ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ಪ್ರವಾಸಿ ಮಂದಿರದಲ್ಲಿ ಸಭೆಯನ್ನು ತಾಲೂಕು ಘಟಕದ ವತಿಯಿಂದ ಹಮ್ಮಿಕೊಳ್ಳಲಾಯಿತು.
ಸುವರ್ಣ ಕರ್ನಾಟಕ ಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳುವ ಪ್ರಯುಕ್ತ ಇಂದು ಪ್ರವಾಸಿ ಮಂದಿರದಲ್ಲಿ ಕಸಾಪ ಅಧ್ಯಕ್ಷರಾದ ಶ್ರೀ ಎಸ್ ಕೆ ಬಿರಾದಾರ ,ಗೌರವ ಅಧ್ಯಕ್ಷರಾದ ಶ್ರೀ ಚನ್ನಮಲ್ಯಯ್ಯ ಹಿರೇಮಠ ಹಾಗೂ ಅನೇಕ ಗಣ್ಯರು ಮತ್ತು ಪದಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡು ಇದೇ ತಿಂಗಳಿನ ಮುಂಬರುವ ದಿನಗಳಲ್ಲಿ ಕವಿಗೋಷ್ಠಿ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಗೌರವ ಸನ್ಮಾನ ಹಾಗೂ ಇತರೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚಿಸಲಾಯಿತು.
ಇದೇ ಸಂದರ್ಭದಲ್ಲಿ ವಚನ ಸಾಹಿತ್ಯದ ನೂತನವಾಗಿ ತಾಲೂಕು ಅಧ್ಯಕ್ಷರಾಗಿ ಶ್ರೀ ಕಲ್ಯಾಣಕುಮಾರ ಸಂಗಾವಿ ಅಣ್ಣನವರಿಗೆ ಸರ್ವರೆಲ್ಲರೂ ಗೌರವಿಸಿ ಸನ್ಮಾನಿಸಲಾಯಿತು.
