ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

ಕರುನಾಡಕಂದ ಸುದ್ದಿಪತ್ರಿಕೆ ಮತ್ತು ಆನ್‌ಲೈನ್‌ ತಾಣದ "ಕರುನಾಡ ಕಂದ ಜನಜಾಗೃತಿ ವೇದಿಕೆಯ ವಿಶೇಷ ಪುಟಕ್ಕೆ ಭೇಟಿ ನೀಡಿ

ಹರಳಹಳ್ಳಿ ಗ್ರಾಮ ಪಂಚಾಯತಿ ಕಟ್ಟಡ ಉದ್ಘಾಟನೆ

ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕು-ಹರಳಹಳ್ಳಿ ಗ್ರಾಮ ಪಂಚಾಯತಿ ಕಟ್ಟಡ ಉದ್ಘಾಟನೆಯನ್ನು ಸಂಸದೆ ಡಾ, ಪ್ರಭಾ ಮಲ್ಲಿಕಾರ್ಜುನ್ ಮಾಡಿದರು.
ಹೊನ್ನಾಳಿ ತಾಲೂಕಿನ ಮಹಿಳೆಯರಿಗೆ ಉದ್ಯೋಗ ಕೊಡುವ ದೃಷ್ಟಿಯಿಂದ ಗಾರ್ಮೆಂಟ್ ಫ್ಯಾಕ್ಟರಿ ಸ್ಥಾಪನೆಗೆ ಚಿಂತಿಸಲಾಗಿದೆ ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ತಿಳಿಸಿದರು.
ತಾಲೂಕಿನ ಹರಳಹಳ್ಳಿಯಲ್ಲಿ 60ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ಗ್ರಾಮ ಪಂಚಾಯಿತಿ ನೂತನ ಕಟ್ಟಡವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿ,
ಈ ಮೂಲಕ ಸ್ತ್ರೀ ಸಬಲೀಕರಣಕ್ಕೆ ಒತ್ತು ನೀಡಲಾಗುವುದು ಎಂದರು.
ಸಂಸದರ ಹೇಳಿಕೆಗೆ ಶಾಸಕ ಡಿ.ಜಿ.ಶಾಂತನಗೌಡರು ಕೂಡ ಸ್ಪಂದಿಸಿದ್ದು ತಾಲೂಕಿಗೆ ಗಾರ್ಮೆಂಟ್ ಮಂಜೂರು ಮಾಡಿಸಿದರೆ ಹೊನ್ನಾಳಿಯಲ್ಲಿ 10 ಎಕರೆ ಜಾಗ ಕೊಡುವುದಾಗಿ ಘೋಷಿಸಿದರು.
ಬಳಿಕ ಮಾತನಾಡಿದ ಸಂಸದರು, ಸಾರಥಿ ಬಳಿ ಐಟಿ-ಬಿಟಿ ಕಂಪನಿ ಸ್ಥಾಪನೆಗೆ ಸಂಬಂಧಿತ ಸಚಿವರಿಗೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಸೂರಗೊಂಡನಕೊಪ್ಪದಲ್ಲಿ ರೈಲು ಮಾರ್ಗ ನಿರ್ಮಾಣಕ್ಕೆ ಸಮೀಕ್ಷೆ ನಡೆದಿದೆ ಎಂದು ಮಾಹಿತಿ ನೀಡಿದರು.
ಶಾಸಕ ಡಿ.ಜಿ. ಶಾಂತನಗೌಡ ಮಾತನಾಡಿ, ಘನತ್ಯಾಜ್ಯ ವಿಲೇವಾರಿ ಘಟಕ ನಿಧಾನ ಸ್ಥಗಿತ ಆಗುತ್ತಿದ್ದು ಕಸ ಸಾಗಣೆಯ ಆಟೋಗಳು ಕೆಲಸವಿಲ್ಲದೇ ತುಕ್ಕು ಹಿಡಿದು ಗುಜರಿ ಸೇರುವ ಸ್ಥಿತಿಗೆ ಬಂದಿವೆ ಎಂದರು.
