ಚಾಮರಾಜನಗರ/ಹನೂರು: ಸಮಾಜವನ್ನು ಮುನ್ನಡೆಗೆ ತೆಗೆದುಕೊಂಡು ಹೋಗಲು ಶಿಕ್ಷಣ ತುಂಬಾ ಮುಖ್ಯ ಆ ನಿಟ್ಟಿನಲ್ಲಿ ನೀವೆಲ್ಲರೂ ಶಿಕ್ಷಿತರಾಗಬೇಕು ಜೊತೆಗೆ ವಾಲ್ಮೀಕಿಯವರ ಹಿನ್ನಲೆ ತಿಳಿದು ಅವರ ಆದರ್ಶ ಗುಣಗಳನ್ನು ನಾವು ಬೆಳೆಸಿಕೊಳ್ಳಬೇಕು ಎಂದು ಶಾಸಕ ಎಂ.ಆರ್. ಮಂಜುನಾಥ್ ಅವರು ತಿಳಿಸಿದರು.
ಹನೂರು ಪಟ್ಟಣದ ಮಹದೇಶ್ವರ ಕ್ರೀಡಾoಗಣದಲ್ಲಿ ಹಮ್ಮಿಕೊಂಡಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ನಮ್ಮ ಮಕ್ಕಳಿಗೆ ಪೂರ್ವಿಕರ ಒಳ್ಳೆ ಗುಣಗಳನ್ನು ನಮ್ಮ ಮಕ್ಕಳಿಗೆ ಧಾರೆ ಎರೆಯಬೇಕು.
ಯುವ ಪೀಳಿಗೆ ಯಾವುದೇ ದುಶ್ಚಟಗಳಿಗೆ ಬಲಿಯಾಗಬಾರದು ಆ ನಿಟ್ಟಿನಲ್ಲಿ ಈ ಸಮಾಜವನ್ನು ಮೇಲೆತ್ತಲು ನಾನು ಸಹ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಜೊತೆಗೆ ಈ ಜನವಾಸ ಮಾಡುವ ಹಳ್ಳಿಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಲು ಮುಂದಾಗುತ್ತೇನೆ.
ಭೌಗೊಳಿಕವಾಗಿ ವಿಸ್ತಾರವುಳ್ಳ ನಮ್ಮ ಹನೂರು ವಿಧಾನ ಸಭಾ ಕ್ಷೇತ್ರದಲ್ಲಿ ಅತ್ಯಂತ ವಿಜೃಂಭಣೆಯಿಂದ ವಾಲ್ಮೀಕಿ ಜಯಂತಿ ಆಚರಣೆ ಮಾಡುತ್ತಿರುವುದು ಹೆಮ್ಮೆಯ ವಿಷಯ. ಹನೂರು ತಾಲೂಕು ಕೇಂದ್ರದಲ್ಲಿ ಈಗಾಗಲೇ ವಾಲ್ಮೀಕಿ ಸಮುದಾಯ ಭವನ ನಿರ್ಮಾಣಕ್ಕೆ ಸ್ಥಳ ಗುರುತು ಮಾಡಲಾಗಿದ್ದು ಸಮುದಾಯದ ಮುಖಂಡರುಗಳ ಸಹಕಾರದೊಂದಿಗೆ ಮುಂದಿನ ದಿನಗಳಲ್ಲಿ ಭೂಮಿ ಪೂಜೆಯನ್ನು ಸಹ ನೆರೆವೇರಿಸಲಾಗುವುದು.
ತಾಲೂಕು ಕೇಂದ್ರದಿಂದ ಮುಖ್ಯವಾಗಿ ಮಣಗಳ್ಳಿ ಬಂಡಳ್ಳಿ ರಸ್ತೆ, ಚಿಕ್ಕಲ್ಲೂರು ರಸ್ತೆಯ ಅಭಿವೃದ್ಧಿಗೆ ಈಗಾಗಲೇ ಕ್ರಮ ಕೈಗೊಂಡಿದ್ದು ಡಿಸೆಂಬರ್ ಅಂತ್ಯದಲ್ಲಿ ಅಥವಾ ಜನವರಿ ತಿಂಗಳಲ್ಲಿ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡುವ ಸಾಧ್ಯತೆ ಬಹುತೇಕ ಇದೆ ಈ ನಿಟ್ಟಿನಲ್ಲಿ ಕ್ಷೇತ್ರದ ಪ್ರತಿಯೊಂದು ರಸ್ತೆ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ ಎಂದು ತಿಳಿಸಿದರು.
