ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಹರಳಹಳ್ಳಿ ಗ್ರಾಮ ಪಂಚಾಯತಿಯ ದಿಡಗೂರು ಗ್ರಾಮದಲ್ಲಿ ಬೀದಿ ನಲ್ಲಿಗಳಿದ್ದು ನಿರಂತರವಾಗಿ ನೀರು ಸರಬರಾಜು ಆಗುತ್ತದೆ ಅದರೆ ಇಲ್ಲಿ ಕೆಲವು ನಲ್ಲಿಗಳಲ್ಲಿ ಸಾರ್ವಜನಿಕರು ನೀರು ಹಿಡಿದುಕೊಂಡ ನಂತರ ನೀರನ್ನು ಬಂದ್ ಮಾಡಲು ಟ್ಯಾಪ್ ಗಳು ಇಲ್ಲದೆ ಎಷ್ಟು ತಿಂಗಳುಗಳು ಕಳೆದು ಹೋಗಿವೆ
ಹಲವಾರು ಬಾರಿ ವಾಟರ್ ಮ್ಯಾನ್ ಗೆ ಗ್ರಾಮಸ್ಥರು ತಿಳಿಸಿದ್ದಾರೆ ಅದರೆ ಈ ಗ್ರಾಮದಲ್ಲಿ ಮಹಿಳಾ ವಾಟರ್ ಮ್ಯಾನ್ ಕೆಲಸ ನಿರ್ವಹಿಸುತ್ತಿರುವುದು ಆದ್ದರಿಂದ ಸಾರ್ವಜನಿಕರು ಮೃದು ಧೋರಣೆ ತೋರಿದ್ದಾರೆ ಆದ್ದರಿಂದ ಇದನ್ನೇ ದುರುಪಯೋಗ ಪಡಿಸಿಕೊಂಡು
ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರೂ ಇಲ್ಲವೋ ಅವರ ಗಮನಕ್ಕೆ ಬಂದಿದೆಯೋ ಇಲ್ಲವೋ
ಎಷ್ಟು ಊರುಗಳಲ್ಲಿ ಸರಿಯಾಗಿ ಕುಡಿಯುವ ನೀರು ಸರಬರಾಜು ಸಿಗುತ್ತಿಲ್ಲ ಆದರೆ ಇಲ್ಲಿ ಕುಡಿಯುವ ನೀರಿನ ನೆಲ್ಲಿ ಗಳಿಗೆ ಬಂದ್ ಮಾಡಲು ಟ್ಯಾಪ್ ಗಳು ಇಲ್ಲದೆ ನಿರಂತರವಾಗಿ ನೀರು ಹರಿಯುತ್ತದೆ
ಇದಕ್ಕೆ ಯಾರು ಹೊಣೆ?
ವರದಿ-ಪ್ರಭಾಕರ ಡಿ ಎಂ, ಹೊನ್ನಾಳಿ