ಕಲಬುರಗಿ ಜಿಲ್ಲೆಯ ಜೇವರ್ಗಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಜಯ ಕರ್ನಾಟಕ ತಾಲೂಕ ಘಟಕದ ಅಧ್ಯಕ್ಷ ಭೀಮಾಶಂಕರ ನೇತೃತ್ವದಲ್ಲಿ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಕನ್ನಡ ಧ್ವಜಾರೋಹಣದ ನಂತರ ಮಾತನಾಡಿದ ಜಯ ಕರ್ನಾಟಕ ತಾಲೂಕ ಕಾರ್ಯಾಧ್ಯಕ್ಷ ಪರಮೇಶ್ವರ ನಾಯಕ ಬಿರಾಳ ಈ ನಾಡಿನ ರಕ್ಷಣೆ ಪ್ರತಿಯೊಬ್ಬ ಕನ್ನಡಿಗನ ಹೊಣೆಯಾಗಿದೆ.ರಾಜ್ಯದ ಪ್ರತಿಯೊಂದು ಸಂಘ ಸಂಸ್ಥೆಗಳು ಕನ್ನಡ ಭಾಷೆ,ಕನ್ನಡ ನೆಲ,ಜಲಕ್ಕೆ ಧಕ್ಕೆ ಬಾರದಂತೆ ಎಚ್ಚರಿಕೆಯಿಂದ ಇರಬೇಕು,
ನಮ್ಮನ್ನಾಳುವ ಸರಕಾರಗಳು ಕನ್ನಡದ ವಿಷಯದಲ್ಲಿ ನಿರ್ಲಕ್ಷ ತೋರಿದರೆ ಸರಕಾರದ ವಿರುದ್ಧ ಹೋರಾಟಕ್ಕೆ ಸಿದ್ದರಾಗಿರಬೇಕೆಂದು ಹೇಳಿದರು.ಈ ಸಂಧರ್ಭದಲ್ಲಿ ಜಯ ಕರ್ನಾಟಕ ಸಂಘಟನೆಯ ಮುಖಂಡರಾದ ಮಾಂತಯ್ಯ ಸ್ವಾಮಿ,ರವಿ ಪಾಟೀಲ,ಸಿದ್ದಣ್ಣಗೌಡ ಮಾವನೂರ,ಮುನೀರ ಪಾಷಾ,ಶಕೀಲ್ ಬಡಾಗರ,ವೆಂಕಟೇಶ ಪಟ್ಟೇದಾರ,ಮಾಂತೇಶ,ಯಲ್ಲಪ್ಪ ಜನಿವಾರ,ಸೇರಿದ಼ಂತೆ ಅನೇಕರು ಉಪಸ್ಥಿತರಿದ್ದರು.
ವರದಿ: ಚಂದ್ರಶೇಖರ ಪಾಟೀಲ್, ಜೇವರ್ಗಿ