ದಾರೆ.ಸಮಸ್ಯೆಯೋ, ಸುಲಭವೋ, ಕಠಿಣವೋ Enhance fee structure ತೆಗೆಯುವ ತನಕವೂ ನಮ್ಮ ಹೋರಾಟ ನಿಲ್ಲದೇ ಸರಣಿಯಾಗಿ ಇರಲಿದೆ ಎಂದು ತಿಳಿಸಿದರು.

ಹೀಗಾದರೆ ಮುಂದೆ ಬರುವ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿಗಳು ಆಡಳಿತ ಮಾಡುವುದಕ್ಕೆ ತುಂಬಾ ಕಠಿಣವಾದಂತಹ ಚಾಲೆಂಜ್ ಇದೆ. ಇರುವ ವಿಶ್ವವಿದ್ಯಾಲಯಗಳನ್ನು ಸರಿಯಾಗಿ ಉಳಿಸಿಕೊಳ್ಳದೇ ಅದಕ್ಕೆ ಹಣ ಕೊಡದೇ ಸರ್ಕಾರ ಹೆಸರಿಗೆ ಜಿಲ್ಲೆಗೊಂದು ವಿಶ್ವವಿದ್ಯಾಲಯ ಮಾಡಿ ಏನು ಅಭಿವೃದ್ಧಿ ಮಾಡಿದ್ದಾರೆ. ಸರ್ಕಾರದ ನಡೆಯಿಂದ ಅಂತೂ ವಿಶ್ವವಿದ್ಯಾಲಯಗಳು ಹಳ್ಳ ಹಿಡಿಯುವ ಹಾದಿಯಲ್ಲಿ ಈಗಾಗಲೇ ಸಾಗುತ್ತಿವೆ ಹೇಗಾದರೂ ಮಾಡಿ ಇವುಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ನಾವು ಜಾಗೃತರಾಗಬೇಕೆಂದು ಹೆಸರೇಳಲು ಇಚ್ಛಿಸದ ಸಿಬ್ಬಂದಿಯೊಬ್ಬರು ಆತಂಕ ವ್ಯಕ್ತಪಡಿಸಿದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