ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

ಕರುನಾಡಕಂದ ಸುದ್ದಿಪತ್ರಿಕೆ ಮತ್ತು ಆನ್‌ಲೈನ್‌ ತಾಣದ "ಕರುನಾಡ ಕಂದ ಜನಜಾಗೃತಿ ವೇದಿಕೆಯ ವಿಶೇಷ ಪುಟಕ್ಕೆ ಭೇಟಿ ನೀಡಿ

ನವೆಂಬರ 12 ರಂದು ರಾಮದುರ್ಗ ರೈಲ್ವೆ ಮಾರ್ಗಕ್ಕಾಗಿ ಒತ್ತಾಯಿಸಿ ಬೃಹತ್ ಪ್ರತಿಭಟನೆ

ಬೆಳಗಾವಿ/ರಾಮದುರ್ಗ: ಉತ್ತರ ಕರ್ನಾಟಕದ ಅಭಿವೃದ್ಧಿಗೆ ಪೂರಕವಾದ ರೈಲ್ವೆ ಯೋಜನೆಗಳನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿ ಹಲವಾರು ಹೋರಾಟಗಳು ನಡೆದಿವೆ. ಅದರ ಭಾಗವಾಗಿ ಬೆಳಗಾವಿ ಜಿಲ್ಲೆ ರಾಮದುರ್ಗದಲ್ಲಿ 2005 ರಿಂದ ರಾಮದುರ್ಗದಿಂದ ಶಿರಸಂಗಿ ಕಾಳಮ್ಮದೇವಿ, ಸವದತ್ತಿ ಯಲ್ಲಮ್ಮ ಹಾಗೂ ಅಲ್ಲಿಂದ ಧಾರವಾಡದವರೆಗೆ ರೈಲ್ವೆ ಮಾರ್ಗ ಆಗಬೇಕೆಂದು ನಿರಂತರ ಹೋರಾಟಗಳು ನಡೆದಿವೆ.

ರಾಮದುರ್ಗದಲ್ಲಿ ಹೋರಾಟ ನಡೆಯುತ್ತಿರುವ ಮೊದಲೇ ಬಾಗಲಕೋಟೆಯಲ್ಲಿ ರೈಲ್ವೆ ಮಾರ್ಗದ ಬೇಡಿಕೆ ಇಟ್ಟುಕೊಂಡು ಬಾಗಲಕೋಟದಿಂದ ಕುಡಚಿಯ ವರೆಗೆ ರೈಲ್ವೆ ಮಾರ್ಗ ಆಗಬೇಕೆಂದು ನಡೆದ ಸತತ ಹೋರಾಟದಿಂದ ಮಣಿದು ಕೊನೆಗೂ ಕೇಂದ್ರ ರಾಜ್ಯ ಸರಕಾರಗಳು ಬಾಗಲಕೋಟದಿಂದ ಕುಡಚಿಯವರೆಗೆ ರೈಲ್ವೆ ಮಾರ್ಗಕ್ಕೆ ಮಂಜೂರು ಮಾಡಿತು. ಅದರ ಅಂಗವಾಗಿ ಈಗಾಗಲೇ ಲೋಕಾಪೂರದ ವರೆಗೆ ರೈಲ್ವೆ ಮಾರ್ಗ ಬಂದಿದೆ.

ಈಗ ಲೋಕಾಪೂರದಿಂದ ಕುಡಚಿಯವರೆಗೆ ಕೆಲಸ ಪ್ರಾರಂಭಿಸಲಾಗಿದೆ. ಅಂದರೆ ಬಾಗಲಕೋಟೆಯ ಜನರು ಸತತ ಪ್ರಯತ್ನ ಪಟ್ಟು 30 ವರ್ಷ ಹೋರಾಟ ನಡೆಸಿ ಕೊನೆಗೂ ಯಶಸ್ವಿಯಾಗಿದ್ದಾರೆ.
ಅದರಂತೆಯೇ ಕಳೆದ 20 ವರ್ಷಗಳಿಂದ ರಾಮದುರ್ಗದ ಜನತೆಯೂ ಕೂಡ ರೈಲ್ವೆ ಮಾರ್ಗಕ್ಕಾಗಿ ಹೋರಾಟ ನಡೆಸುತ್ತಾ ಬಂದಿದ್ದಾರೆ. ಹೋರಾಟದ ಫಲವಾಗಿ 2016-17 ರಲ್ಲಿ ರೈಲ್ವೆ ಇಲಾಖೆಯು ಲೋಕಾಪೂರದಿಂದ ಧಾರವಾಡದವರೆಗೆ ಸರ್ವೆ ನಡೆಸಿ 2019 ರಲ್ಲಿ ಅಂದಾಜು ಪತ್ರಿಕೆಯನ್ನೂ ಹೊರಡಿಸಿತ್ತು. ಕೊನೆಗೆ ಅದನ್ನು ಕೆಲಸ ಮಾಡದೆ ತಿರಸ್ಕರಿಸಿದ್ದಾರೆ. ಇದನ್ನು ನಾವೆಲ್ಲರೂ ಖಂಡಿಸಲೇಬೇಕು.

