ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಸ್ಥಳೀಯ ” ದಿ ತಾಳಿಕೋಟಿ ಸಹಕಾರಿ ಬ್ಯಾಂಕ್ ನಿಯಮಿತ, ತಾಳಿಕೋಟೆ ” ಈ ಬ್ಯಾಂಕಿನ 65ನೇ ವಾರ್ಷಿಕ ವರದಿ ಹಾಗೂ 2023-24 ಸಾಲಿನ ವಾರ್ಷಿಕ ಸಭೆಯನ್ನು ತಾಳಿಕೋಟೆ ಅಡತ ಮರ್ಚಂಟ್ ಅಸೋಶಿಯೇಷನ್ ಸಭಾ ಭವನದಲ್ಲಿ ಆಯೋಜಿಸಿತ್ತು ಸಮಿತಿಯ ಉಪಾಧ್ಯಕ್ಷರಾದ ಶ್ರೀ ಎಚ್.ಬಿ.ಬಾಗೇವಾಡಿ ಅವರ ಅಧ್ಯಕ್ಷತೆಯಲ್ಲಿ ಜರುಗಿಸಿದ ಸಭೆಯ ದಿವ್ಯ ಅಧ್ಯಕ್ಷತೆಯನ್ನು ಗುಂಡಕನಾಳದ ಶ್ರೀ ಷ.ಬ್ರ.ಗುರುಲಿಂಗ ಶಿವಾಚಾರ್ಯ ಮಹಾ ಸ್ವಾಮಿಗಳು ವಹಿಸಿದ್ದರು.ಅಧ್ಯಕ್ಷತೆಯನ್ನು ಶ್ರೀ ಖಾಸ್ಗತೇಶ್ವರ ಮಠದ ಬಾಲಯೋಗಿ ಸಿದ್ಧಲಿಂಗ ದೇವರ ಅನುಪಮ ಸ್ಥಿತಿಯಲ್ಲಿ ಅವರು ತಂದೆಯವರಾದ ಮುರಗು ಮುತ್ಯಾ ಅವರು ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ವಿಜಯಪುರ ಜಿಲ್ಲೆಯ ಡಿ.ಸಿ.ಸಿ.ಬ್ಯಾಂಕಿನ ನಿರ್ದೇಶಕರಾದ ಹಾಗೂ ಕಾಂಗ್ರೆಸ್ ಪಕ್ಷದ ಕೆ.ಪಿ.ಸಿ.ಸಿ ಸದಸ್ಯರುಗಳಾದ ಈ ಬಾಗದ ಗೌರವಾನ್ವಿತ ವ್ಯಕಿಗಳಾದ ಶ್ರೀ ಮಾನ್ಯ ಬಿ.ಎಸ್.ಪಾಟೀಲ (ಯಾಳಗಿ),ವಿ ವಿ ಸಂಘದ ಮಾಜಿ ಅಧ್ಯಕ್ಷರಾದ ಐ.ಆರ್.ಜಾಲವಾದಿ ಈ ಬ್ಯಾಂಕಿನ ನಿರ್ದೇಶಕರುಗಳಾದ ಶ್ರೀ. ಕೆ.ಸಿ.ಸಜ್ಜನ, ಶ್ರೀ ಆಯ್.ಬಿ.ಬಿಳೇಬಾವಿ,ಶ್ರೀ ಎಮ್.ಎಸ್.ಸರಶಟ್ಟಿ,ಡಿ.ಎಸ್ ಹೆಬಸೂರ,ಶ್ರೀ ಸಿ.ಎಸ್ ಯಾಳಗಿ,ಶ್ರೀ ಎನ್.ಐ.ಚಿನಗುಡಿ,ಶ್ರೀ ಎಸ್ ಸಿ ಪಾಟೀಲ, ಶ್ರೀಮತಿ ಆರ್.ಎಸ್.ಹಿರೇಮಠ ,ಶ್ರೀಮತಿ ಎ ಸಿ ಬಬಲೇಶ್ವರ, ಶ್ರೀ ಆರ್ ಬಿ ಕಟ್ಟಿಮನಿ ,ಶ್ರೀ ಎಸ್ ವಾಯ್ ಬರದೇನಾಳ, ಶ್ರೀ ಎಮ್ ಬಿ ಕೊಣ್ಣೂರ, ಶ್ರೀ ಆರ್ ಎ ಮುರಗಿ ಈ ಶಾಖೆಯ ಪ್ರಧಾನ ವ್ಯವಸ್ಥಾಪಕರು ಶ್ರೀ ಮತಿ ಬಿ.ಕೆ ಮಣೂರ, ವ್ಯವಸ್ಥಾಪಕರಾದ ಶ್ರೀ ಎಸ್ ಎಸ್ ಗಸಿಗೆಪ್ಪಗೋಳ ಮತ್ತು ಮಿಣಜಗಿ ಶಾಖೆಯ ಅಧ್ಯಕ್ಷರಾದ ಜಿ ಕೆ ಬಿರಾದಾರ,ಸದಸ್ಯರುಗಳಾದ ಶ್ರೀ ಡಿ ಕೆ ಪಾಟೀಲ ಬಿ.