ಮಹಿಳೆಯರಿಗೆ ಕೆಲಸವಿಲ್ಲ ಕಾರಣ ಜನರು ವಂತಿಗೆ ಕೊಡುತ್ತಿಲ್ಲ. ವಿಧಾನ ಪರಿಷತ್‌ನಲ್ಲಿ ಚರ್ಚಿಸಿ ವಂತಿಗೆ ಕೊಡಿಸಲು ಸದಸ್ಯ ಡಿ.ಎಸ್. ಅರುಣ್ ಕುಮಾರ್ ಅವರಿಗೆ ಸಲಹೆ ನೀಡಿದರು. ಇದೇ ವೇಳೆ ಜಗಜ್ಯೋತಿ ಬಸವೇಶ್ವರ ಸಮುದಾಯ ಭವನಕ್ಕೆ 10 ಲಕ್ಷ ರೂ. ಅನುದಾನದ ಭರವಸೆ ನೀಡಿದರು. ವಿಧಾನಪರಿಷತ್ ಸದಸ್ಯ ಅರುಣ್‌ಕುಮಾ‌ರ್ ಮಾತನಾಡಿ, ಗ್ರಾಪಂಗಳಿಗೆ ಅನುದಾನ ಕೂಡ ಕಡಿಮೆ ಆಗುತ್ತಿದೆ. ಈ ಬಗ್ಗೆ ಶಾಸಕರು ಗಮನಹರಿಸಬೇಕು ಎಂದರು. ನನ್ನ ಅನುದಾನದಡಿ ಗ್ರಾ‌.ಪಂ. ಕಟ್ಟಡಕ್ಕೆ ಶೀಟ್ ಹಾಕಿಸಿಕೊಡುವುದಾಗಿಹೊನ್ನಾಳಿ ತಾಲೂಕಿನ ಮಹಿಳೆಯರಿಗೆ ಉದ್ಯೋಗ ಕೊಡುವ ದೃಷ್ಟಿಯಿಂದ ಗಾರ್ಮೆಂಟ್ ಫ್ಯಾಕ್ಟರಿ ಸ್ಥಾಪನೆಗೆ ಚಿಂತಿಸಲಾಗಿದೆ ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ತಿಳಿಸಿದರು.
ತಾಲೂಕಿನ ಹರಳಹಳ್ಳಿಯಲ್ಲಿ 60ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ಗ್ರಾಮ ಪಂಚಾಯಿತಿ ನೂತನ ಕಟ್ಟಡವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿ,ಈ ಮೂಲಕ ಸ್ತ್ರೀ ಸಬಲೀಕರಣಕ್ಕೆ ಒತ್ತು ನೀಡಲಾಗುವುದು ಎಂದರು.
ಸಂಸದರ ಹೇಳಿಕೆಗೆ ಶಾಸಕ ಡಿ.ಜಿ.ಶಾಂತನಗೌಡರು ಕೂಡ ಸ್ಪಂದಿಸಿದ್ದು ತಾಲೂಕಿಗೆ ಗಾರ್ಮೆಂಟ್ ಮಂಜೂರು ಮಾಡಿಸಿದರೆ ಹೊನ್ನಾಳಿಯಲ್ಲಿ 10 ಎಕರೆ ಜಾಗ ಕೊಡುವುದಾಗಿ ಘೋಷಿಸಿದರು.
ಬಳಿಕ ಮಾತನಾಡಿದ ಸಂಸದರು, ಸಾರಥಿ ಬಳಿ ಐಟಿ-ಬಿಟಿ ಕಂಪನಿ ಸ್ಥಾಪನೆಗೆ ಸಂಬಂಧಿತ ಸಚಿವರಿಗೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಸೂರಗೊಂಡನಕೊಪ್ಪದಲ್ಲಿ ರೈಲು ಮಾರ್ಗ ನಿರ್ಮಾಣಕ್ಕೆ ಸಮೀಕ್ಷೆ ನಡೆದಿದೆ ಎಂದು ಮಾಹಿತಿ ನೀಡಿದರು.
ಶಾಸಕ ಡಿ.ಜಿ. ಶಾಂತನಗೌಡ ಮಾತನಾಡಿ, ಘನತ್ಯಾಜ್ಯ ವಿಲೇವಾರಿ ಘಟಕ ನಿಧಾನ ಸ್ಥಗಿತ ಆಗುತ್ತಿದ್ದು ಕಸ ಸಾಗಣೆಯ ಆಟೋಗಳು ಕೆಲಸವಿಲ್ಲದೇ ತುಕ್ಕು ಹಿಡಿದು ಗುಜರಿ ಸೇರವು ಸ್ಥಿತಿಗೆ ಬಂದಿವೆ ಎಂದರು.
