ಮುಂಬಯಿ:ಭಾರತದ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಐದನೇ ದೊಡ್ಡ ಬ್ಯಾಂಕಾದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಪ್ರಸಕ್ತ 202೪-೨೫ ನೇ ಹಣಕಾಸು ವರ್ಷದ ಮೊದಲನೆಯ ತ್ರೈಮಾಸಿಕದಲ್ಲಿ ಉತ್ತಮ ಸಾಧನೆ ತೋರಿದೆ. ಬ್ಯಾಂಕ್ ಒಟ್ಟಾರೆ ವ್ಯವಹಾರವು 9.76% ಹೆಚ್ಚಳದೊಂದಿಗೆ ರೂ ೨೧.೩೬ ಲಕ್ಷ ಕೋಟಿ ದಾಖಲಿಸಿದೆ. ಇದರಲ್ಲಿ ಒಟ್ಟಾರೆ ಮುಂಗಡಗಳ ಹೆಚ್ಚಳ ಶೇಖಡ 11.46% ಹಾಗೂ ಒಟ್ಟಾರೆ ಠೇವಣಿಗಳ ಹೆಚ್ಚಳ ಶೇಖಡ 8.52% ಆಗಿದೆ.ಜೂನ್ ೨೦೨೪ ರ ಅಂತ್ಯಕ್ಕೆ ಬ್ಯಾಂಕ್ ನ ರಿಟೈಲ್, ವ್ಯವಸಾಯ ಮತ್ತು ಎಮ್ ಎಸ್ ಎಮ್ ಇ ವಿಭಾಗದ ಮುಂಗಡದಲ್ಲಿ ಒಟ್ಟಾರೆ ಶೇಖಡ ೧೪.೫೩ ರಷ್ಟು ಹೆಚ್ಚಳ ಕಂಡಿದೆ.
ನಿವ್ವಳ ಲಾಭವು ರೂ. ೩೬೭೯ ಕೋಟಿಯಾಗಿದ್ದು, ಕಳೆದ ವರ್ಷದ ಮೊದಲ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇಖಡ ೧೩.೬೮ ಹೆಚ್ಚಳವಾಗಿದೆ. ನಿರ್ವಹಣಾ ಲಾಭ ಮತ್ತು ಬಡ್ಡಿಯೇತರ ಲಾಭವು ಕ್ರಮವಾಗಿ ರೂ ೭,೭೮೫ ಕೋಟಿ ಮತ್ತು ರೂ ೪೫೦೯ ಕೋಟಿ ಯಾಗಿರುತ್ತದೆ.
ಜೂನ್ ೨೦೨೪ ಇದ್ದಂತೆ ಒಟ್ಟಾರೆ ಅನುತ್ಪಾದಕ ಆಸ್ತಿಗಳು (ಶೇಕಡಾ) ೨೮೦ ಬಿಪಿಎಸ್ ನಿಂದ ವರ್ಷದಿಂದ ವರ್ಷದ ಆಧಾರದ ಮೇಲೆ 4.54% ಗೆ ಮತ್ತು ಒಟ್ಟಾರೆನಿವ್ವಳ ಅನುತ್ಪಾದಕ ಆಸ್ತಿಗಳು (ಶೇಖಡ) ೬೮ ಬಿಪಿಎಸ್ ನಿಂದ ವರ್ಷದಿಂದ ವರ್ಷದ ಆಧಾರದ ಮೇಲೆ 0.90% ಕ್ಕೆ ಇಳಿಕೆ ಕಂಡಿದೆ.
ಯೂನಿಯನ್ ಬ್ಯಾಂಕ್ ಪ್ರಸಕ್ತ ವರುಷದ ಮೊದಲ ತ್ರೈಮಾಸಿಕದ ಅಂತ್ಯಕ್ಕೆ ೮೪೭೩ ಶಾಖೆಗಳು ಮತ್ತು ೯೩೪೨ ಎಟಿಎಂ ಗಳನ್ನು ಹೊಂದಿದೆ.
ವರದಿ: ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