ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಕಲಿಯುವಿಕೆ ಕೇವಲ ಪಠ್ಯದಿಂದ ಮಾತ್ರವಲ್ಲ.!!

ನಾವು ಜನ್ಮ ತಾಳಿದ ಮರು ಕ್ಷಣದಿಂದ ಕಲಿಯುವಿಕೆ ಎಂಬ ಪಕ್ರಿಯೆ ಆರಂಭವಾಗುತ್ತದೆ. ಇಷ್ಟವಿದ್ದರೂ ಇಷ್ಟವಿಲ್ಲದ್ದಿದ್ದರೂ ನಾವು ಆ ಕಲಿಯುವ ಮನಸ್ಸನ್ನು ಹೊಂದಿರಬೇಕು. ಯಾಕೆಂದರೆ ಮನುಷ್ಯನಿಗೆ ಬೆಳೆಯಬೇಕಂಬ ಹಂಬಲವಿದ್ದರೆ, ಕಲಿಯುವ ಮನಸ್ಸಿರುವುದು ಬಹಳ ಮುಖ್ಯ. ಇವತ್ತಿನ ವಿಧ್ಯಾರ್ಥಿಗಳು ಕೇವಲ ಪಠ್ಯದಲ್ಲಿರುವ ವಿಷಯವನ್ನು ಬಾಯಿ ಪಾಠಮಾಡುವುದನ್ನ ಕಲಿಯುವಿಕೆ ಅಂತ ಭಾವಿಸುತ್ತಾರೆ. ಆದರೆ ಇದು ಕಲಿಯುವಿಕೆ ಅಲ್ಲ ಶೋಚನೀಯ ವಿಷಯವೇನೆಂದರೆ, ಇವತ್ತಿನ ಪೋಷಕರು ಸಹ ತಮ್ಮ ಮಕ್ಕಳು ಶಾಲೆಯಲ್ಲಿ ರ‍್ಯಾಂಕ್ ಬಂದಾಕ್ಷಣ ಎಲ್ಲವನ್ನು ಕಲೀತಿದ್ದಾರೆ ಎಂದುಕೊಳ್ಳೋದು ಎಷ್ಟರ ಮಟ್ಟಿಗೆ ಸರಿ?

ಹೌದು ಶಾಲೆಯಲ್ಲಿ ಕಲಿಯಬೇಕಾದ್ದು ಇದೆ, ಆದರೆ ಶಾಲೆಯಿಂದ ಹೊರಗೆ ಕಲೀಯಬೇಕಾದ್ದು ಬಹಳಷ್ಟು ಇದೆ ಎಂಬುದು ಮೊದಲು ಪೋಷಕರಿಗೆ ಆನಂತರ ಮಕ್ಕಳಿಗೆ ಮನವರಿಕೆಯಾಗಬೇಕು. ಕೆಲ ಮಕ್ಕಳು ಕೇವಲ ಮನೆ ಬಿಟ್ಟರೆ ಶಾಲೆ, ಈ ಒಂದು ಚೌಕಟ್ಟಿನಲ್ಲೆ ತಮ್ಮ ಬಾಲ್ಯವನ್ನ ಕಳೆಯುತ್ತಾರೆ. ಎಷ್ಟೋ ವಿದ್ಯಾರ್ಥಿಗಳು, ಶಾಲಾ ಕಾಲೇಜುಗಳಿಗೆ ಹೋಗಿ ತರಗತಿಯಲ್ಲಿ ಹೇಳಿಕೊಟ್ಟಂತ ವಿಷಯವನ್ನ ಬಾಯಿ ಪಾಠಮಾಡಿ, ಪರೀಕ್ಷೆ ಮುಗಿದ ನಂತರ, ಓದಿದ ವಿಷಯಗಳನ್ನೆಲ್ಲಾ ಮರೆತುಬಿಡುತ್ತಾರೆ. ಖಂಡಿತ ಓದು-ಬರಹ ಮುಖ್ಯ, ಇದರೊಂದಿಗೆ ವಿವಿಧ ಕೌಶಲ್ಯಗಳನ್ನು ಕಲಿಯಬೇಕು.

