ಬಳ್ಳಾರಿ: ರಾಜ್ಯದ ಧೀಮಂತ ನಾಯಕ, ರೈತರ ಆಶಾಕಿರಣ, ಮಾಜಿ ಮುಖ್ಯಮಂತ್ರಿಗಳು ಸನ್ಮಾನ್ಯ ಬಿ ಎಸ್ ಯಡಿಯೂರಪ್ಪನವರು ಬಳ್ಳಾರಿ ಜಿಲ್ಲೆಯ ಸಂಡೂರು ವಿಧಾನಸಭಾ ಕ್ಷೇತ್ರದ ಮೈತ್ರಿ ಪಕ್ಷದ ಅಭ್ಯರ್ಥಿಯಾದ ಬಂಗಾರು ಹನುಮಂತು ಅವರ ಪರವಾಗಿ ಇಂದು ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಹಗರಿಬೊಮ್ಮನಹಳ್ಳಿಯ ಜನಪ್ರಿಯ ಶಾಸಕರಾದ ಶ್ರೀ ಕೆ ನೇಮಿರಾಜ ನಾಯ್ಕ, ದೇವದುರ್ಗದ ಶಾಸಕಿಯಾದ ಶ್ರೀಮತಿ ಕರಿಯಮ್ಮ ಅವರು ಬಳ್ಳಾರಿ ಜಿಲ್ಲೆಯ ಜೆಡಿಎಸ್ ಅಧ್ಯಕ್ಷರಾದ ಮಿನಳ್ಳಿ ತಾಯಣ್ಣ, ಹಗರಿಬೊಮ್ಮನಹಳ್ಳಿ ತಾಲೂಕು ಅಧ್ಯಕ್ಷರಾದ ವೈ ಮಲ್ಲಿಕಾರ್ಜುನ್, ಮುಖಂಡರಾದ ಬಾದಾಮಿ ಮೃತ್ಯುಂಜಯ ಇತರರು ಉಪಸ್ಥಿತರಿದ್ದರು.
ವರದಿಗಾರರು – ಎನ್ ಚಂದ್ರಗೌಡ