ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ನಿಡಗಲ್ಲು ಗ್ರಾಮದ ರೈತ ಎನ್. ಆರ್ .ಪಾಲಯ್ಯ (78) ವರ್ಷ ವಯಸ್ಸಿನ ಅವರು ಕರ್ನಾಟಕ ಗ್ರಾಮೀಣ ಬ್ಯಾಂಕ್ ನ್ಯಾಯದಗುಂಟೆ ಹಾಗೂ ವಿ .ಎಸ್. ಎಸ್. ಎನ್. ಕೊಡಿಗೆಹಳ್ಳಿ ಸಹಕಾರ ಸಂಘದಲ್ಲಿ ವ್ಯವಸಾಯಕ್ಕಾಗಿ ಬೆಳೆ ಸಾಲ ಸಾಲ ಮಾಡಿದ್ದರು ಹಾಗೂ ಸುಮಾರು ವರ್ಷಗಳಿಂದ ಜಮೀನಿನಲ್ಲಿ ಶೇಂಗಾ ಬೆಳೆ ಬೆಳೆದು ಲಾಸ್ ಆಗಿದ್ದು ವ್ಯವಸಾಯಕ್ಕೆ ಹಾಕಿದ ಹಣ ವಾಪಸ್ ಬಾರದೆ ಇರುವುದರಿಂದ ಮನನೊಂದು. ಶನಿವಾರ ಮಧ್ಯಾಹ್ನ ವಿಷ ಸೇವಿಸಿದ್ದರು ತಕ್ಷಣ ಸರ್ಕಾರಿ ಆಸ್ಪತ್ರೆಗೆ ಸೇರಿಸಿದರು ಚಿಕಿತ್ಸೆ ಫಲಕಾರಿಯಾಗದೆ ಮರಣ ಹೊಂದಿದ್ದಾರೆ ಮೃತರು ಪತ್ನಿ ಹಾಗೂ ಇಬ್ಬರು ಗಂಡು ಮಕ್ಕಳು ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.
ಅರಸೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ವರದಿ.ಕೆ.ಮಾರುತಿ ಮುರಳಿ