ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಚಿಕ್ಕ
ಮಾಲಾಪುರ ಗ್ರಾಮ ಪಂಚಾಯಿತಿ ಗೆ ಅಧ್ಯಕ್ಷರಾಗಿ ಪರಿಶಿಷ್ಟ ಜಾತಿಯ ಮಹಿಳಾ ಮೀಸಲಿದ್ದು , ಪುಷ್ಪ ಅಂಕರಜ್ ಅವಿರೋಧ ಆಗಿ ಆಯ್ಕಯಾಗಿದ್ದಾರೆ.
ಚಿಕ್ಕ ಮಾಲಪುರ ರ ಗ್ರಾಮ ಪಂಚಾಯಿತಿಯಲ್ಲಿ ಒಟ್ಟು14 ಸದಸ್ಯರು ಇದ್ದು ,ಅದರಲ್ಲಿ ಪುಷ್ಪ ಅಂಕರಜು ಒಬ್ಬರೇ ನಾಮ ಪತ್ರ ಸಲ್ಲಿಸಿದ್ದ ಕಾರಣ ಎಲ್ಲಾ ಸದಸ್ಯರ ಸಹಮತದೊಂದಿಗೆ ಪುಷ್ಪ ಅಂಕರಾಜು ಅವರನ್ನು ಅಧ್ಯಕ್ಷರ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ಈ ಸಂದರ್ಭದಲ್ಲಿ ಚುನಾವಣಾ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಕೇಶವಮೂರ್ತಿ ಮಾತನಾಡಿ ಚಿಕ್ಕ ಮಾಲಾಪುರ ಗ್ರಾಮ ಪಂಚಾಯಿತಿಯಲ್ಲಿ 15 ಜನ ಸದಸ್ಯರಿದ್ದಾರೆ ಅದರಲ್ಲಿ 14 ಜನ ಹಾಜರಾಗಿದ್ದು, ಅದರಲ್ಲಿ ಪುಷ್ಪ ಆಂಕರಾಜು ಅವರು ನಾಮ ಪತ್ರ ಸಲ್ಲಿಸಿದ್ದರು ಬೇರೆ ಯಾವ ಸದಸ್ಯರು ನಾಮ ಪತ್ರ ಸಲ್ಲಿಸಿದ ಕಾರಣ ಪುಷ್ಪ ಆಂಕರಜ್ ಅವರನ್ನು ಅಧ್ಯಕ್ಷೆ ಸ್ಥಾನವನ್ನು ಸರ್ವ ಸದಸ್ಯರ ಸಹಮತದೊಂದಿಗೆ ಅಧ್ಯಕ್ಷ ಸ್ಥಾನ ನೀಡಲಾಗಿದೆ ಎಂದರು.
ನೂತನ ಅಧ್ಯಕ್ಷೆ ಪುಷ್ಪ ಅವರು ಮಾತನಾಡಿ ಗ್ರಾಮದ ಮೂಲ ಭೂತ ಸೌಕರ್ಯದ ಕೆಲಸಗಳಿಗೆ ಹೆಚ್ಚು ಬತ್ತು ನೋಡಿ ಮುo ದಿನ ದಿನಗಳಲ್ಲಿ ನನ್ನ ಶಕ್ತಿ ಮೀರಿ ಕೆಲಸ ಕಾರ್ಯಗಳನ್ನು ಮಾಡುವೆ ಹಾಗೆಯೇ ನನ್ನ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಆಗಲು ಶ್ರಮಿಸಿದ ಹಾಗೂ ಸಹಮತ ತೋರಿದ ಗ್ರಾಮಸ್ಥರು ಹಾಗೂ ನಮ್ಮ ಪಂಚಾಯತಿ ಸದಸ್ಯರಿಗೆ ನನ್ನ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಪಿಡಿಓ ಮಹಾದೇವ ಪ್ರಭು, ಉಪಾಧ್ಯಕ್ಷ ಚನ್ನಯ್ಯ, ಸದಸ್ಯರಾದ ಪ್ರಭುಸ್ವಾಮಿ, ಗುರು ಮೂರ್ತಿ, ನಾಗಣ್ಣ ,ಮಲ್ಲೇಶ ಮಾದೇಶ್,ಮಹಿಳಾ ಸದ್ಯಸರುಗಳಾದ ಗೀತಾ, ಕಲಾವತಿ ,ರಾಜ ಮಣಿ, ಪಲ್ಲವಿ ,ರಾಜ ಬಾಯಿ,
ಮುಖಂಡರುಗಳಾದ ಉದ್ದ ನೂರು ಸಿದ್ದರಾಜು ,ಅಂಕರಾಜು, ಮಾದೇಗೌಡ ,ಮಾದೇಶ್ ಜಗದೀಶ್ ,ರಾರ್ಘವೆಂದ ,
ಇನ್ನಿತರರು ಇದ್ದರು.
ವರದಿ ಉಸ್ಮಾನ್ ಖಾನ್