ಮಹಿಳೆಯರಿಗೆ ಕೆಲಸವಿಲ್ಲ ಕಾರಣ ಜನರು ವಂತಿಗೆ ಕೊಡುತ್ತಿಲ್ಲ. ವಿಧಾನ ಪರಿಷತ್‌ನಲ್ಲಿ ಚರ್ಚಿಸಿ ವಂತಿಗೆ ಕೊಡಿಸಲು ಸದಸ್ಯ ಡಿ.ಎಸ್. ಅರುಣ್ ಕುಮಾರ್ ಅವರಿಗೆ ಸಲಹೆ ನೀಡಿದರು. ಇದೇ ವೇಳೆ ಜಗಜ್ಯೋತಿ ಬಸವೇಶ್ವರ ಸಮುದಾಯ ಭವನಕ್ಕೆ 10 ಲಕ್ಷ ರೂ. ಅನುದಾನದ ಭರವಸೆ ನೀಡಿದರು. ವಿಧಾನಪರಿಷತ್ ಸದಸ್ಯ ಅರುಣ್‌ಕುಮಾ‌ರ್ ಮಾತನಾಡಿ, ಗ್ರಾಪಂಗಳಿಗೆ ಅನುದಾನ ಕೂಡ ಕಡಿಮೆ ಆಗುತ್ತಿದೆ. ಈ ಬಗ್ಗೆ ಶಾಸಕರು ಗಮನಹರಿಸಬೇಕು ಎಂದರು. ನನ್ನ ಅನುದಾನದಡಿ ಗ್ರಾಪಂ ಕಟ್ಟಡಕ್ಕೆ ಶೀಟ್ ಹಾಕಿಸಿಕೊಡುವುದಾಗಿತಿಳಿಸಿದರು. ಸ್ವಾಗತ ಸಮಿತಿ ಅಧ್ಯಕ್ಷ ಎಚ್.ಬಿ. ಬೆನಕಪ್ಪ ಮಾತನಾಡಿ, ನರೇಗಾ ಹಾಗೂ ಗ್ರಾಪಂ ಅನುದಾನದಡಿ 60 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಿಸಲಾಗಿದೆ. 380 ನಿವೇಶನಗಳನ್ನು ಹಂಚಿಕೆ ಮಾಡಲು ಎಲ್ಲ ವ್ಯವಸ್ಥೆತಿಳಿಸಿದರು. ಸ್ವಾಗತ ಸಮಿತಿ ಅಧ್ಯಕ್ಷ ಎಚ್.ಬಿ. ಬೆನಕಪ್ಪ ಮಾತನಾಡಿ, ನರೇಗಾ ಹಾಗೂ ಗ್ರಾಪಂ ಅನುದಾನದಡಿ 60 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಿಸಲಾಗಿದೆ. 380 ನಿವೇಶನಗಳನ್ನು ಹಂಚಿಕೆ ಮಾಡಲು ಎಲ್ಲ ವ್ಯವಸ್ಥೆಮಾಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ದಾವಣಗೆರೆ ಜಿಲ್ಲಾ ಅಧ್ಯಕ್ಷರಾದ ಎಚ್.ಬಿ. ಮಂಜಪ್ಪ, ಪಿಡಿಒ ಎಂ.ವಿ. ರವಿ, ದಾವಣಗೆರೆ ಡಿಸಿಸಿ ಬ್ಯಾಂಕಿನ ಸದಸ್ಯರಾದ
ಡಿ.ಜಿ. ವಿಶ್ವನಾಥ್ ಮಾತನಾಡಿದರು. ಗ್ರಾಮ ಪಂಚಯಿತಿ ಅಧ್ಯಕ್ಷೆ ಆಶಾ ಬಸವರಾಜ್‌, ಉಪಾಧ್ಯಕ್ಷೆ ಗಾಯಿತ್ರಿ ಸುರೇಶ್, ಸದಸ್ಯರಾದ ನಿರ್ಮಲಾ ವಿರೂಪಾಕ್ಷಪ್ಪ, ರಾಧಾ ನವೀನ ಕುಮಾರ್, ಎಚ್.ಬಿ. ವೀರೇಶ್, ಒ.ಎಚ್. ವೆಂಕಟೇಶ್, ಕೆ.ಎನ್. ನಿಂಗಪ್ಪ, ಡಿ. ಹಾಲೇಶಪ್ಪ, ಸುನೀತಾ ರಾಜಪ್ಪ, ಪಟ್ಟಣ ಪಂಚಾಯಿತಿ ಮಾಜಿ ಸದಸ್ಯರಾದ ಎಚ್.ಡಿ. ವಿಜೇಂದ್ರಪ್ಪ, ಹೊನ್ನಾಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಣ್ಣಕ್ಕಿ ಬಸವನಗೌಡ ಉಪಸ್ಥಿತರಿದ್ದರು.
