ಬೆಳಗಾವಿ ಜಿಲ್ಲೆಯ ರಾಯಬಾಗ ಪಟ್ಟಣ ಪಂಚಾಯತಿ ಒಟ್ಟು 19 ಸದಸ್ಯರ ಸಂಖ್ಯೆ ಒಳಗೊಂಡ ಪಟ್ಟಣ ಪಂಚಾಯತಿಯಾಗಿದ್ದು 10 ಪುರುಷ ಸದಸ್ಯರು 9 ಮಹಿಳಾ ಸದಸ್ಯರನ್ನು ಹೊಂದಿದೆ.
ಚುನಾವಣಾ ಅಧಿಕಾರಿಯಾಗಿ ರಾಯಬಾಗ ತಹಶೀಲ್ದಾರ ಸುರೇಶ ಮುಂಜೆ ನೇಮಕವಾಗಿದ್ದರು. ಚುನಾವಣೆಯಲ್ಲಿ ರಾಯಬಾಗ ಮತಕ್ಷೇತ್ರದ ಶಾಸಕ ಡಿ. ಎಮ್. ಐಹೊಳೆ ,ಮಾಜಿ ವಿಧಾನ ಪರಿಷತ್ತ ಸದಸ್ಯ ವಿವೇಕರಾವ ಪಾಟೀಲ ಭಾಗಿಯಾಗಿದ್ದರು.
ರಾಯಬಾಗ ಪಟ್ಟಣ ಪಂಚಾಯತಿಗೆ ಸಾಮಾನ್ಯ ವರ್ಗ ಅಧ್ಯಕ್ಷರ ಸ್ಥಾನ ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಸರಕಾರದಿಂದ ನಿಗದಿಯಾಗಿತ್ತು.
ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಒಂದೇ ಒಂದು ನಾಮಪತ್ರ ಸಲ್ಲಿಕೆಯಾಗಿತ್ತು.
ಚುನಾವಣಾ ಅಧಿಕಾರಿ ರಾಯಬಾಗ ತಹಶೀಲ್ದಾರ ಸುರೇಶ ಮುಂಜೆ ನಾಮ ಪತ್ರ ಪರಿಶೀಲಿಸಿ ಒಂದೇ ಒಂದು ನಾಮ ಪತ್ರ ಸಲ್ಲಿಕೆ ಆದ್ದರಿಂದ ರಾಯಬಾಗ ಪಟ್ಟಣ ಪಂಚಾಯತಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ಅವಿರೋಧವಾಗಿ ಆಯ್ಕೆ ಆಗಿದ್ದಾರೆಂದು ಘೋಷಿಸಿದರು.
ಅಧ್ಯಕ್ಷರಾಗಿ ಅಶೋಕ ನಿಂಗಪ್ಪ ಅಂಗಡಿ, ಉಪಾಧ್ಯಕ್ಷರಾಗಿ ಭಾರತಿ ದತ್ತಾ ಜಾಧವ ಅಧ್ಯಕ್ಷ , ಉಪಾಧ್ಯಕ್ಷ ಸ್ಥಾನ ಘೋಷಣೆಯಾದಂತೆ ಬಿಜೆಪಿ ಪಕ್ಷದ ಕಾರ್ಯಕರ್ತರು ಅಭಿಮಾನಿಗಳು ಪಟಾಕಿ ಸಿಡಿಸುವ ಮೂಲಕ ಸಂಭ್ರಮಿಸಿದರು.
ಸ್ಥಳೀಯ ಶಾಸಕ ಡಿ ಎಮ್ ಐಹೊಳೆ ನೂತನವಾಗಿ ರಾಯಬಾಗ ಪಟ್ಟಣ ಪಂಚಾಯತಿಗೆ ಆಯ್ಕೆಯಾದ ಅಧ್ಯಕ್ಷ ,ಉಪಾಧ್ಯಕ್ಷರಿಗೆ ಶಾಲು ಹೋದಿಸಿ ಹೂಮಾಲೆ ಹಾಕಿ ಅಭಿನಂದಿಸಿ ಸಿಹಿ ತಿನಿಸಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.
ವರದಿ-ಸಂಗಮೇಶ ಕಾಂಬಳೆ