ಈಗಾಗಲೇ ಲೋಕಾಪೂರದವರೆಗೆ ರೈಲ್ವೆ ಮಾರ್ಗ ಬಂದು ಬಿಟ್ಟಿದೆ!
ಲೋಕಾಪೂರದಿಂದ ರಾಮದುರ್ಗ, ಶಿರಸಂಗಿ, ಸವದತ್ತಿ ಮಾರ್ಗವಾಗಿ ಧಾರವಾಡದ ವರೆಗೆ ರೈಲ್ವೆ ಮಾರ್ಗ ಕೂಡಿಸಬೇಕೆಂದು ನಾವೆಲ್ಲರೂ ಪಕ್ಷಾತೀತವಾಗಿ, ಜ್ಯಾತ್ಯಾತೀತವಾಗಿ ಹೋರಾಟ ನಡೆಸಿ ರಾಮದುರ್ಗದ ಸಮಗ್ರ ಅಭಿವೃದ್ಧಿಗಾಗಿ ರೈತರ-ಕಾರ್ಮಿಕರ ವಿದ್ಯಾರ್ಥಿಗಳ ಮತ್ತು ಎಲ್ಲ ಜನರ ಅನುಕೂಲಕ್ಕಾಗಿ ಹೋರಾಟ ಯಶಸ್ವಿ ಮಾಡಬೇಕಾಗಿದೆ.

ಆದ್ದರಿಂದ ರಾಮದುರ್ಗಕ್ಕೆ ರೈಲ್ವೆ ಮಾರ್ಗ ಕಲ್ಪಿಸಬೇಕೆಂದು ಒತ್ತಾಯಿಸಿ ದಿನಾಂಕ 12-11-2024 ರಂದು ಬೆಳಿಗ್ಗೆ 10:30 ಗಂಟೆಗೆ ಪಟ್ಟಣದ ಶ್ರೀ ವೆಂಕಟೇಶ್ವರ ದೇವಸ್ಥಾನದಿಂದ ತೇರ ಬಜಾರ ಮೂಲಕ ಹಳೆ ಪೋಲೀಸ್ ಸ್ಟೇಷನ್‌ ದಿಂದ ಹಾದು ತಹಶೀಲ್ದಾರ ಕಚೇರಿವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಶ್ರೀಗಳ ನೆತ್ರೋತ್ವದಲ್ಲಿ ಸಂಬಂಧಪಟ್ಟ ಇಲಾಖೆಗೆ ತಹಶೀಲ್ದಾರ ಅವರ ಮೂಲಕ ಮನವಿ ಸಲ್ಲಿಸಲಾಗುವುದು.

ಆದ್ದರಿಂದ ರಾಮದುರ್ಗ ತಾಲೂಕಿನ ಎಲ್ಲಾ ಕಾರ್ಮಿಕರು, ರೈತರು, ವಿದ್ಯಾರ್ಥಿಗಳು, ಜನಪರ ಸಂಘಟನೆಗಳ ಹಾಗೂ ಸಂಘ-ಸಂಸ್ಥೆಗಳ ಎಲ್ಲ ಮುಖಂಡರು ಮತ್ತು ಚುನಾಯಿತ ಪ್ರತಿನಿಧಿಗಳು ಈ ಜನಪ್ರಿಯ ಹೋರಾಟದಲ್ಲಿ ಜಾತ್ಯತೀತವಾಗಿ ಪಕ್ಷಾತೀತವಾಗಿ ಪಾಲ್ಗೊಂಡು ಹೋರಾಟವನ್ನು ಯಶಸ್ವಿಗೊಳಿಸಬೇಕೆಂದು ರಾಮದುರ್ಗ ತಾಲೂಕಾ ರೈಲ್ವೆ ಹೋರಾಟ ಕ್ರಿಯಾ ಸಮಿತಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