ಎಮ್ ಬಿರಾದಾರ ಆಯ್ ಬಿ ಬಿರಾದಾರ ಎಮ್ ಎಸ್ ಮ್ಯಾಗೇರಿ ಹಾಗೂ ಬ್ಯಾಂಕಿನ ಷೇರುದಾರರು ಭಾಗವಹಿಸಿದ್ದರು. ಈ ಸಭೆಯ ಅಡಾವೆ ಪತ್ರಿಕೆಯನ್ನು ಶ್ರೀ ಮತಿ ಬಿ.ಕೆ.ಮಣೂರ ಅವರು ಪತ್ರಿಕೆಯ ಲಾಭ 124.68. ಲಕ್ಷ ನಿವ್ವಳ ಲಾಭ ಆಗಿರುತ್ತದೆ ಎಂದು ಮತ್ತು ಖರ್ಚು ಹಾನಿ ಇತರೆ ವಿಷಯ ಓದಿ ಹೇಳಿದರು. ಈ ಸಭೆಯನ್ನು ಉದ್ದೇಶಿಸಿ ಬಿ.ಎಸ್. ಪಾಟೀಲರು ಬಹಳ ಮಾರ್ಮಿಕವಾಗಿ ಮಾತನಾಡಿದರು ಇವತ್ತು ಈ ಸಂಸ್ಥೆ ಈ ಮಟ್ಟಿಗೆ ಬೆಳೆಯಲು ಹಿಂದಿನವರು ನೂರು ರೂಪಾಯಿಗಳನ್ನು ಸಂಗ್ರಹ ಮಾಡಿ ಒಟ್ಟುಗೂಡಿಸಿ ಸ್ಥಾಪಿಸಿದ ಪರಿಣಾಮವಾಗಿ ಅವರು ಘಟ್ಟಿತನದಿಂದ ಷೇರುದಾರ ಸಹಕಾರದಿಂದ ಅವಿನಾಭಾವ ಸಂಬಂಧದಿಂದ ಮಾನವೀಯತೆ ಭಾವನೆಯಿಂದ ಇದೆ ಬ್ಯಾಂಕಿನಿಂದ ಸಾಲವನ್ನು ಪಡೆದುಕೊಂಡ ಅದರ ಸದುಪಯೋಗ ಪಡೆದುಕೊಂಡು ಇವತ್ತು ಒಂದು ಉನ್ನತವಾದ ಹುದ್ದೆಯನ್ನು ಪಡೆದಿರುವ ಸಂಗತಿಯನ್ನು ವಿವರಿಸಿದರು. ಸಾಲ ಪಡೆದುಕೊಂಡು ಇನ್ನೊಂದು ಬ್ಯಾಂಕಿನ ಸಾಲವನ್ನು ತೀರಿಸಿದರೆ ನೀವು ಎಂದಿಗೂ ಸಾಲ ಮುಕ್ತರಾಗುವದಿಲ್ಲರಿ ಆ ಸಾಲ ಪಡೆದ ಹಣವನ್ನು ಒಂದು ಪ್ರಮುಖ ಕೆಲಸಕ್ಕೆ ಉಪಯೋಗಿಸುವ ಮುಖಾಂತರ ಅದರಿಂದ ಬಂದ ಹಣದಿಂದ ಹಂತ ಹಂತವಾಗಿ ಸಾಲವನ್ನು ಮರುಪಾವತಿ ಮಾಡಿದರೆ ಬ್ಯಾಂಕು ಮತ್ತು ನೀವು ಬೆಳೆಯುತ್ತಿರಿ ಎಂದು ತಿಳಿ ಹೇಳಿದರು.
ಆಶೀರ್ವಚನವನ್ನು ಗುರುಲಿಂಗ ಶಿವಾಚಾರ್ಯ ಸ್ವಾಮಿಗಳು ಈ ಸಂಸ್ಥೆ ಕಟ್ಟಿಬೆಳಸಿದ ಮಹನೀಯರನ್ನು ಹರಸಿದರು ಯಾವುದೇ ಮನೆ,ಮಠ ಮಾನ್ಯಗಳು ಇತರೆ ಸಂಘ ಸಂಸ್ಥೆಗಳು ಆಡಳಿತ ಮಂಡಳಿಯು ಸದೃಢವಾಗಿ ಇದ್ದರೆ ಮಾತ್ರ ಈ ಮಟ್ಟಿಗೆ ಬೆಳೆಯಲಿಕ್ಕೆ ಸಾಧ್ಯವಾಗುತ್ತದೆ ಎಂದು ಮುಂದೆ ಇದೆ ರೀತಿಯಲ್ಲಿ ಸಾಲಗಾರರು ಮತ್ತು ಆಡಳಿತ ಮಂಡಳಿ ಸಹಕಾರದಿಂದ ಉತ್ತಮ ಬೆಳೆಯಲು ಸಾಧ್ಯವಾಗುತ್ತದೆ ಎಂದು ಹರಸಿದರು.ಈ ಸಭೆಯ ವಂದನಾರ್ಪಣೆಯನ್ನು ಈ ಶಾಖೆಯ ಶ್ರೀ ಮತಿ ಶಿವಲೀಲಾ ಬಸವರಾಜ ಕೋಟಿಖಾನೆ ಅವರು ಅರ್ಪಿಸಿದರು.
ವರದಿಗಾರರು:ಸಂಗಮೇಶ .ಸಿ.ಚೌದ್ರಿ