ಮಾದರಿ ಗ್ರಾಮ ಪಂಚಾಯಿತಿ ಹರಳಹಳ್ಳಿ ಗ್ರಾಪಂ ನೂತನ ಕಟ್ಟಡದ ಒಂದೇ ಸೂರಿನಲ್ಲಿ ಅಂಚೆ ಕಚೇರಿ, ಗ್ರಂಥಾಲಯ, ಗ್ರಾಮ ಒನ್ ಸೇರಿ ಇತರ ಸೇವೆಗಳು ಸಿಗುವಂತೆ ಕಟ್ಟಡ ನಿರ್ಮಿಸಿದ್ದು ಶ್ಲಾಘನೀಯ, ಜಿಲ್ಲೆಯಲ್ಲಿ ಇದೊಂದು ಮಾದರಿ ಗ್ರಾಪಂ ಕಟ್ಟಡ,
ಸಣ್ಣ ಪುಟ್ಟ ಕೆಲಸ ಗಳಿಗೆ ರೈತರನ್ನು ಅಲೆದಾಡಿಸಬೇಡಿ ಗ್ರಾಮ ಪಂಚಾಯಿತಿ ಹಂತದಲ್ಲೇ ಪೂರ್ಣಗೊಳಿಸಿ ಎಂದು ಡಾ.ಪ್ರಭಾ ಮಲ್ಲಿಕಾರ್ಜುನ್ ಸಲಹೆ ತಿಳಿಸಿದರು.
ಅಧಿಕಾರ ವಿಕೇಂದ್ರೀಕರಣದ ಆಶಯಕ್ಕೆ ಪೂರಕವಾಗಿ ಗ್ರಾಮ ಪಂಚಾಯಿತಿಗಳು ಜನಸ್ನೇಹಿ ಆಡಳಿತಕ್ಕೆ ಆದ್ಯತೆ ನೀಡಬೇಕು ಎಂದು ಸಂಸದೆ ಡಾ.ಪ್ರಭಾ ಆಶಿಸಿದರು. ಇ-ಸ್ವತ್ತು, ಗೃಹ ಶೌಚಾಲಯ ಚರಂಡಿ, ಬೀದಿ ದೀಪಗಳು ನೈರ್ಮಲ್ಯದಂತಹ ಸಣ್ಣ ಪುಟ್ಟ ಕೆಲಸಗಳಿಗೆ ಶಾಸಕರು, ಸಂಸದರು ಬಳಿಗೆ ಬರುವ ಬದಲು ಗ್ರಾಮ ಪಂಚಾಯಿತಿಯ ಪಿಡಿಒ, ಕಾರ್ಯದರ್ಶಿ ಸಿಬ್ಬಂದಿಗಳ ಮತ್ತು ಚುನಾಯಿತ ಸದಸ್ಯರ ಹಂತದಲ್ಲೇ ಪರಿಹಾರ ಕಂಡುಕೊಳ್ಳಲು ಸಲಹೆ ನೀಡಿ ಬೇಕು. ಶಾಲಾ- ಕಾಲೇಜು ಕಟ್ಟಡ, ರಸ್ತೆ ಅಭಿವೃದ್ಧಿ ಸೇರಿ ದೊಡ್ಡ-ದೊಡ್ಡ ಯೋಜನೆಗಳಿಗೆ ಪ್ರಸ್ತಾವನೆ ಸಲ್ಲಿಸಿದರೆ ಅದಕ್ಕೊಂದು ಅರ್ಥವಿರುತ್ತದೆ. ನಾವು ಕೂಡ ಸಹಕಾರ ನೀಡುತ್ತೇವೆ ಎಂದು ಸಂಸದ ಡಾ,ಪ್ರಭಾ ಮಲ್ಲಿಕಾರ್ಜುನ್ ಭರವಸೆ ನೀಡಿದರು.

ವರದಿ ಪ್ರಭಾಕರ್ ಡಿ ಎಂ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