ಎಲ್ಲಾ ಕೌಶಲ್ಯಗಳನ್ನು ಮಕ್ಕಳು ಶಾಲಾ–ಕಾಲೇಜುಗಳಲ್ಲೆ ಕಲಿಯಬೇಕು ಎಂಬುದನ್ನು ಬಯಸುವುದು ಸೂಕ್ತವಲ್ಲ.ಕೆಲವೊಂದನ್ನು ಇನ್ನೊಬ್ಬರಿಂದ ಕೇಳಿ ಕಲಿಯಬೇಕು,ಕೆಲವೊಂದನ್ನು ಇನ್ನೊಬ್ಬರನ್ನು ನೋಡಿ ಅರಿಯಬೇಕು, ಕೆಲವೊಮ್ಮೆ ನಾವೇ ಆರ್ಥೈಸಿಕೊಂಡು ಕಲಿಯಬೇಕು, ಇನ್ನೂ ಕೆಲವೊಮ್ಮೆ ಹುಡುಕಿ ತಿಳಿಯಬೇಕು. ಇವತ್ತಿನ ಮಕ್ಕಳಲ್ಲಿ ಆತ್ಮವಿಶ್ವಾಸ ಬಹಳ ಕಡಿಮೆ ಇದೆ ಎಂದರೆ ತಪ್ಪಾಗಲಾರದು. ಆತ್ಮವಿಶ್ವಾಸ ಕಡಿಮೆಯಾಗಲು ಕಾರಣವೇನೆಂದರೆ, ಹೊರ ಜಗತ್ತಿನ ಆಗು ಹೋಗುಗಳ ಬಗ್ಗೆ ತಿಳುವಳಿಕೆ ಇಲ್ಲದಿರುವುದು. ಇವತ್ತಿನ ಮಕ್ಕಳ ಮನಸ್ಸಿನಲ್ಲಿ ಕೇವಲ, ಎಕ್ಸಾಂ, ಮಾರ್ಕ್ಸ್, ರ‍್ಯಾಂಕ್ ಬರೀ ಇದೆ ತುಂಬಿದೆ. ಹೊರತಾಗಿ ತಮಗೆ ಇಷ್ಟವಾದ ಕಲೆ, ಆಟ ಇದರ ಬಗ್ಗೆ ಅವರ ಗಮನ ಬಹಳ ಕಡಿಮೆ. ಮಕ್ಕಳು ಕೇವಲ ಅಂಕಗಳಿಂದ ಅಲ್ಲ, ಹೊರತಾಗಿ ತಮ್ಮ ಕಲೆಯ ಮೂಲಕ ಸಮಾಜದಲ್ಲಿ ಸ್ಥಾನವನ್ನು ಗಳಿಸುತ್ತಾರೆ. ಇವತ್ತಿನ ಪೋಕಷರು ತಮ್ಮ ಮಕ್ಕಳಲ್ಲಿರುವ ಆಸಕ್ತಿಯನ್ನು ಗುರುತಿಸಿ ಅದಕ್ಕೆ ಪ್ರೋತ್ಸಾಹ ನೀಡಬೇಕು.

ಇನ್ನು ಬಹಳ ಪ್ರಮುಖವಾದ ಕೌಶಲುವೆಂದರೆ ಅದು ವಾಕ್ ಸಾಮರ್ಥ್ಯ. ಮಾತನಾಡೋದು ಮುಖ್ಯವಲ್ಲ, ನಾವು ಹೇಳುತ್ತಿರುವ ವಿಷಯಗಳು ಎಷ್ಟರ ಮಟ್ಟಿಗೆ ಕೇಳುಗರಿಗೆ ಅರ್ಥವಾಗುತ್ತಿದೆ ಎಂಬುದು ಮುಖ್ಯ. ನಾವು ಪದವಿ ಮುಗಿಸಿ, ಕೆಲಸದ ಸಂದರ್ಶನಕ್ಕೆ ಕುಳಿತಾಗ, ನಮ್ಮ ಬಗ್ಗೆ ಪರಿಚಯ ಮಾಡಬೇಕಾದರೆ ಆನೇಕ ಬಾರಿ ತಡವರಿಸುತ್ತೇವೆ. ಅಷ್ಟೇ ಅಲ್ಲ ಕೆಲಸದಲ್ಲಾಗಲೀ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ, ಇನ್ನಿತರರೊಂದಿಗೆ ಯಾವ ರೀತಿ ಮಾತನಾಡಬೇಕು ಮತ್ತು ಯಾವ ರೀತಿ ಸಂಪರ್ಕವನ್ನು ಬೆಳಸಿಕೊಳ್ಳಬೇಕು ಎಂಬ ಗೊಂದಲ ಅನೇಕರಿಗೆ ಕಾಡುವಂತಹದ್ದು. ಚಿಕ್ಕ ವಯಸ್ಸಿನಲ್ಲಿ ಜನರೊಂದಿಗೆ ಬೆರೆಯುವುದಾಗಲಿ, ಅವರೊಂದಿಗೆ ಮಾತನಾಡುವ ರೀತಿ ನಮಗೆ ತಿಳಿದಿರುವುದಿಲ್ಲ. ಇನ್ನೂ ಸ್ಪಷ್ಟವಾಗಿ ಹೇಳುವುದಾದ್ರೆ ಮಾತನಾಡುವ ಪ್ರಯತ್ನಾನೆ ಮಾಡೊಲ್ಲ ನಾವು ಸಾಧ್ಯವಾದಷ್ಟು ಅದರಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತ್ತೇವೆ. ಈ ಎಲ್ಲಾ ವಿಷಯಗಳು ನಮಗೆ ಪಠ್ಯದಲ್ಲಿ ಸಿಗುವಂತಹದಲ್ಲ. ಈ ಎಲ್ಲಾ ಕೌಶಲ್ಯಗಳನ್ನು ಸ್ವತಃ ನಾವೇ ಕಲಿಯಬೇಕಾದ್ದು ಕಲಿಯುವ ಹಂಬಲ, ಕಲಿಯುವ ಮನಸ್ಸು, ಕಲಿಯುವ ಆಸಕ್ತಿ ಇದ್ದರ ಮಾತ್ರ, ಕಲಿಯುವ ಮಾರ್ಗವನ್ನು ಅರಿಯಬಹುದು.

-ಮನು ಭಾರದ್ವಾಜ್.ವಿ.8861151021

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