ಶಿರಸಿ : ಪ್ರತಿವರ್ಷದಂತೆ ಈ ವರ್ಷವೂ ಶ್ರೀ ಮಠದಲ್ಲಿ ಭಾದ್ರಪದ ಶುಕ್ಲ ಚತುರ್ಥಿಯಂದು ಶ್ರೀ ಮಹಾಗಣಪತಿಯ ಎರಡು ಮಣ್ಣಿನ ಗಣಪತಿ ವಿಗ್ರಹಗಳನ್ನು (ಮಾಲಿನ ಗಣಪತಿ & ಉಗ್ರಾಣ ಗಣಪತಿ) ಸ್ಥಾಪಿಸಿ ಪೂಜೆ ಸಲ್ಲಿಸಲಾಯಿತು. ಆದರೆ ಈ ಬಾರಿ ವಿಶೇಷ ಎಂಬಂತೆ ಶ್ರೀಮಠದ ಯತಿದ್ವಯರ ಸಾನ್ನಿಧ್ಯದಲ್ಲಿ ಪೂಜಾ ಕೈಂಕರ್ಯಗಳು ನಡೆದವು. 108 ಕಾಯಿ ಗಣಹೋಮ ನಡೆಯಿತು. ಶ್ರೀಮಠದ ಹಿರಿಯ ಶ್ರೀಗಳು ನಿತ್ಯಪೂಜೆ ಹಾಗೂ ಸ್ಥಾಪಿತ ಮಣ್ಣಿನ ಗಣಪತಿಗೆ ಪೂಜೆ ಸಲ್ಲಿಸಿದರೆ, ಕಿರಿಯ ಸ್ವಾಮಿಗಳು ರತ್ನಗರ್ಭ ಗಣಪತಿಗೆ ವಿಶೇಷ ಪೂಜೆ ನೆರವೇರಿಸಿದರು. ಉಭಯ ಯತಿಗಳ ಉಪಸ್ಥಿತಿಯಲ್ಲಿ ಗಣ ಹೋಮದ ಪೂರ್ಣಾಹುತಿ ಸಂಪನ್ನವಾಯಿತು.
ಸಂಜೆ ಶಂಮತಕೋಪಖ್ಯಾನದ ಪುರಾಣದ ವ್ಯಾಖ್ಯಾನವು ನಡೆಯಿತು.
ವರದಿ :ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