ಹುನಗುಂದ : ಪಟ್ಟಣದ ವಿ.ಎಂ.ಕೆ.ಎಸ್.ಆರ್. ವಸ್ತ್ರದ ಕಲಾ, ವಿಜ್ಞಾನ ಹಾಗೂ ವಿ.ಎಸ್. ಬೆಳ್ಳಿಹಾಳ ವಾಣಿಜ್ಯ ಮಹಾವಿದ್ಯಾಲಯ, ಕನ್ನಡ ವಿಭಾಗ, ಕನ್ನಡ ಸಂಘ ಹಾಗೂ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ಮಹಾವಿದ್ಯಾಲಯದ ಸಭಾಂಗಣದಲ್ಲಿ ನ.೧೦ ರಂದು ಬೆಳಿಗ್ಗೆ ೧೦:೩೦ ಗಂಟೆಗೆ ಡಾ.ತಿಪ್ಪೇಸ್ವಾಮಿ ಡಿ.ಎಸ್. ಅವರು ರಚಿಸಿದ ಮೂರು ಸಂಶೋಧನಾ ಗ್ರಂಥಗಳನ್ನು ಲೋಕಾರ್ಪಣೆ ಸಮಾರಂಭ ಜರುಗಲಿದೆ.
ಚಿತ್ತರಗಿ ಸಂಸ್ಥಾನ ಮಠ ಇಳಕಲ್ಲದ ಗುರು ಮಹಾಂತ ಶ್ರೀಗಳು ಸಾನಿಧ್ಯ ವಹಿಸುವರು,ವಿ.ಮ.ವಿ.ವ.ಸಂಘದ ಗೌರವ ಕಾರ್ಯದರ್ಶಿ ಡಾ.ಮಹಾಂತೇಶ ಕಡಪಟ್ಟಿ ಅಧ್ಯಕ್ಷತೆಯನ್ನು ವಹಿಸುವರು.ಪ್ರೊ.ಮಹೇಶ ತಿಪಶೆಟ್ಟಿ ಹುನಗುಂದ ತಾಲೂಕಿನ ಜನಪದ ವ್ಯೆದ್ಯರು ಎಂಬ ಪುಸ್ತಕಾವಲೋಕನ ಮಾಡುವರು.ಡಾ.ಸದಾಶಿವ ಮರ್ಜಿ ಬಹುಮುಖಿ ಸಾಹಿತ್ಯ ಮತ್ತು ಸಂಸ್ಕೃತಿ ಬಗ್ಗೆ ಮಾತನಾಡಲಿದ್ದಾರೆ.ಡಾ.ರಾಜಶೇಖರ ಬಸುಪಟ್ಟದರು ಹುಡುಕಿದ ಹೊನ್ನು ಗ್ರಂಥದ ಬಗ್ಗೆ ಮಾತನಾಡಲಿದ್ದಾರೆ.ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ.ಎಸ್.ಕೆ.ಮಠ,ಡಾ. ಮುರ್ತುಜಾ ಒಂಟಿ, ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಲ್ಲಿಕಾರ್ಜುನ ಸಜ್ಜನ ಉಪಸ್ಥಿತರಿರುವರು ಎಂದು ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ.ತಿಪ್ಪೇಸ್ವಾಮಿ ಡಿ.ಎಸ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.