ವಿಜಯಪುರ/ಇಂಡಿ: ಕರ್ನಾಟಕ ಸರಕಾರ ಜಿಲ್ಲಾ ಪಂಚಾಯತ ರಾಮನಗರ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ರಾಮನಗರ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮತ್ತು ಕ್ಷೇತ್ರ ಸಮನ್ವಯಧಿಕಾರಿಗಳ ಕಾರ್ಯಾಲಯ ಕನಕಪುರ ಹಾಗೂ ತಾಲೂಕು ಕ್ರೀಡಾಂಗಣ ಕನಕಪುರ ಇವರ ಸಹಯೋಗದಲ್ಲಿ ನಡೆದ 2024-25ನೇ ಸಾಲಿನ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿ ಕನಕಪುರ ಬಿ.ಎಲ್.ಡಿ.ಇ ಸಂಸ್ಥೆಯ ಶ್ರೀ ಸಂಗನಬಸವೇಶ್ವರ ಕೃಷಿ ಮಾಧ್ಯಮಿಕ ಶಾಲೆ ಲಚ್ಯಾಣ ವಿದ್ಯಾರ್ಥಿನಿಯಾದ ಭಾಗ್ಯಶ್ರೀ ಕರಾಳೆ – 70ಕೆ.ಜಿ ವಿಭಾಗದಲ್ಲಿ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾಳೆ ಹಾಗೂ ಸರಕಾರಿ ಪ್ರೌಢಶಾಲೆ ಲಚ್ಯಾಣ ಶಾಲೆಯ ವಿದ್ಯಾರ್ಥಿನಿಯಾದ ಶೀತಲ ರಾಠೋಡ 65ಕೆ.ಜಿ ವಿಭಾಗದಲ್ಲಿ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಿ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾಳೆ. ಶ್ರೀ ಸಂಗನಬಸವೇಶ್ವರ ಕೃಷಿ ಮಾಧ್ಯಮಿಕ ಶಾಲೆ ಲಚ್ಯಾಣ ಶಾಲೆಯ ವಿದ್ಯಾರ್ಥಿನಿಯಾದ ಭಾಗ್ಯ ಶ್ರೀ ಕರಾಳೆ ಇವಳ ಸಾಧನೆಗಾಗಿ ಸಚಿವರು ಹಾಗೂ ಬಿ.ಎಲ್.ಡಿ.ಇ ಸಂಸ್ಥೆಯ ಅಧ್ಯಕ್ಷರಾದ ಎಮ್.ಬಿ.ಪಾಟೀಲ,ಮಾನ್ಯ ವಿಧಾನ ಪರಿಷತ್ತು ಸದಸ್ಯರಾದ ಎಸ್.ಬಿ.ಪಾಟೀಲ,ಸಂಸ್ಥೆಯ ಆಡಳಿತ ಅಧಿಕಾರಿಗಳಾದ ಬಿ.ಆರ್.ಪಾಟೀಲ ಹಾಗೂ ಮುಖ್ಯ ಗುರುಗಳಾದ ಪಿ.ಎಸ್.ನಾಯಿಕ,ವಿದ್ಯಾರ್ಥಿ ಸಾಧನೆಯ ಮಾರ್ಗದರ್ಶನ ದೈಹಿಕ ಶಿಕ್ಷಣ ಶಿಕ್ಷಕರಾದ ಶಂಕರ ಚವ್ಹಾಣ ಹಾಗೂ ಹಿರಿಯ ಶಿಕ್ಷಕರಾದ ಎಚ್.ಪಿ.ದಾನರಡ್ಡಿ,ಎಸ್.ಎಸ್.ಪಾಟೀಲ,ಆರ್.ಪಿ.ಕಾಂಬಳೆ,ಬಿ.ಎ.ಪೂಜಾರಿ,ಆರ್.ಕೆ.ಸಕ್ಕರಶೆಟ್ಟಿ,ಎಸ್.ಪಿ.ತೋರವಿ,ಸೋಮನಗೌಡ ಪಾಟೀಲ, ಎಸ್.ಪಿ.ಶಿರಗಾ, ಎಸ್.ಎಸ್.ನಾಯ್ಕೋಡಿ,ಎ. ಎಸ್.ಬಡಚಿ,ಹಣಮಂತ ಹದಗಲ ಹಾಗೂ ಬಿ.ಜೆ.ಹಂಗರಗಿ ಹಾಗೂ ಸಮಸ್ತ ಲಚ್ಯಾಣ ಗ್ರಾಮದ ಗುರು ಹಿರಿಯರು ವಿದ್ಯಾರ್ಥಿನಿಯರ ಸಾಧನೆಗಾಗಿ ಅಭಿನಂದಿಸಿದ್ದಾರೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
ಕರುನಾಡಕಂದ ಸುದ್ದಿಪತ್ರಿಕೆ ಮತ್ತು ಆನ್‌ಲೈನ್ ತಾಣದ "ಕರುನಾಡ ಕಂದ ಜನಜಾಗೃತಿ ವೇದಿಕೆಯ ವಿಶೇಷ ಪುಟಕ್ಕೆ ಭೇಟಿ ನೀಡಿ