ಬೆಂಗಳೂರು ಲೆಕ್ಕಪತ್ರ ಇಲಾಖೆ ಜಂಟಿ ನಿರ್ದೇಶಕರು ಕೆ.ಮಹದೇವ ಅವರು ಮುಖ್ಯ ಭಾಷಣಕಾರರಾಗಿ ಮಾತನಾಡಿ ಭಾರತದ ಬಗ್ಗೆ ತಿಳಿಯಬೇಕು ಎಂಬ ಹಿನ್ನಲೆ ರಾಮಾಯಣದ ಮೂಲಕ ಭಾರತದ ಚರಿತ್ರೆ ಕಟ್ಟಿದವರು ವಾಲ್ಮೀಕಿ ಭಾರತಕ್ಕೆ ಬೇಕಾಗಿರುವುದು ಅಹಿಂಸೆ ಹಾಗಾಗಿ ಅಹಿಂಸೆಯನ್ನು ಸ್ವತಂತ್ರ ಹೋರಾಟದಲ್ಲಿ ಇದನ್ನು ಅಳವಡಿಸಿಕೊಂಡರು.
ಅಂದು ಹೆಣ್ಣು ಕಷ್ಟ ಪಟ್ಟಂತೆ ಯಾರು ಸಹ ಪ್ರಸ್ತುತ ಸಮಾಜದಲ್ಲಿ ಯಾರು ಕಷ್ಟ ಪಡುವಾಗಿಲ್ಲ ಅಲ್ಲದೇ ಮದ್ಯ ಪಾನದ ಬಗ್ಗೆ ಚರ್ಚೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ ಮದ್ಯಕ್ಕೆ ಬಲಿಯಾಗಿ ನಮ್ಮ ಸಮಾಜ ಹದಗೆಡುತ್ತಿದೆ ಎಂದು ಕಳವಳ ವ್ಯಕ್ತಪಡಿಸಿ ವಾಲ್ಮೀಕಿ ಅವರ ಬಗ್ಗೆ ತಿಳಿಸಿಕೊಟ್ಟರು.
ಕಾರ್ಯಕ್ರಮಕ್ಕೂ ಮೊದಲು ಪಟ್ಟಣದ ಆರ್ ಎಂ ಸಿ ಆವರಣದಲ್ಲಿ ಶ್ರೀ ವಾಲ್ಮೀಕಿ ಅವರ ಭಾವಚಿತ್ರದ ರಥಕ್ಕೆ ಪೂಜೆ ಸಲ್ಲಿಸಿ ಮೆರವಣಿಗೆಗೆ ಶಾಸಕ ಮಂಜುನಾಥ್ ಅವರು ಚಾಲನೆ ನೀಡಿದರು. ಮೆರವಣಿಗೆಯಲ್ಲಿ ವಾದ್ಯ ಮೇಳದೊಂದಿಗೆ ಯುವಕರ ಸಮುದಾಯದ ಮುಖಂಡರು ಕುಣಿದು ಸಂಭ್ರಮಿಸಿದರು. ಪಟ್ಟಣದ ಮುಖ್ಯ ರಸ್ತೆಯಲ್ಲಿ ಸಾಗಿದ ಮೆರವಣಿಗೆ ಮಹದೇಶ್ವರ ಕ್ರೀಡಾಂಗಣದವರೆಗೆ ತಲುಪಿತು.
ಈ ಸಂದರ್ಭದಲ್ಲಿ ಉಪ ತಹಶೀಲ್ದಾರ್ ಧನಂಜಯ್, ಹನೂರು ತಾಲೂಕು ವೀರಶೈವ ಮಹಾಸಭಾ ಅಧ್ಯಕ್ಷ ಸೋಮಣ್ಣ ಒಡೆಯರಪಾಳ್ಳ, ತಾಲೂಕು ನಾಯಕ ಸಂಘ ಪುಟ್ಟ ವೀರ ನಾಯಕ, ಕೊಪ್ಪಾಳಿ ನಾಯಕ, ಹುತ್ತೂರು ಬಾಲುನಾಯಕ, ಪಟ್ಟಣ ಪಂ. ಉಪಾಧ್ಯಕ್ಷ ಆನಂದ್ ಕುಮಾರ್, ದೊಡ್ಡಿಸೀಗಾ ನಾಯಕ, ಚಂಗವಾಡಿ ರಾಚಪ್ಪ, ಬಂಡಳ್ಳಿ ವೆಂಕಟಾಚಲ ಸೇರಿದಂತೆ ಸಮುದಾಯದ ಮುಖಂಡರುಗಳ ಸಾರ್ವಜನಿಕರು ಹಾಜರಿದ್ದರು.
ವರದಿ ಉಸ್ಮಾನ್ ಖಾನ್