ಕಲಬುರಗಿ: ಇತ್ತೀಚಿನ ದಿನಮಾನಗಳಲ್ಲಿ ಸಮಾಜ ಸೇವೆಯ ಹೆಸರಿನಲ್ಲಿ ರಾಜಕೀಯ ಗಣ್ಯ ವ್ಯಕ್ತಿಗಳು ಕಾರ್ಯಕರ್ತರಿಗೆ ಆಶ್ವಾಸನೆ ನೀಡಿ ನಿನಗೆ ಬಿ ಎಂ ಡಬ್ಲ್ಯೂ ಕಾರು ಕೊಡಿಸುತ್ತೇನೆ ನಿನಗೆ ದೊಡ್ಡ ವ್ಯಕ್ತಿಯನ್ನಾಗಿ ಮಾಡುತ್ತೇನೆ ಎಂದು ಹೇಳಿ ಕಾಗೆ ಹಾರಿಸಿ ಚಂದಮಾಮನ ಕಥೆ ಹೇಳಿ ಕಾರ್ಯಕರ್ತರನ್ನು ಯಾಮಾರಿಸುವುದು ಅವರಿಂದ ತಮ್ಮ ಬೇಳೆ ಬೇಯಿಸಿಕೊಳ್ಳುವುದು ಇತ್ತೀಚಿನ ದಿನಮಾನಗಳಲ್ಲಿ ಸರ್ವೆ ಸಾಮಾನ್ಯವಾದ ಸಂಗತಿಯಾಗಿದೆ. ಆದ್ದರಿಂದ ಕಾರ್ಯಕರ್ತರು ರಾಜಕಾರಣಿಗಳ ಪಲ್ಲಕ್ಕಿಯನ್ನು ಹೊರುವುದು ಬಿಟ್ಟು ಸ್ವತಂತ್ರವಾಗಿ ಬದುಕುವಂತೆ ಹುಟ್ಟು ಹೋರಾಟಗಾರ ಕಡು ಭ್ರಷ್ಟಾಚಾರ ವಿರೋಧಿ ಭ್ರಷ್ಟರ ಪಾಲಿನ ಯಮದೂತ ಸಮಾಜ ಸೇವಕರಾದ ಮಾಳಿಂಗರಾಯ ಕಾರಗೊಂಡ ಅವರು ಪಕ್ಷದ ಕಾರ್ಯಕರ್ತರಿಗೆ ಕಿವಿಮಾತು ಹೇಳಿದ್ದಾರೆ. ಗೊಸುಂಬೆಯಂತೆ ಬಣ್ಣ ಬದಲಾಯಿಸುವ ನವರಂಗಿ ರಾಜಕಾರಣಿಗಳಿಂದ ಆದಷ್ಟು ದೂರವಿರುವಂತೆ ಕಾರ್ಯಕರ್ತರಿಗೆ ಸಲಹೆ ನೀಡಿದ್ದಾರೆ.
